ಭಟ್ಕಳ, ಮಾರ್ಚ್ 6:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ‘ಸಾಕ್ಷರತಾ ಜಾತಾ’ ಕಾರ್ಯಕ್ರಮದಡಿ ಭಟ್ಕಳ ತಾಲೂಕಿನಲ್ಲಿ ದಿನಾಂಕ ೦೬-೦೩-೨೦೧೦ರಿಂದ ೦೮-೦೩-೨೦೧೦ರವರೆಗೆ ‘ಕಾನೂನು ಸಾಕ್ಷರತಾ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ’ ಕಾರ್ಯಕ್ರಮ ನಡೆಯಲಿದೆ.
ಮಾರ್ಚ ೬ರಂದು ೧೦ ಗಂಟೆಗೆ ಬೆಳಕೆ ಸರಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಹಾಡುವಳ್ಳಿ ಹಾಗೂ ಸಂಜೆ ೪.೩೦ ಗಂಟೆಗೆ ಮುಂಡಳ್ಳಿ ಪಂಚಾಯತ ಭವನದಲ್ಲಿ ಕಾರ್ಯಕ್ರಮವು ನಡೆಯಲಿದೆ. ೦೭-೦೩-೨೦೧೦ರಂದು ಬೆಳಿಗ್ಗೆ ಭಟ್ಕಳ ಶಹರ ಭಾಗದ ನ್ಯೂ ಇಂಗ್ಲೀಷ್ ಸ್ಕೂಲ್, ಮಧ್ಯಾಹ್ನ ೧೨ ಗಂಟೆಗೆ ಹೆಬಳೆ ಗಣೇಶ ಭವನ ಹಾಗೂ ಸಂಜೆ ೪.೩೦ ಗಂಟೆಗೆ ಶಿರಾಲಿ ಪೇಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಕಾರ್ಯಕ್ರಮ ನೆರವೇರಲಿದೆ. ಮಾರ್ಚ ೮ರಂದು ಬೆಳಿಗ್ಗೆ ೧೦ ಗಂಟೆಗೆ ಕಾಯ್ಕಿಣಿ ಗ್ರಾಮಪಂಚಾಯತ ಸಭಾಭವನ, ೧೨ ಗಂಟೆಗೆ ಮುರುಡೇಶ್ವರ ಓಲಗ ಮಂಟಪದಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರೋಪ ಸಮಾರಂಭವು ಬೈಲೂರು ಅನಿರುದ್ಧ ಬಾಪಾ ಪ್ರೌಢಶಾಲೆ ನಡೆಯಲಿದೆ. ಶಾಸಕ ಜೆ.ಡಿ.ನಾಯ್ಕ, ತಹಸೀಲ್ದಾರ ಎಸ್.ಎಮ್.ನಾಯ್ಕ, ಡಿವಾಯ್ಎಸ್ಪಿ ವೇದಮೂರ್ತಿ, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಸಿಡಿಪಿಓ ನಾಗೇಶ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಸಿಪಿಐ ಗುರುಮತ್ತೂರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಕೆ.ಎಚ್.ನಾಯ್ಕ, ಎಸ್.ಕೆ.ನಾಯ್ಕ, ವಿ.ಎಫ್. ಗೋಮ್ಸ, ನಾಗರಾಜ ಈ. ಎಚ್., ನಾಗರಾಜ ಹೆಗಡೆ, ಜಿ.ಟಿ.ನಾಯ್ಕ, ಇಂದಿರಾ ನಾಯ್ಕ, ಎಸ್.ಬಿ.ಬೊಮ್ಮಾಯಿ, ಶೋಭಾ ನಾಯ್ಕ, ಆರ್.ಜಿ.ನಾಯ್ಕ, ಡಿ.ಕೆ.ಜೈನ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ