ಬೆಂಗಳೂರು ಏ. ೨೬: ಗ್ರಾಮ ಪಂಚಾಯತ್ ಚುನಾವಣೆಯ ನೀತಿ ಸಂಹಿತೆ ನಡುವೆಯೂ ಹಿರಿಯ ಪೊಲೀಸ್ ಅಧಿಕಾರಿ ವಲಯದಲ್ಲಿ ಬಾರೀ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ ಇಂದು ೧೯ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಪಂಚಾಯತ್ ಚುನಾವಣೆ ತಾರಕ್ಕೇರುತ್ತಿರುವ ಬೆಳವಣಿಗೆಯ ನಡುವೆಯೇ ಸರ್ಕಾರ ಈ ಆದೇಶ ಹೊರಡಿಸಿದೆ. ರಾಜ್ಯ ಚುನಾವಣಾ ಆಯೋಗದ ಅನುಮತಿ ಮೇರೆಗೆ ಇಂತಹ ವರ್ಗಾವಣೆ ಮಾಡಿದೆಯಾದರೂ ಇದು ರಾಜಕೀಯ ವಲಯದಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಎನ್ ಅಚ್ಚುತ್ ರಾವ್ ಅವರನ್ನು ಎಡಿಜಿಪಿ ಅಪರಾಧ ತಾಂತ್ರಿಕ ಸೇವೆಗೆ ವರ್ಗಾಯಿಸಿದೆ. ಎ.ಎಸ್.ಎನ್. ಮೂರ್ತಿ ಅವರಿಗೆ ಬಡ್ತಿನೀಡಿ ದಕ್ಷಿಣ ವಲಯ ಐಜಿಪಿ ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.
ಕೆಎಸ್‌ಅರ್‌ಪಿ ಯ ಎಡಿಜಿಪಿ ಕುಚ್ಚಣ್ಣ ಶ್ರೀನಿವಾಸ್ ಅವರನ್ನು ಎಡಿಜಿಪಿ ಬಂಧೀಖಾನೆ ಇಲಾಖೆಗೆ ನೇಮಿಸಲಾಗಿದೆ. ಓಂಪ್ರಕಾಶ್ ಅವರನ್ನು ಎಡಿಜಿಪಿ ಮಾನವ ಹಕ್ಕು ಹಾಗೂ ಕುಂದು ಕೊರತೆ ವಿಭಾಗ, ಬಿಪಿನ್ ಗೋಪಾಲಕೃಷ್ಣ ಎಡಿಜಿಪಿ ಅಂತರಿಕ ಬದ್ರತೆ, ಜಿಎಂ ಹಯ್ಯತ್ ಎಡಿಜಿಪಿ ಕೆಎಸ್ ಆರ್‌ಪಿ, ಬೆಂಗಳೂರು. ಜೀವನ್ ಕುಮಾರ್ ಗಾಂವಕರ್ ಐಜಿಪಿ ಹುದ್ದೆಯಿಂದ ಭಡ್ತಿ ನೀಡಿ ಎಡಿಜಿಪಿ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಡಾ: ಪಿ ರವೀಂದ್ರ ನಾಧ್ ಬೆಂಗಳೂರಿನ ಐಜಿಪಿ ಅಬಕಾರಿ ಜಾರಿ ನಿರ್ದೇಶನಾಲಯ, ಜೈಪ್ರಕಾಶ್ ವಿ ನಾಯ್ಕ ಐಜಿಪಿ ಹಾಗೂ ಹೆಚ್ಚುವರಿ ಕಮಾಂಡೆಂಟ್ ನಾಗರೀಕ ರಕ್ಷಣೆ ವಿಭಾಗಕ್ಕೆ ವರ್ಗಾಹಿಸಲಾಗಿದೆ. ಎಂ.ಸಿ. ನಾರಾಯಣಗೌಡ ಅವರಿಗೆ ಬಡ್ತಿ ನೀಡಿ ಬೆಂಗಳೂರಿನ ಐಜಿಪಿ ಅರಣ್ಯ ಜಾರಿ ನಿರ್ದೇಶನಾಲಯಕ್ಕೆ ನೇಮಕಮಾಡಲಾಗಿದೆ.
ಪ್ರಶಾಂತ್‌ಕುಮಾರ್ ಠಾಕೂರ್ ಅವರಿಗೆ ಬಡ್ತಿ ನೀಡಿ ಐ.ಜಿ.ಪಿ. ಜಾಗೃತ ದಳ ಜಲಸಂಪನ್ಮೂಲ ಇಲಾಖೆ ಬೆಂಗಳೂರು. ಡಾ. ಸುರೇಶ್ ಕುಂಚಿ ಮಹಮದ್ ಅವರಿಗೆ ಬಡ್ತಿ ನೀಡಿ ಐ.ಜಿ.ಪಿ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನವದೆಹಲಿಯ ಹುದ್ದೆಯಲ್ಲಿ ಮುಂದುವರೆಸಲಾಗಿದೆ.
ಅಬ್ದುಲ್ ಸಲೀಂ ಡಿ.ಐ.ಜಿ. ಕೇಂದ್ರ ಕಛೇರಿ ಬೆಂಗಳೂರು. ಸೀಮಂತ್‌ಕುಮಾರ್ ಸಿಂಗ್ ಅವರಿಗೆ ಬಡ್ತಿ ನೀಡಿ ಮಂಗಳೂರು ನಗರದ ಆಯುಕ್ತರಾಗಿ ನೇಮಕ ಮಾಡಿದ್ದು, ಆ ಸ್ಥಾನದಲ್ಲಿದ್ದ ಗೋಪಾಲ್ ಹೊಸೂರ್ ಅವರಿಗೆ ಪಶ್ಚಿಮ ವಲಯದ ಐ.ಜಿ.ಯಾಗಿ ಮುಂದುವರಿಸಲಾಗಿದೆ. ಆರ್. ಹೀತೇಂದ್ರ ಅವರಿಗೆ ಬಡ್ತಿನೀಡಿ ಕೇಂದ್ರದ ಸಿಬಿಐಯಲ್ಲೇ ಮುಂದುವರೆಸಲಾಗಿದೆ. ಬಿಜಯ್‌ಕುಮಾರ್ ಸಿಂಗ್ ಅವರಿಗೆ ಬಡ್ತಿನೀಡಿ ಡಿ.ಐ.ಜಿ. ಕೇಂದ್ರ ಕಛೇರಿ-೨ ವಲಯದಲ್ಲಿ ನೇಮಕಮಾಡಲಾಗಿದೆ.
ಪಿ. ಹರಿಕೃಷ್ಣನ್ ಡಿ.ಐ.ಜಿ. ಆಂತರಿಕ ಭದ್ರತೆ ಬೆಂಗಳೂರಿಗೆ ನೇಮಕ ಮಾಡಲಾಗಿದೆ. ಬಿ.ಎನ್.ಎಸ್. ರೆಡ್ಡಿ ಅವರಿಗೆ ಬಡ್ತಿನೀಡಿ ಸಹಾಯಕ ಡಿಐಜಿ ಅಪರಾಧ ಬೆಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.