ಭಟ್ಕಳ, ನವೆಂಬರ್ 6: ಕಳ್ಳಭಟ್ಟಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದ ಮಹಿಳೆಯೋರ್ವಳನ್ನು ಹೊನ್ನಾವರ ಉಪವಿಭಾಗ ಹಾಗೂ ಭಟ್ಕಳ ಅಬಕಾರಿ ವಲಯದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಮಾವಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ತೂದಳ್ಳಿಯ ನಿವಾಸಿ ನಾಗವೇಣಿ ರಾಮಾ ನಾಯ್ಕ(29) ಎಂದು ಗುರುತಿಸಲಾಗಿದ್ದು, ಆಕೆಯ ಮನೆಯಲ್ಲಿದ್ದ ತಲಾ 150 ಮಿಲಿಯ 120 ಸ್ಯಾಚೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 3000/- ರೂಪಾಯಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತರಾದ ಕೆ.ಭೀಮಪ್ಪ ಹಾಗೂ ಕಾರವಾರ ಅಬಕಾರಿ ಉಪಾಯುಕ್ತ ವಡಕಣ್ಣನವರ್ ಮಾರ್ಗದರ್ಶನದಲಲಿ ಹೊನ್ನಾವರ ಅಬಕಾರಿ ಉಪವಿಭಾಗದ ಪ್ರಭಾರಿ ಉಪಧೀಕ್ಷಕ ಹನುಮಂತಪ್ಪ, ಅಬಕಾರಿ ವಲಯ ಕಚೇರಿಯ ನಿರೀಕ್ಷಕ ಗೀತಾ, ಸಿಬ್ಬಂದಿಗಳಾದ ಬಿ.ಐ.ಗೊಂಡ, ಎಮ್.ಕೆ.ನಾಯ್ಕ, ಡಿ.ಬಿ.ತಳೇಕರ, ವಿಶಾಲ ಮತ್ತು ವಾಹನ ಚಾಲಕ ಸೈದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗೀತಾ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.