ಬೆ೦ಗಳೂರು,ಅ,20: ಶುಕ್ರವಾರ ದಕ್ಷಿಣ ಗೋವಾದಲ್ಲಿ ಇಬ್ಬರನ್ನು ಬಲಿತೆಗೆದುಕೊ೦ಡ ಸ್ಫೋಟ ಪ್ರಕರಣಕ್ಕೆ ಭಟ್ಕಳದ ಸ೦ಬ೦ಧದ ಕುರಿತು ಪೊಲೀಸರು ತನಿಖೆ ನಡೆಸುತ್ತಿ ದ್ದಾರೆ.
ಸ್ಪೋಟಕ್ಕೆ ಬಳಸಲಾದ ಸೋಟಕಗಳು ಕಳೆದ ಶನಿವಾರ ಭಟ್ಕಳದಲ್ಲಿ ಬಂಧಿಸಲಾಗಿರುವ ಮೂವರಿಂದ ವಶಪಡಿಸಿಕೊಳ್ಳಲಾಗಿರುವ ಅಪಾರ ಪ್ರಮಾಣದ ಸ್ಪೋಟಕದ ಭಾಗವಾಗಿರ ಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಭಟ್ಕಳದ ನಾಗರಾಜ ಸೋಮಯ್ಯ ದೇವಾಡಿಗ, ಜೆಟ್ಟಯ್ಯ ದೇವಾಡಿಗ ಹಾಗೂ ಆನಂದ ಮಂಜುನಾಥ ದೇವಾಡಿಗ ಎಂಬವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಸ್ಪೋಟಕಗಳನ್ನು ಸರಬರಾಜು ಮಾಡುತ್ತಿದ್ದರೆನ್ನಲಾಗಿದೆ.
ತೀರ ರಕ್ಷಕ ಪೊಲೀಸರು ಅವರಿಂದ ೧,೨೦೦ ಕಿ.ಗ್ರಾಂಗೂ ಅಧಿಕ ಅಮೋನಿಯಂ ನೈ ಟ್ರೇಟ್, ೩ ಸಾವಿರ ಇಲೆಕ್ಟ್ರಿಕ್ ಸೋಟಕ ಸಾಧನಗಳು ಹಾಗೂ ೫೦೦ ವಿದ್ಯುದೇತರ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಂಡಿದ್ದರೆಂದು ಹೇಳಲಾಗಿದೆ.
ಸಮುದ್ರ ಮಾರ್ಗದಲ್ಲಿ ಭಟ್ಕಳಕ್ಕೆ ಸ್ಪೋಟಕಗಳು ಬರುತ್ತಿರುವ ಬಗ್ಗೆ ಹಾಗೂ ಅವುಗಳನ್ನು ಸಣ್ಣ ಊರುಗಳಲ್ಲಿ ದಾಸ್ತಾನು ಮಾಡುತ್ತಿರುವ ಬಗ್ಗೆ ತಮಗೆ ಮಾಹಿತಿ ದೊರಕಿದೆಯೆಂದು ತೀರ ರಕ್ಷಕ ಪಡೆಯ ಅಧಿಕಾರಿ ಎಚ್.ಎಲ್ ನಂದಾ ಎಂಬವರು ತಿಳಿಸಿದ್ದಾರೆ.
ಬಂಧಿತ ಮೂವರು ಶಂಕಿತ ಭಯೋತ್ಪಾದಕರಲ್ಲ. ತಾವು ಭಟ್ಕಳದಲ್ಲಿ ವಶಪಡಿಸಿಕೊಳ್ಳ ಲಾದ ಹಾಗೂ ಗೋವಾ ಸೋಟಕ್ಕೆ ಬಳಸಲಾದ ಸ್ಪೋಟಕಗಳ ಪರೀಕ್ಷೆ ನಡೆಸಲಿದ್ದೇ ವೆಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಆರ್. ಇನಾಂಟ್ ಹೇಳಿದ್ದಾರೆ.
ಮಡ್ಗಾಂವ್ ಸ್ಪೋಟಕ್ಕೆ ತಾಣೆ-ಪನ್ವೆಲ್ ಸ್ಪೋಟಗಳ ಜೊತೆ ಸಾಮ: ಸಿಟ್
ಪಣಜಿ: ಸನಾತನ ಸಂಸ್ಥೆಯು ಕಳೆದ ವರ್ಷ ಮಹಾರಾಷ್ಟ್ರದ ವಾಶಿ,ಥಾಣೆ ಹಾಗೂ ಪನ್ವೇ ಲ್‌ಗಳಲ್ಲಿ ನಡೆಸಿದೆಯೆಂದು ಆರೋಪಿಸಲಾಗಿರುವ ಸ್ಪೋಟಗಳಿಗೂ ಗೋವಾದ ಮಡ್ಗಾಂ ವ್‌ನಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಸ್ಪೋಟಕ್ಕೂ ಕೆಲವು ಸಾಮ್ಯಗಳಿವೆಯೆಂದು ಗೋ ವಾ ಪೊಲೀಸ್‌ನ ವಿಶೇಷ ತನಿಖೆ ತಂಡ (ಸಿಟ್) ಅಭಿಪ್ರಾಯಿಸಿದೆ.
ಪನ್ವೇಲ್, ವಾಶಿ ಹಾಗೂ ಠಾಣೆಗಳಲ್ಲಿ ನಡೆದಿದ್ದ ಸ್ಪೋಟಗಳಿಗೆ ಕೆಲವು ಸಾಮ್ಯಗಳಿವೆ. ಆದರೆ ಮಾಲೆಗಾಂವ್ ಹಾಗೂ ಮಡ್ಗಾಂವ್ ಪೋಟಗಳ ನಡುವೆ ಯಾವುದೇ ಸಾಮ್ಯವಿಲ್ಲ ವೆಂದು ಪೊಲೀಸ್ ಉಪ ಮಹಾನಿರೀಕ್ಷಕ ರವೀಂದ್ರ ಯಾದವ್ ತಿಳಿಸಿದ್ದಾರೆ.
ತನ್ನ ಅಭಿಪ್ರಾಯಕ್ಕೆ ಸಮರ್ಥನೆ ನೀಡಿದ ಅವರು, ಠಾಣೆ, ವಾಶಿ ಹಾಗೂ ಪನ್ವೇಲ್ ಮತ್ತು ಮಡ್ಗಾಂವ್ ಸೋಟಗಳಲ್ಲಿ ಬಳಸಲಾದ ಸೋಟಕ ಸಾಧನಗಳು ಒಂದೇ ರೀತಿಯದಾಗಿವೆ ಎಂದಿದ್ದಾರೆ.
ಮಹಾರಾಷ್ಟ್ರ ಸ್ಪೋಟದ ಆರೋಪಿ ವಿಕ್ರಂ ವಿನು ಭಾವೆ ಎಂಬಾತ ಮಹಾರಾಷ್ಟ್ರ ಪೊಲೀಸ ರಿಂದ ಬಂಧನಕ್ಕೊಳಗಾಗುವ ಮೊದಲು ಮಡ್ಗಾಂವ್ ಸೋಟದಲ್ಲಿ ಮೃತಪಟ್ಟಿರುವ ಮಲ್ಗುಂಡೆ ಪಾಟೀಲನ ಸಂಪರ್ಕದಲ್ಲಿದ್ದನೆಂದು ಯಾದವ್ ಹೇಳಿದ್ದಾರೆ.
ಘಟನೆಯಲ್ಲಿ ಸನಾತನ ಸಂಸ್ಥೆಯ ಪಾತ್ರ ಸಾಬೀತಾಗಿದೆಯೇ ಎಂಬ ಪ್ರಶ್ನೆಗೆ, ಸದ್ಯ ತಾ ವು ಪಾಟೀಲನ ಪಾತ್ರವನ್ನು ಖಚಿತಪಡಿಸಿಕೊಂಡಿದ್ದೇವೆ. ಗೋವಾದಲ್ಲಿ ಸನಾತನ ಸಂಸ್ಥೆ ಯ ಆಡಳಿತದಾರನಾಗಿದ್ದ ಆತ, ಮಹಾರಾಷ್ಟ್ರದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಿದ ಆರೋಪ ಹೊಂದಿದ್ದಾನೆಂದು ಅವರುತ್ತರಿಸಿದ್ದಾರೆ.
ಕಳೆದ ಗಣೇಶೋತ್ಸವದ ವೇಳೆ ಮೀರಜ್‌ನಲ್ಲಿ ಹಿಂದೂ-ಮುಸ್ಲಿಂ ಹಿಂಸಾಚಾರ ನಡೆದ ವೇಳೆ ಪಾಟೀಲ ಸಾಂಗ್ಲಿಯಲ್ಲಿದ್ದನೆಂದು ಯಾದವ್ ಹೇಳಿದ್ದಾರೆ.
ಸಿಟ್, ಗೋವಾ ಸನಾತನ ಸಂಸ್ಥೆಯ ಹಿರಿಯ ಪದಾಧಿಕಾರಿಗಳ ವಿಚಾರಣೆ ನಡೆಸುತ್ತಿದೆ. ಕೇವಲ ಸಂಭವನೀಯತೆ ಹಾಗೂ ಸಾಧ್ಯತೆಯ ಮೇಲೆ ತಾವು ಕಾರ್ಯಾಚರಿಸುವಂತಿಲ್ಲ. ಆದುದರಿಂದ ಅಪರಾಧಿಗಳ ವಿರುದಟಛಿ ಪ್ರಬಲ ಮೊಕದ್ದಮೆ ಹೂಡಲು ಖಚಿತ ಪುರಾವೆ ಹೊಂದುವ ಪ್ರಯತ್ನ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಇನ್ನೊಬ್ಬ ಆರೋಪಿ ಯೋಗೇಶ್ ನಾಯಕ್ ಎಂಬಾತನ ಪಾತ್ರದ ಕುರಿತಾದ ಪ್ರಶ್ನೆಗೆ, ಯೋಗೇಶ ಸನಾತನ ಸಂಸ್ಥೆಗೆ ಹಾಲು ಹಾಗೂ ಪತ್ರಿಕೆ ಪೂರೈಸುತ್ತಿದ್ದನು ಹಾಗೂ ಸಂಸ್ಥೆ ಯ ಪತ್ರಿಕೆ ಮಾರಾಟ ಮಾಡಲು ಸಹಾಯ ಮಾಡುತ್ತಿದ್ದನು. ಆತನಿಗೆ ಸಂಘಟನೆಯ ಚಟುವಟಿಕೆಗಳಲ್ಲಿ ಅತೀವ ಆಸಕ್ತಿಯಿತ್ತೆಂದು ಯಾದವ್ ಉತ್ತರಿಸಿದ್ದಾರೆ.
ಗೋವಾ ಪೊಲೀಸರ ತಂಡವೊಂದು ಜಿಲೆಟಿನ್ ಕಡ್ಡಿಗಳನ್ನು ತಯಾರಿಸುವ `ಸೂರಜ್ ಎಕ್ಸ್‌ಪ್ಲೊಸಿವ್' ಘಟಕವಿರುವ ನಾಗಪುರಕ್ಕೆ ಹೋಗಿದೆ ಎಂದ ಅವರು, ಪ್ರಕರಣದ ಪ್ರಗ ತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಅದರಿಂದ ತನಿಖೆಗೆ ತೊಂದರೆಯಾಗಬಹು ದು ಎಂದಿದ್ದಾರೆ.
ಸಿಐಡಿ ವಿಶೇಷ ವಿಭಾಗವು ಪಾಟೀಲನ ಮೇಲೆ ಕಣ್ಣಿರಿಸಿತ್ತೆಂಬ ವರದಿಗಳತ್ತ ಗಮನ ಸೆಳೆ ದಾಗ, ಅಂತಹದೇನೂ ಇರಲಿಲ್ಲ ಎಂದು ಯಾದವ್ ಹೇಳಿದ್ದಾರೆ