ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: 5 ವರ್ಷಗಳಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ ಉದ್ಘಾಟನಾ ಭಾಷಣದಲ್ಲಿ ಈಶ್ವರ

ಬೆಂಗಳೂರು: 5 ವರ್ಷಗಳಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ ಉದ್ಘಾಟನಾ ಭಾಷಣದಲ್ಲಿ ಈಶ್ವರ

Tue, 15 Dec 2009 02:52:00  Office Staff   S.O. News Service
ಬೆಂಗಳೂರು, ಡಿ.14: ರಾಜ್ಯದ ಬೇಡಿಕೆಗೆ ಅನುಗುಣವಾಗಿ ಮುಂದಿನ ೫ ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸೋಮವಾರ ರಾಜ್ಯ ನಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವತಿಯಿಂದ ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ೧೦ ಸಾವಿರ ಮೆ.ವ್ಯಾ. ವಿದ್ಯುತ್ ಬೇಡಿಕೆಯಿದೆ. ಆದರೆ ಈಗ ೭ಸಾವಿರ ಮೆ.ವ್ಯಾ. ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಉಳಿದ ೩ ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ಜೇವರ್ಗಿ, ಘಟಪ್ರಭ, ಛತ್ತೀಸ್‌ಘಡ ಮುಂತಾದೆಡೆ ವಿದ್ಯುತ್ ಉತ್ಪಾದನಾ ಸ್ಥಾವರ ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆಗೆ ಇನ್ನು ೫ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಅದುವರೆಗೆ ವ್ಯರ್ಥ ಹಾಗೂ  ಸೋರಿಕೆಯಾಗು ತ್ತಿರುವ ವಿದ್ಯುತ್ತನ್ನು ತಡೆಯುವ ಮೂಲಕ ಈ ಬೇಡಿಕೆಯನ್ನು ನಿವಾರಿಸಬೇಕಾಗಿದ್ದು, ಸಾರ್ವಜ ನಿಕರು ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.

೨೦೧೨ನೆ ಸಾಲಿನ ವೇಳೆಗೆ ದೇಶದ ಎಲ್ಲ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ. ಇದರಿಂದ ಕೇಂದ್ರ ಕೂಡ ವಿದ್ಯುತ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಈಶ್ವರಪ್ಪ ನುಡಿದರು.

೬ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಜೈರಾಜ್ ಮಾತನಾಡಿ, ಮುಂದಿನ ೪ ವರ್ಷದಲ್ಲಿ ೬ ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಪುನರ್ ನಕೃತ ಇಂಧನ ಮೂಲದಿಂದ ವಿದ್ಯುತ್ ಉತ್ಪಾದನೆಗೆ ಯೋಜನೆಯನ್ನು ರೂಪಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಉತ್ತಮ ಗುಣಮಟ್ಟದ ವಿದ್ಯುತನ್ನು ಎಲ್ಲರಿಗೂ ಸರಬರಾಜು ಮಾಡಬೇಕೆಂಬ ಗುರಿ ಇಲಾಖೆ ಹೊಂದಿದೆ ಎಂದು ಜೈರಾಜ್ ಹೇಳಿದರು.

ವರ್ಷದಲ್ಲಿ ೪೪ ಸಾವಿರ ಮಿಲಿಯನ್ ಯೂನಿಟ್ ವಿದ್ಯುತ್ ಸರಬರಾಜು ಮಾಡಲಾ ಗುತ್ತಿದ್ದು, ಶೇ.೨೨ರಷ್ಟು ಅಂದರೆ ೮ರಿಂದ ೯ಸಾವಿರ ಯೂನಿಟ್ ವಿದ್ಯುತ್ ಸಾಗಣೆ ಹಾಗೂ ಪೂರೈಕೆಯಲ್ಲಿ ಸೋರಿಕೆಯಾಗುತ್ತಿದೆ. ೨೦೧೩ರ ಒಳಗೆ ಶೇ.೧೩ರಷ್ಟು  ಸೋರಿಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೆಪಿಟಿಸಿ‌ಎಲ್ ವ್ಯವಸ್ಥಾಪಕ ನಿರ್ದೇಶಕಿ ಲತಾ ಕೃಷ್ಣರಾವ್ ಮುಂತಾದವರು ಭಾಗವಹಿಸಿದ್ದರು.

Share: