ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಪೊಂಗಲ್ ಹಬ್ಬ - ವಿಶೇಶ ಪೂಜೆ ಆಚರಿಸಿದ ಆದಿದ್ರಾವಿಡ ಯುವಕ ಸಂಘ

ಸಕಲೇಶಪುರ: ಪೊಂಗಲ್ ಹಬ್ಬ - ವಿಶೇಶ ಪೂಜೆ ಆಚರಿಸಿದ ಆದಿದ್ರಾವಿಡ ಯುವಕ ಸಂಘ

Sat, 16 Jan 2010 17:58:00  Office Staff   S.O. News Service
ಸಕಲೇಶಪುರ, ಜನವರಿ 16: ಪೊಂಗಲ್ ಹಬ್ಬದ ಪ್ರಯುಕ್ತ ಆದಿದ್ರಾವಿಡ ಯುವಕ ಸಂಘದ ವತಿಯಿಂದ ವಿಶೇಷ ಪೂಜೆ ಕಾರ್ಯಕ್ರಮ ಕುಶಾಲನಗರ ಬಡಾವಣೆಯ ಆದಿಶಕ್ತಿ ದೇವಸ್ಥಾನದಲ್ಲಿ ಗುರುವಾರ ನಡೆಯಿತು.
 
ಬೆಳಿಗ್ಗೆ ೬ ಗಂಟೆಯಿಂದ ವಿಶೇಷ ಪೂಜೆ ನಡೆಸಿ ಜಗತ್ತಿನ ಶಾಂತಿಗಾಗೆ ಪ್ರಾರ್ಥನೆ ಸಲ್ಲಿಸಿದರು. ವಿವಿದ ರೀತಿಯ ಅಡುಗೆಯನ್ನು ಒಂದೆ ಸ್ಥಳದಲ್ಲಿ ಮಾಡಿ ಸಹ ಬೋಜನ ನಡೆಸಿದರು.
 
ಈ ವಿಶೇಷ ಪೂಜೆಯಲ್ಲಿ ಬಾಗವಹಿಸಿದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಪುರಸಭೆಯ ಅಧ್ಯಕ್ಷ ಇಬ್ರಾಹಿಂ ಯಾದ್‌ಗಾರ್ ಮಾತನಾಡಿ, ಊರಿನ ಹಿತಕ್ಕಾಗಿ ನಿಸ್ವಾರ್ಥದಿಂದ ದಿನನಿತ್ಯ ಶ್ರಮವಹಿಸಿ ಸೇವೆ ಮಾಡುವ ಪೌರಕಾರ್ಮಿಕರು, ಜನರ ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿರುವ ಅತ್ಯಂತ ಗೌರವಯುತವಾದ ಕೆಲಸವಾಗಿದೆ ಎಂದು ಹೇಳಿದರು.
 
ಪೌರಕಾರ್ಮಿಕರು ಬದುಕಿನ ಅಬಿವೃದ್ಧಿಗಾಗಿ ಪುರಸಭೆಯಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
 
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಜೈಭೀಮ್ ಮಂಜುನಾಥ್, ವರಮಹಲಕ್ಷ್ಮಿ, ಪತ್ರಕರ್ತ ಮಲ್ನಾಡ್ ಮೆಹಬೂಬ್, ಆದಿಶಕ್ತಿ ದ್ರಾಮಿಡ ಸಂಘದ ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಬನ್ನಾರಿ ಮುಂತಾದವರು ಇದ್ದರು.


Share: