ಕಾರವಾರದ ಬಾಲಮಂದಿರ ಪ್ರೌಢಶಾಲೆಯಲ್ಲಿ “ಶಾಲಾ ಪ್ರಾರಂಭೋತ್ಸವ” ವನ್ನು ವಿಭಿನ್ನವಾಗಿ ಆಚರಿಸಲಾಯಿತು. ಮೊದಲು ಗಣೇಶ ಮತ್ತು ಶಾರದಾ ಮಾತೆಗೆ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆ ನಂತರ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲಾ ವಾತಾವರಣವನ್ನು ತಳಿರು-ತೋರಣ- ಬ್ಯಾನರ್ಗಳಿಂದ ಅಲಂಕರಿಸಲಾಗಿತ್ತು.
ಆರಂಭದಲ್ಲಿ ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಂಜಲಿ ಮಾನೆ ಎಲ್ಲರನ್ನೂ ಸ್ವಾಗತಿಸಿ, “ವಿದ್ಯಾರ್ಥಿಗಳು ಅವಿರತ ಪರಿಶ್ರಮದಿಂದ ಅಧ್ಯಯನ ಮಾಡಿ ಯಶಸ್ಸು ಗಳಿಸಬೇಕು. ಪಾಲಕರು ಮತ್ತು ವಿದ್ಯಾರ್ಥಿಗಳು ಆರೋಗ್ಯ, ಸ್ಫೂರ್ತಿ ಮತ್ತು ಉತ್ಸಾಹದಿಂದ ಶೈಕ್ಷಣಿಕ “ಕಲಿಕಾ ಬಲವರ್ಧನೆಯ ವರ್ಷದಲ್ಲಿ” ಪಾಲ್ಗೊಳ್ಳಬೇಕು” ಎಂದು ಕರೆ ನಿಡಿ, ಹುರಿದುಂಬಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ-ಜಿಲ್ಲಾ-ತಾಲೂಕಾ ಮಟ್ಟದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ಭಾರತಿ ಐಸಾಕ್, ಶ್ರೀ ನಜೀರುದ್ದೀನ್ ಸೈಯದ್, ಶ್ರೀ ರತ್ನಾಕರ ಮಡಿವಾಳ, ಶ್ರೀ ಪ್ರಶಾಂತ ನಾಯ್ಕ, ಶ್ರೀಮತಿ ಭಾಗ್ಯವತಿ ಖುರ್ಸೆ, ಶ್ರೀಮತಿ ಗೀತಾ ಐಸಾಕ್, ಶ್ರೀಮತಿ ಸೀಮಾ ರೇವಣಕರ ಮೊದಲಾದ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.