ಇದು ಮಾಧ್ಯಮಗಳಲ್ಲಿ ಪ್ರಕಟವಾದ ಇತ್ತೀಚಿನ ಒಂದು ಪ್ರಕರಣ ಅಷ್ಟೆ. ಇಂತಹ ಎಷ್ಟೋ ದಾರುಣ ಸಾವುಗಳು, ಸಹಜ ಸಾವುಗಳೆಂಬಂತಾಗಿ ಸತ್ತವರ ಹಸಿವಿನ ಸಂಕಟ ಸುದ್ದಿಯೇ ಆಗದೇ ದೇಹ ಮಸಣ ಸೇರುತ್ತಿರಬಹುದು. ಅಂತ್ಯೋದಯ,ಬಿಪಿಎಲ್, ಎಪಿಎಲ್, ನೆಮ್ಮದಿ ಕೇಂದ್ರದ ಕಾರ್ಡ್ ಗಳು, ಗ್ರಾಮೀಣ ಉದ್ಯೋಗ ಖಾತ್ರಿ, …. ಹೀಗೆ ಏನೇನೋ ಯೋಜನೆಗಳ ಮೇಲೆ ಯೋಜನೆಗಳು ಹೇಗೆ ಜಾರಿಯಾಗುತ್ತಿವೆ ಎಂಬುದಕ್ಕೂ ಕೂಡ ಇದು ಒಂದು ಮಾನದಂಡವಾಗಿದೆ. ಎಂದಿನಂತೆ ಸರ್ಕಾರದ ವತಿಯಿಂದ ಸ್ಪಷ್ಟತೆ ಬಂದಿದೆ. ಇದು ಹಸಿವಿನ ಸಾವಲ್ಲ ಎಂದು. ಸತ್ತ ಚಿಕ್ಕಸಿದ್ದಯ್ಯ ಮಾತನಾಡುವಂತಿದ್ದರೆ ಒಂದು ಮಾತು ಕೇಳಿಯೇಬಿಡಬಹುದಿತ್ತು. ಅದು ಆಗದು. ಸರ್ಕಾರಕ್ಕೂ ಅದು ಗೊತ್ಕಾ
ಅರಣ್ಯ ಅಭಿವೃದ್ಧಿ ಶುಲ್ಕ ಕಟ್ಟದೇ ಭಂಡಾಟ
ಅಗೆದು ಅಗೆದು ತೆಗೆಯುತ್ತಾ ಹೋದಂತೆ ಬಳ್ಳಾರಿ ಜಿಲ್ಲೆಯ ಕಬ್ಬಿಣದ ಅದಿರು ಖಾಲಿಯಾಗುತ್ತಾ ಹೋಗುತ್ತಿರಬಹುದು. ಆದರೆ ಅದರೊಂದಿಗೆ ಹೆಣೆದುಕೊಂಡಿರುವ ಹಗರಣ, ಭ್ರಷ್ಟತೆ ಮಾತ್ರ ಮುಗಿಯುವಂತೇ ಕಾಣುತ್ತಿಲ್ಲ. ಗಣಿ ಲೂಟಿಕೋರರ ಲೂಟಿಯ ನಾನಾ ಮುಖಗಳು ದಿನದಿನವೂ ಬಯಲಾಗುತ್ತಲೇ ಇವೆ. ಇದು ಮತ್ತೊಂದು ಮುಖ.
ಬಳ್ಳಾರಿ, ಸಂಡೂರು, ಹೊಸಪೇಟೆ ವಲಯಗಳಲ್ಲಿ ಗಣಿಗಾರಿಕೆ ನಡೆಸುವ `ಪ್ರಭಾವಿ‘ಗಳು 2008ರ ಮಾರ್ಚ್ ನಿಂದ 2009ರ ಮಾರ್ಚ್ ವರೆಗೆ 204.89 ಕೋಟಿಯಷ್ಟು ಅರಣ್ಯ ಅಭಿವೃದ್ಧಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಶುಲ್ಕ ಎಷ್ಟೆಲ್ಲಾ ಬಾಕಿ ಇದ್ದಾಗಲೂ ಗಣಿಗಾರಿಕೆ, ಅದಿರು ಸಾಗಣೆಗಂತೂ ಯಾವ ತೊಂದರೆಯೂ ಆಗಿಲ್ಲ. ಮಾಹಿತಿ ಹಕ್ಕು ಕಾಯ್ದೆ ಆಧಾರದಲ್ಲಿ ಬಾಕಿ ಇರಿಸಿಕೊಂಡವರ ಕುರಿತ ಮಾಹಿತಿ ಕೇಳಿದರೆ ಬಾಕಿ ಉಳಿಸಿಕೊಂಡ ಕಂಪನಿಗಳು ಯಾವುದೆಂಬ ವಿವರ ನೀಡಲು ಇಲಾಖೆ ನಿರಾಕರಿಸಿದೆ. ಕಂಪನಿಗಳ ಪ್ರಭಾವ ಅಷ್ಟಿದೆ.
ಕುರಿಕಾಯಿ ತೋಳ ಎಂದರೆ ಅದಕ್ಕಿಂತ ಸಿಹಿ ಸುದ್ದಿ. ತೋಳಕ್ಕೆ ಇನ್ನೇನಿದ್ದೀತು. ಗಣಿ ಲೂಟಿಯ ವಿಚಾರವಾಗಿ ಎಷ್ಟೆಲ್ಲಾ ಚಳುವಳಿ ಹೋರಾಟ, ವಾದ, ವಿವಾದ ನಡೆಯುತ್ತಿರುವಾಗಲೂ ಹೀಗೆ ನಡೆಯುತ್ತದೆ ಎಂದರೆ ಈ `ಪ್ರಭಾವಿ‘ಗಳ ಭಂಡತನವನ್ನು ಮೆಚ್ಚಲೇಬೇಕು. ಯಡಿಯೂರಪ್ಪನವರು ಅದನ್ನು ಮೆಚ್ಚಿಕೊಂಡದ್ದರಿಂದಲೇ ಅಲ್ಲವೇ? ಪ್ರಭಾವಿಗಳು ಸಚಿವರಾಗಿರುವುದು.
ಸೌಜನ್ಯ: ಜನಶಕ್ತಿ