ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಎ.23-24:ನಗರದಲ್ಲಿ ಉದ್ಯೋಗ-ಶಿಕ್ಷಣ ಮೇಳ ‘ವೆಸ್ಟರ್ನ್ 2610 ’

ಮಂಗಳೂರು: ಎ.23-24:ನಗರದಲ್ಲಿ ಉದ್ಯೋಗ-ಶಿಕ್ಷಣ ಮೇಳ ‘ವೆಸ್ಟರ್ನ್ 2610 ’

Wed, 21 Apr 2010 03:16:00  Office Staff   S.O. News Service
ಮಂಗಳೂರು, ಎ.೨೦: ವೆಸ್ಟರ್ನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲ ಜಿಯು ಬೃಹತ್ ಉದ್ಯೋಗ ಮತ್ತು ಶಿಕ್ಷಣ ಮೇಳ, ಕೌನ್ಸೆಲಿಂಗ್ ಮತ್ತು ಕ್ಯಾರಿಯರ್ ಗೈಡೆನ್ಸ್ ‘ವೆಸ್ಟರ್ನ್ ೩೬೧೦’ಯನ್ನು ಎ.೨೩ ಮತ್ತು ೨೪ರಂದು ಮಂಗಳೂರಿನ ಡಾ.ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಆಯೋಜಿಸಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಪಡೆದುಕೊಳ್ಳುವಂತಹ ಈ ಮೇಳದಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.

ಪ್ರಖ್ಯಾತ ಕಂಪೆನಿಗಳಾದ ಇನ್ಫೋಸಿಸ್ ಬಿಪಿ‌ಒ, ವಿಪ್ರೊ ಟೆಕ್ನಾಲಜಿ, ಐಟಿ ಸಾಫ್ಟ್‌ವೇರ್, ಟೆಸ್ಕೊ ಇಂಡಿಯಾ ಇನ್ಫೋಲೈನ್, ರಿಲಾಯನ್ಸ್ ಎನರ್ಜಿ, ಬಿಗ್ ೯೨.೭ ಎಂಟರ್‌ಟ್ರೈನ್‌ಮೆಂಟ್, ಬಿಗ್ ಸಿನಿಮಾ ಎಂಟರ್‌ಟ್ರ್ರೈನ್‌ವೆಂಟ್, ರಿಲಾಯನ್ಸ್ ಕ್ಯಾಪಿಟಲ್, ರಿಲಾಯನ್ಸ್ ಜನರಲ್ ಇನ್ಸೂರೆನ್ಸ್, ರೆಡ್‌ಆಪಲ್ ಹೆಲ್ತ್ ಸೊಲ್ಯೂಷನ್ ಮೊದಲಾದ ೫೦ಕ್ಕೂ ಹೆಚ್ಚಿನ ಕಂಪೆನಿಗಳಿಂದ ೧೦ ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ಬಂದಿರುವುದರಿಂದ  ‘ವೆಸ್ಟರ್ನ್ ೩೬೧೦ ’ ಮೇಳದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.

ಉದ್ಯೋಗ ಮೇಳದೊಂದಿಗೆ ನಡೆಯುವ ಶಿಕ್ಷಣ ಮೇಳ ಮತ್ತು ಕ್ಯಾರಿಯರ್ ಗೈಡೆನ್ಸ್ ಕಾರ್ಯ ಕ್ರಮದಲ್ಲಿ ಅಮೆರಿಕದ ಫ್ರಾಂಕ್ಲಿನ್ ವಿವಿ ಒಹಾರಿಯೊ ಇದರ ಉಪಾಧ್ಯಕ್ಷ ಡಾ.ಕ್ಲಾಸ್‌ಹಾಬ್‌ರಿಜ್, ಪ್ರೊ.ಗಾಡ್ ಪ್ರೀ ಮೆಂಡಿಸ್, ಅಮೆರಿಕದ ಸೇಫ್ಟಿ ಎಲೆಯನ್ಸ್‌ನ ಅಧ್ಯಕ್ಷ ಟಿಮ್ ರಾಬರ್ಟ್, ಕಾರ್ಪೊರೇಟರ್ ಜಗತ್ತಿನ ಸೀನಿಯರ್ ಡೈರೆಕ್ಟರ್ ಗ್ಲೆನ್‌ವಿಲ್ ಎಚ್.ಆರ್.ಟಿಸ್ಮನ್ ಸ್ಟೇಯರ್, ಕಾರ್ಪೊರೇಟ್ ಸಸ್ ಐಟಿಪಿ‌ಎಲ್‌ನ ಉಪಾಧ್ಯಕ್ಷ ಅಲೆಗ್ಸಾಂಡರ್ ಕ್ಯಾಸ್ಟಿನೊ, ಚಾರ್ಟೆಡ್ ಅಕೌಂಟೆಂಟ್ ಎಸ್.ಎಸ್.ನಾಯಕ್ ಭಾಗವಹಿಸಿ ಶಿಕ್ಷಣ ಮತ್ತು ಉದ್ಯೋಗ ಜಗತ್ತಿನ ಬಗ್ಗೆ ತರಬೇತಿ ನೀಡುವರು.

ಆದ್ದರಿಂದ ಸಾರ್ವಜನಿಕರು ಈ ಮೇಳದ ಸದುಪಯೋಗ ಪಡೆದು ಕೊಳ್ಳುವಂತೆ ‘ವೆಸ್ಟರ್ನ್ ೩೬೧೦ ’ ಮೇಳದ ಆಯೋಜಕರಾದ ವೆಸ್ಟರ್ನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ವಾಲ್ಟರ್ ಸ್ಟೀಫನ್ ಮೆಂಡಿಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share: