ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ ಯುವತಿ ಕಾಣೆ. ಪತ್ತೆಗಾಗಿ ಮನವಿ.

ಕಾರವಾರ ಯುವತಿ ಕಾಣೆ. ಪತ್ತೆಗಾಗಿ ಮನವಿ.

Sat, 13 Apr 2024 06:50:50  Office Staff   S O News

ಕಾರವಾರ:  ಸುನೀತಾ ಕಿರಣ ಲಮಾಣಿ(20ವರ್ಷ), ಸಾ: ಲಕ್ಷಮೇಶ್ವರ, ಅಕ್ಕಿಗುಂದಿ, ಗದಗ. ಹಾಲಿ ಸೀಬರ್ಡ್ ಕಾಲೋನಿ, ಚಿತ್ತಾಕುಲ ಕಾರವಾರ ಇವರು ದಿನಾಂಕ:10-04-2024 ರಂದು ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೋದವಳು, ಮನೆಗೂ ಬಾರದೇ ಸಂಬAಧಿಕರ ಮನೆಗೂ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ.

ಕಾಣೆಯಾದ ಯುವತಿಯ ಚಹರೆ: ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, 5.5 ಅಡಿ ಎತ್ತರ, ಕನ್ನಡ, ಕೊಂಕಣಿ, ಲಮಾಣಿ ಭಾಷೆ ಮಾತನಾಡುತ್ತಾಳೆ. ಕಪ್ಪು ಬಣ್ಣದ ಪ್ಯಾಂಟ, ಬಿಳಿ ಬಣ್ಣದ ಟಾಪ, ಕಪ್ಪು ಬಣ್ಣದ ರವಿಕೆ (ಚೂಡಿದಾರ) ಧರಿಸಿದ್ದಾಳೆ.

ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆ ಪೋನ ಸಂಖ್ಯೆ: 08382-265733, ಮೊಬೈಲ್ ಸಂ: 9480805248 ಪೊಲೀಸ ವೃತ್ತ ನಿರೀಕ್ಷಕರು ಕದ್ರಾ ವೃತ್ತ ಪೋನ ಸಂಖ್ಯೆ: 08382- 265200. ಮೊಬೈಲ್ ಸಂ: 9480805231 ಉತ್ತರ ಕನ್ನಡ ಪೊಲೀಸ್ ಕಂಟ್ರೋಲ್ ರೂಂ ಸಂ:08382-226550 ನ್ನು ಸಂಪರ್ಕಿಸುವAತೆ ಚಿತ್ತಾಕುಲ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: