ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಮಗಳೂರು : ಶೃಂಗೇರಿ ಪರಿಸರದಲ್ಲಿ ಮತ್ತೆ ನಕ್ಸಲರು

ಚಿಕ್ಕಮಗಳೂರು : ಶೃಂಗೇರಿ ಪರಿಸರದಲ್ಲಿ ಮತ್ತೆ ನಕ್ಸಲರು

Tue, 06 Oct 2009 03:19:00  Office Staff   S.O. News Service
ಚಿಕ್ಕಮಗಳೂರು ಅ.5 : ಶೃಂಗೇರಿ ಪರಿಸರದಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದು, ಅಲ್ಲಲ್ಲಿ ಗೋಡೆಗಳ ಮೇಲೆ ಅಂಟಿಸಿದ ಭಿತ್ತಿಪತ್ರಗಳು ಪತ್ತೆಯಾಗಿವೆ.

ರಾಜ್ಯ ಬಿಜೆಪಿ ಸರಕಾರವು ಜನ ವಿರೋಧಿ ಮತ್ತು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರಕ್ಷಣಾ ಇಲಾಖೆಯು ಒಂದೆಡೆ ಜನ ಸಾಮಾನ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದರೂ, ಸಂಪರ್ಕ ಸಭೆಗಳಲ್ಲಿ ತಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂದು ಬೊಗಳೆ ಬಿಡುತ್ತಿದ್ದಾರೆ ಎಂಬ ಅಸಮಾಧಾನ ಭಿತ್ತಿ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. 

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಘೋಷಣೆಯಾದ ಬಳಿಕ ಆ ಪರಿಸರದ ಮುಗ್ಧ ಜನರ ಮೇಲೆ ಕಿರುಕುಳ ನಡೆಸಲಾಗುತ್ತಿದೆ. ಅಲ್ಲಲ್ಲಿ ನಾಟಕೀಯವೆನಿಸುವ ಸಭೆ ಸಮಾರಂಭಗಳು ನಡೆಯುತ್ತಿವೆ. ಸಿ.ಟಿ. ರವಿ ಮತ್ತು ಪ್ರಮೋದ್ ಮುತಾಲಿಕ್ ಕೋಮುವಾದಿಗಳಾಗಿದ್ದು, ಜನರು ಇವರ ಸಭೆ ಸಮಾರಂಭಗಳನ್ನು ಬಹಿಷ್ಕರಿಸಬೇಕೆಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ. 

ಕಳೆದ ಶನಿವಾರ ರಾತ್ರಿ ಮೆಣಸೆ ಗ್ರಾಮ ಪಂಚಾಯತ್ ಬಳಿಯ ಮೇಗೂರು, ಕುಂಜೇಬೈಲು ಸುತ್ತಮುತ್ತಲ ಪ್ರದೇಶಕ್ಕೆ ನಕ್ಸಲರು ಭೇಟಿ ನೀಡಿದ್ದು, ಮಕ್ಕಿಮನೆ ಎಂಬಲ್ಲಿನ ರೈತರೋರ್ವರ ಮನೆಗೆ ತೆರಳಿ ಊಟ ಮಾಡಿ ಹೋಗಿದ್ದಾರೆ ಎನ್ನಲಾಗಿದೆ. 

ಸ್ಥಳಕ್ಕೆ ಡಿವೈ‌ಎಸ್ಪಿ ಅಬ್ದುಲ್ ಅಹದ್ ಪುತ್ತಿಗೆ, ವೃತ್ತ ನಿರೀಕ್ಷಕ ಸದಾನಂದ ತಿಪ್ಪಣ್ಣನವರು ಭೇಟಿ ನೀಡಿದ್ದು, ಭಿತ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನ ವನ ವ್ಯಾಪ್ತಿಯ ಘೋಷಣೆಯಾದ ಬಳಿಕ ಆ ಪರಿಸರದ ಮುಗ್ಧ ಜನರ ಮೇಲೆ ಕಿರುಕುಳ ನಡೆಸಲಾಗುತ್ತಿದೆ. ಅಲ್ಲಲ್ಲಿ ನಾಟಕೀಯವೆನಿಸುವ ಸಭೆ ಸಮಾರಂಭಗಳು ನಡೆಯುತ್ತಿವೆ. ಸಿ.ಟಿ. ರವಿ ಮತ್ತು ಪ್ರಮೋದ್ ಮುತಾಲಿಕ್ ಕೋಮುವಾದಿಗಳಾಗಿದ್ದು, ಜನರು ಇವರ ಸಭೆ ಸಮಾರಂಭಗಳನ್ನು ಬಹಿಷ್ಕರಿಸಬೇಕೆಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ

Share: