ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಹಲ್ಲೆ - ಚರ್ಚುಗಳ ಮೇಲೆ ಪ್ರತೀಕಾರ - ಬಾಲಿಶ ಹೇಳಿಕೆ-ಅಂಥೋನ್ ಫೆರ್ನಾಂಡಿಸ್ ಖಂಡನೆ

ಕಾರವಾರ: ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಹಲ್ಲೆ - ಚರ್ಚುಗಳ ಮೇಲೆ ಪ್ರತೀಕಾರ - ಬಾಲಿಶ ಹೇಳಿಕೆ-ಅಂಥೋನ್ ಫೆರ್ನಾಂಡಿಸ್ ಖಂಡನೆ

Fri, 22 Jan 2010 19:37:00  Office Staff   S.O. News Service
ಕಾರವಾರ, ಜನವರಿ 22: ಇತ್ತಿಚೆಗೆ ಭಟ್ಕಳದಲ್ಲಿ ರಾಮ ಸೇನೆಯು ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಾದ ಹಲ್ಲೆಗೆ ಪ್ರತಿಕಾರವಾಗಿ ಭಟ್ಕಳದ ಚರ್ಚುಗಳು ಮೇಲೆ ದಾಳಿ ಮಾಡಲಾಗುವುದೆಂಬ ಹೇಳಿಕೆಯು ಬಾಲಿಶತನದಿಂದ ಕುಡೀದ್ದು ಇದನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಂಥೋನ್ ಫನಾಂಡಿಸ್ ಹಾಗೂ ಕರ್ನಾಟಕ ರಾಜ್ಯ ಕ್ರೈಸ್ತರ ಯುವ ಹೋರಾಟ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ.ಮೈಕಲ್ ಅಳ್ವರೀಸ್ ಬಲವಾಗಿ ಖಂಡಿಸಿದ್ದಾರೆ. ಅವರು ಕಾರವಾರದ ಪ್ರವಾಸಿ ಮಂದಿರದಲ್ಲಿ ಕರೆದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 
 
ಆಸ್ಟ್ರೇಲಿಯಾದಲ್ಲಿ ಆದ ಭಾರತೀಯರ ಮೇಲಿನ ಹಲ್ಲೆಯನ್ನು ನಾವು ಸಹ ಖಂಡಿಸುತ್ತೇವೆ. ಈ ವಿಷಯದಲ್ಲಿ ರಾಮಸೇನೆಯವರೊಂದಿಗೆ ಕೈಜೋಡಿಸಿ ಹೋರಾಟಕ್ಕಿಳಿಯಲು ಸಹ ಸಿದ್ದರಿದ್ದೇವೆ. ಆದರೆ ಅವರು ಇಲ್ಲಿನ ಚರ್ಚಗಳ ಮೇಲೆ ದಾಳಿಯನ್ನು ಮಾಡುತ್ತೇವೆಂದು ಹೇಳಿಕೆಗಳನ್ನು ನೀಡುತ್ತ ಇಲ್ಲಿನ ವಾತವರಣದಲ್ಲಿ ಹುಳಿಹಿಂಡುವ ಕೆಲಸವನ್ನು ಮಾಡುತ್ತಿರುವುದು ವಿಷಾದನೀಯ ಎಂದ ಅವರು ಇಂತಹ ಬಹಿರಂಗ ಹೇಳಿಕೆಗಳನ್ನು ನೀಡುತ್ತ ಇಲ್ಲಿ ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಇವರ ಯೋಜನೆ ದುರುದ್ದೇಶದಿಂದ ಕೂಡಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಾಗುವ ಮುಂದಿನ ಆಗುಹೋಗುಗಳಿಗೆ ಜಿಲ್ಲಾಡಳಿತವೆ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ ಎಂದರು. ಚರ್ಚ ಅಥವಾ ಮಸೀದಿಯನ್ನು ಕೆಡುವಂತಹ ಕಾರ್ಯ ಸುಲಭವಾದುದು ಎಂದು ತಿಳಿದಿರುವ ಶ್ರೀರಾಮ ಸೇನೆಯು ಜಿಲ್ಲೆಯಲ್ಲಿ ಮುಂದೆ ಇಂತಹ ಹೀನಾ ಕೃತ್ತಯವನ್ನು ಎಸಗಬಹುದು. ಆದ್ದರಿಂದ ಜಿಲ್ಲಾಡಳಿತ ಇವರ ಮೇಲೆ ತೀವ್ರವಾಗಿ ನಿಗಾವನ್ನು ಇಡುವುದರ ಮೂಲಕ ಮುಂದಿನ ಅನಾಹುತಗಳನ್ನು ತಪ್ಪಿಸಬೇಕು, ಶಿರಸಿ,ಭಟ್ಕಳದಲ್ಲಿ ಈ ಹಿಂದೆ ಶಿಲುಭೆಗಳ ಮೇಳೆ ನಡೆದ ದಾಳಿಯ ವಿವಿರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಡಳಿತವು ಆಯೋಗಕ್ಕೆ ಮಾಹಿತಿಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು. 
 
ಯಾವುದೆ ಅರಾಧನಾಲಯಗಳ ಮೇಲಿನ ದಾಳಿಯು ಅಪರಾಧವಾಗಿದ್ದು ಇಂತಹ ಕೃತ್ಯವೆಗಿದವರನ್ನು ೬ತಿಂಗಳುಗಳ ಜಾಮೀನು ರಹಿತ ಕಠಿಣ ಶಿಕ್ಷೆಯನ್ನು ನೀಡುವ ಕಾನೂನನ್ನು ರೂಪಿಸಬೇಕೆಂದು ರಾಜ್ಯ ಅಲ್ಪಸಂಖ್ಯಾತರ ಅಯೋಗವು ರಾಜ್ಯ ಸರ್ಕಾರವನ್ನು ಆಗ್ರಹಿಸಿಸುತ್ತದೆ ಎಂದರು. ಮಾರ್ಚ್ ತಿಂಗಳಲ್ಲಿ ಕಾರವಾರದಲ್ಲಿ ರಾಜ್ಯಮಟ್ಟದ ಸಭೆಯೊಂದು ಜರುಗಲಿದ್ದು ಅದರಲ್ಲಿ ಈ ನಿರ್ಣಯವನ್ನು ಅಂಗೀಕರಿಸಿ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಅವರು ತಿಳಿಸಿದರು. 


Share: