ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಪುರಸಭಾ ಸದಸ್ಯರಾಗಿ ವಿಕ್ಟರ್ ಗೋಮ್ಸ ಆಯ್ಕೆ

ಭಟ್ಕಳ:ಪುರಸಭಾ ಸದಸ್ಯರಾಗಿ ವಿಕ್ಟರ್ ಗೋಮ್ಸ ಆಯ್ಕೆ

Sun, 15 Nov 2009 02:44:00  Office Staff   S.O. News Service
ಭಟ್ಕಳ, ನವೆಂಬರ್ 15: ಭಟ್ಕಳ ಪುರಸಭೆ ೫ನೇ ವಾರ್ಡಿನ ನೂತನ ಸದಸ್ಯರಾಗಿ ನ್ಯಾಯವಾದಿ ವಿಕ್ಟರ್ ಗೋಮ್ಸ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರಕ್ಕೆ ಸಲ್ಲಿಸಲಾದ ಏಕೈಕ ನಾಮಪತ್ರ ಇದಾಗಿದ್ದು, ಶುಕ್ರವಾರ ಅವರ ಆಯ್ಕೆಯನ್ನು ಅಧಿಕೃವಾಗಿ ಘೋಷಿಸಲಾಗಿದೆ.
 
ಹಾಲಿ ಅಧ್ಯಕ್ಷ ಪರ್ವೇಜ್ ಕಾಶೀಮ್ ಜಿ ಈ ಕ್ಷೇತ್ರದಿಂದಲೂ ಆಯ್ಕೆಯಾದ ಕಾರಣ, ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಗಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಿ.ಜೆ.ಫರ್ನಾಂಡೀಸ್ ಚುನಾವಣಾ ಅಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸಿದರು.


Share: