ಕಾರವಾರ: ರೈತರು ವಿವಿಧ ಇಲಾಖೆಗಳ ಯೋಜನೆಯ ಅನುಕೂಲಕತೆಗಳನ್ನು ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ಸರ್ವೇ ನಂಬರಗೆ ಆಧಾರ ನಂಬರ ಜೋಡಿಸಿ ಎಫ್‍ಐಡಿ ನಂಬರ ಪಡೆಯುವುದು ಅಗತ್ಯವಾಗಿದೆ.
ರೈತರು ಬೆಂಬಲ ಬೆಲೆ ಯೋಜನೆಗಾಗಿ, ಬ್ಯಾಂಕನಿಂದ ಬೆಳೆ ಸಾಲ ಪಡೆಯಲು, ಬೆಳೆ ವಿಮೆ ಪರಿಹಾರ ಪಡೆಯಲು, ಬೆಳೆ ಸಮೀಕ್ಷೆ ಮಾಹಿತಿಗಾಗಿ, ಬೆಳೆ ಹಾನಿ ಪರಿಹಾರಕ್ಕಾಗಿ, ಕೃಷಿ ಪರಿಕರ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ಸರ್ವೇ ನಂಬರಗೆ ಆಧಾರ್ ಜೋಡಣೆ ಮಾಡಿಸುವುದು ಅವಶ್ಯಕವಾಗಿದೆ. ರೈತರು ಆಧಾರ ಕಾರ್ಡ್, ಪಹಣಿ ಪತ್ರ, ಬ್ಯಾಂಕ್ ಖಾತೆ ವಿವರ, ಜಾತಿ ಪ್ರಮಾಣ ಪತ್ರಗಳೊಂದಿಗೆ ಹತ್ತಿರದ ಕಂದಾಯ ಇಲಾಖೆ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಪಶುಸಂಗೊಪನೆ ಇಲಾಖೆಗಳಿಗೆ ಭೇಟಿ ನೀಡಿ ಆಧಾರ ನೊಂದಣಿ ಮಾಡಿಸಿ ಎಫ್‍ಐಡಿ ನಂಬರ ಪಡೆಯಬಹುದು.
ತಾಲೂಕಿನ ಎಫ್‍ಐಡಿ ನಂಬರ ಹೊಂದಿರುವ ರೈತರು ತಮ್ಮ ಎಲ್ಲಾ ಭೂ- ಹಿಡುವಳಿಗಳ ಮಾಹಿತಿಯನ್ನು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಾಯಿಸಿಕೊಳ್ಳಬೇಕು. ರೈತರು ಯಾವುದೇ ಭೂ-ಹಿಡುವಳಿಗಳು ತಮ್ಮ ಎಫ್‍ಐಡಿ ಯೊಂದಿಗೆ ಜೋಡಣೆಯಾಗದೇ ಇದ್ದರೇ ಸರ್ಕಾರದಿಂದ ಯಾವುದೇ ಸೌಲಭ್ಯ ಗಳು ದೊರಕುವುದಿಲ್ಲ.
ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್‍ಐಡಿ ಮಾಡಿಸಿಕೊಳ್ಳಬೇಕು. ಎಫ್‍ಐಡಿ ಈಗಾಗಲೇ ಇದ್ದಲ್ಲಿ ಆ ಎಫ್‍ಐಡಿ ಗೆ ನಿಮಗೆ ಸಂಬಂಧಿಸಿದ ಎಲ್ಲಾ ಹೊಲದ ಸರ್ವೇ ನಂಬರುಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ ರೈತರ ಯಾವುದೇ ಭೂಹಿಡುವಳಿಗಳು ತಮ್ಮ ಎಫ್‍ಐಡಿ ಹೊಂದಿಗೆ ಜೋಡಣೆಯಾಗದೇ ಇದ್ದರೇ ತಕ್ಷಣ ಕೃಷಿ ಇಲಾಖೆಗೆ ಸಂಪರ್ಕಿಸಿ ಜೋಡಣೆ ಮಾಡಿಸಬೇಕು. ಜಂಟಿ ಖಾತೆದಾರರು ಇದ್ದಲ್ಲಿ ಪ್ರತಿ ಒಬ್ಬ ಜಂಟಿ ಖಾತೆದಾರರು ಪ್ರತ್ಯೇಕವಾಗಿ ಎಫ್‍ಐಡಿ ಮಾಡಿಸಬೇಕು.
ಎಫ್‍ಐಡಿ ಮಾಡಲು ಬೇಕಾಗಿರುವ ದಾಖಲೆಗಳು: ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ದೂರವಾಣಿ ಸಂಖ್ಯೆ ಭಾವಚಿತ್ರಗಳು ಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಂದಾಯ ಇಲಾಖೆ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಹಸೀಲ್ದಾರ್ ಮತ್ತು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.