ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಮಾವಿನಕಟ್ಟೆ ಬಳಿ ವ್ಯಕ್ತಿಯೋರ್ವನಿಂದ ಭಾರೀ ಪ್ರಮಾಣದ ಸ್ಪೋಟಕ ವಶ

ಭಟ್ಕಳ: ಮಾವಿನಕಟ್ಟೆ ಬಳಿ ವ್ಯಕ್ತಿಯೋರ್ವನಿಂದ ಭಾರೀ ಪ್ರಮಾಣದ ಸ್ಪೋಟಕ ವಶ

Sat, 10 Oct 2009 20:39:00  Office Staff   S.O. News Service
ಭಟ್ಕಳ, ಅಕ್ಟೋಬರ್ 10:  ಭಟ್ಕಳ ಸಮೀಪದ  ಮಲ್ಲಾರಿ ಮಾವಿನಕಟ್ಟೆಯ ಬಳಿ ನಡೆಸಿದ ಕಾರ್ಯಚರಣೆಯಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳೊಂದಿಗೆ ಓರ್ವ ವ್ಯಕ್ತಿಯನ್ನು ಬಂಧಿಸುವಲ್ಲಿ ಇಲ್ಲಿನ  ಕರಾವಳಿ ಕಾವಲು ಪೋಲಿಸ್ ಪಡೆಯ ತಂಡ ಯಶಸ್ವಿಯಾಗಿದ್ದು ಬಂಧಿತನಿಂದ ಸುಮಾರು 1.31 ಲಕ್ಷ ರೂ ಮೌಲ್ಯದ ಭಾರಿ ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಉದಯ ಮಂಜುನಾಥ್ ನಾಯ್ಕ ಎಂದು ಗುರುತಿಸಲಾಗಿದೆ. ಈ ಒಂದು ವಾರದಲ್ಲಿ  ಇಂತಹ ಎರಡು ಪ್ರಕರಣಗಳನ್ನು ಕರಾವಳಿ ಕಾವಲು ಪಡೆ ಪೋಲಿಸರು ಪತ್ತೆ ಹಚ್ಚಿದ್ದು ಸ್ಪೋಟವಸ್ತು ಅಧಿನಿಯಮ ಪ್ರಕರಣದಡಿ ಇದುವರೆಗೆ ಇಬ್ಬರನ್ನು ಬಂಧಿಸಿದ್ದು ಇದರ ಹಿಂದಿನ ಜಾಲ ಹಾಗೂ ಇನ್ನುಳಿದ ಆರೋಪಿಗಳನ್ನು ಬಂಧಿಸುವಲ್ಲಿ ವಿಸ್ತೃತ ತನಿಖೆ ಮುಂದುವರಿದೆ ಎಂದು ಕರಾವಳಿ ಕಾವಲು ಪಡೆ ಕುಮಟಾದ ಪೋಲಿಸ್ ಇನ್ಸ್  ಪೆಕ್ಟರ್ ಎನ್.ಟಿ.ಪ್ರಮೋದ್ ರಾವ್ ತಿಳಿಸಿದ್ದಾರೆ. 

ಈ ಕುರಿತು ಕರಾವಳಿಕಾವಲು ಪೋಲಿಸ್ ಪಡೆ ಕಛೇರಿಯಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕರಚಣೆಯ ಮಾಹಿತಿಯನ್ನು ನೀಡುತ್ತಾ ಈ ವಿಷಯವನ್ನು  ತಿಳಿಸಿದರು.

೯೨೫ ಕೆ.ಜಿ ಅಮೋನಿಯಮ್ ನೈಟ್ರೇಟ್,   ೨೭೫೦ ಡೆಟೋನೇಟರ್‍ಸ್, ೨೦೦ ನಾನ್ ಎಲೆಕ್ಟ್ರಾನಿಕ್ ಡೆಟೋನೆಟರ್‍ಸ್, ೩೦೪ ಫ್ಯೂಸ್, ಸೇರಿದಂತೆ ಒಟ್ಟು ೧.೩೧ ಲಕ್ಷ ರೂ ಮೌಲ್ಯದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಇದು ಮೈನ್ಸ್ ಕೆಲಸಕ್ಕೆ ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆಯಾದರೂ ಆರೋಪಿಗಳು ಉದ್ದೇಶವೇನಾಗಿತ್ತು ಎಂಬುದು ತನಿಖೆಯಿಂದಲೇ ತಿಳಿದುಬರಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಕಲ್ಲು ಕ್ವಾರಿ ಕೆಲಸಕ್ಕೆ ಇಂತಹ ಸ್ಪೋಟಕಗಳನ್ನು ಬಳಸಲಾಗುತ್ತಿದ್ದು ಆದರೆ ಇದಕ್ಕೆ ಅನುಮತಿಯನ್ನು ಪಡೆದಿರಬೇಕಾಗಿರುತ್ತದೆ. ಆದರೆ ಈ ಭಾಗದಲ್ಲಿ ಕಳೆದ ಒಂದು ವಾರದಿಂದ ಅನಮತಿಯಲ್ಲದೆ ಸ್ಪೊಟಕ ವಸ್ತುಗಳನ್ನು ಬಳಸುತ್ತಿದ್ದು ಇದರಿಂದಾಗಿ ಜನರಲ್ಲಿ ಆತಂಕ ಮನೆಮಾಡಿಕೊಂಡಿದೆ. ಅನುಮತಿ ಇಲ್ಲದೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಪೋಟಕ ವಸ್ತುಗಳು ಎಲ್ಲಿಂದ ಬಂದವು? ಇದರ ಹಿಂದೆ ಇರುವು ದುಷ್ಟ ಕೈ ಯಾವುದು ಎನ್ನವುದರ ಕುರಿತು ತನಿಖೆಯಿಂದಲೇ ತಿಳಿದುಬರಬೇಕಾಗಿದೆ.

ರಾಜ್ಯದ ಹೆಚ್ಚುವರಿ ಮಹಾನಿರ್ದೇಶಕ ಕಾನೂನು ಸುವ್ಯವಸ್ಥೆ ಅಬ್ದುಲ್ ರಹಮಾನ್ ಮತ್ತು ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರು ರವರು ಕರಾವಳಿ ಕಾವಲು ಪೊಲಿಸ್ ಪಡೆಯ ಕಾರ್ಯವನ್ನು ಶ್ಲಾಘಿಸಿ  ಎಸ್.ಪಿ. ಭಗವಾನ್ ದಾಸ್, ಎಸ್.ವಿ.ನಾಯ್ಕ ಡಿ.ಎಸ್.ಪಿ ಉಡುಪಿ, ಎನ್.ಟಿ. ಪ್ರಮೋದ್ ರಾವು, ನಂದೀಶ್ ಪಿ.ಎಸ್.ಐ. ಭಟ್ಕಳ ಹಾಗೂ ಈ ಕಾರ್ಯಚರಣೆಯಲ್ಲಿ ತೊಡಗಿದ್ದ ಕುಮಟಾ, ಭಟ್ಕಳ  ಪೋಲಿಸ್ ಸಿಬ್ಬಂಧಿಗೆ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸಹಾಯಕ ಕಮಿಷನರ್ ಭೇಟಿಯಾದ ತಂಝೀಮ್ ನಿಯೋಗ: ಭಟ್ಕಳದಲ್ಲಿ ಕಳೆದ ಒಂದು ವಾರದಲ್ಲಿ ಭಾರಿ ಸ್ಪೋಟಕ ವಸ್ತುಗಳು  ಪತ್ತೆಯಾಗಿದ್ದು ಇದು ಒಳ್ಳೆಯ ಬೆಳವಣೆಗೆಯಲ್ಲ. ಇದರಿಂದ ಭಟ್ಕಳ ನಗರದಲ್ಲಿ ಜನರು ಆತಂಕಿತರಾಗಿದ್ದು ಇದರ ಹಿಂದಿರುವ ದುಷ್ಟ ಕೈಗಳನ್ನು ಕೂಡಲೆ ಪತ್ತೆ ಹಚ್ಚಿ ಭಟ್ಕಳದ ಜನರ ಆತಂಕವನ್ನು ದೂರಮಾಡಬೇಕೆಂದು ಮನವಿ ಮಾಡಿಕೊಂಡ ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆ ಮಜ್ಲಿಸೆ ಇಸ್ಲಾಹ್ ತಂಝೀಮ್ ನಿಯೋಗವು ಇಂದು ಸಹಾಯಕ ಕಮಿಷನರ್ ಭೇಟಿಯಾಗಿ ಮನವಿಯನ್ನು ಮಾಡಿಕೊಂಡಿತು ಮುಂಬರುವ ದಿನಗಳಲ್ಲಿ ಮುಸ್ಲಿಮರ ಹಬ್ಬವು ಸಮೀಸುತ್ತಿದ್ದು ಇದಕ್ಕೆ ಪೂರ್ವದಲ್ಲಿ ಇಂತಹ ಆತಂಕಕಾರಿ ಘಟನಾವಳಿಗಳು ಭಟ್ಕಳದಲ್ಲಿ ಜರುಗುತ್ತಿರುವುದಕ್ಕೆ ಜನರು ಆತಂಕಕ್ಕೊಳಗಾಗಿದ್ದಾರೆ ಆದ್ದರಿಂದ ಕೂಡಲೆ ಇದರ ಹಿಂದಿನ ಜಾಲವನ್ನು ಪತ್ತೆ ಹಚ್ಚಿ ಇದು ಯಾವು ದುಷ್ಕೃತ್ಯಕ್ಕೆ ಬಳಸಲು ಕೊಂಡು ಹೋಗಲಾಗುತ್ತಿತ್ತು ಎಂಬುದನ್ನು ಪಪತ್ತೆ ಹಚ್ಚಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈ ನಿ‌ಐಗದಲ್ಲಿ ತಂಝೀಮ್ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮೊ‌ಅಲ್ಲಿಮ್, ಪ್ರಧಾನ ಕಾರ್ಯದಶಿ ಎಸ್.ಜೆ.ಖಾಲಿದ್, ಎಸ್.ಎಮ್. ಪರ್ವೇಝ್, ಡಿ.ಎಚ್. ಶಬ್ಬರ್, ಅಬ್ದುಲ್ ಅಲೀಮ ಖಾಸ್ಮಿ, ಮತ್ತಿತರರು ಉಪಸ್ಥಿತರಿದ್ದರು. 


Share: