ಭಟ್ಕಳ,ಮಾರ್ಚ್ ೧: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಆರಂಭಿಸಿದ ಸಂಚಾರಿ ಲೋಕ ಅದಾಲತ್ ಮತ್ತು ಕಾನೂನು ವಿದ್ಯಾ ಪ್ರಸಾರ ರಥವು ಮಾ.೬ರಿಂದ ೮ ರವೆರೆಗೆ ಮೂರು ದಿನಗಳ ಕಾಲ ಭಟ್ಕಳ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಇಲ್ಲಿನ ಜೆ ಎಮ್ ಎಪ್ ಸಿ ನ್ಯಾಯಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಕಾನೂನು ವಿದ್ಯಾ ಪ್ರಸಾರದ ರಥವು ಭಟ್ಕಳದಲ್ಲಿ ಸಂಚರಿಸಲಿರುವ ಮೂರು ದಿನಗಳ ಕಾಲ ದಿನವೊಂದರಂತೆ ಮೂರು ಕಾರ್ಯಕ್ರಮವನ್ನು ನಿಗದಿಪಡಿಸಿದ್ದು ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವೀಗೊಳಿಸಲು ಸ್ಥಳೀಯರ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ನೆರವು ಪಡೆಯಲು ಕೂಡಾ ನಿರ್ಧರಿಸಲಾಯಿತು. ಮಾ.೬ರಂದು ಬೆಳಿಗ್ಗೆ ೧೦ ಗಂಟೆಗೆ ಬೆಳ್ಕೆ ಪ್ರೌಢಶಾಲಾ ಆವರಣದಲ್ಲಿ ಕಾನೂನು ವಿದ್ಯಾ ಪ್ರಸಾರ ಶಿಬಿರ, ೧೧-೩೦ಕ್ಕೆ ಹಾಡುವಳ್ಳಿಯಲ್ಲಿ ನಡೆಯಲಿರುವ ಜನಸ್ಪಂಧನಾ ಸಭೆಯಲ್ಲಿ ಭಾಗವಹಿಸಿ ಕಾನೂನು ವಿದ್ಯಾ ಪ್ರಸಾರ ಕೈಗೊಳ್ಳುವುದು, ಸಂಜೆ ೪-೩೦ಕ್ಕೆ ಮುಂಡಳ್ಳಿಯಲ್ಲಿನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಮಾ.೭ರಂದು ಬೆಳಿಗ್ಗೆ ೧೦ ಗಂಟೆಗೆ ಭಟ್ಕಳ ನಗರದ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಕಾನೂನು ವಿದ್ಯಾ ಪ್ರಸಾರ, ೧೧-೩೦ಕ್ಕೆ ಜಾಲಿಯ ಶ್ರೀ ಗಣೇಶೋತ್ಸವ ಮಂಟಪದಲ್ಲಿ, ಸಂಜೆ ೪-೩೦ಕ್ಕೆ ಶಿರಾಲಿಯ ಪೇಟೆ ಹನುಮಂತ ದೇವಸ್ಥಾನದ ಸಭಾ ಗ್ರಹದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾ.೮ರಂದು ಬೆಳಿಗ್ಗೆ ೧೦ ಗಂಟೆಗೆ ಕಾಯ್ಕಿಣಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ, ೧೧-೩೦ಕ್ಕೆ ಮುರ್ಡೇಶ್ವರದ ಓಲಗ ಮಂಟಪದಲ್ಲಿ ಹಾಗೂ ಸಂಜೆ ೪-೩೦ಕ್ಕೆ ಬೈಲೂರಿನ ಶ್ರೀ ಅನಿರುದ್ಧ ಬಾಪು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.