ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನಾಳೆ ಬ್ಯಾರಿ ಸಾಹಿತ್ಯ ಅಕಾಡಮಿಯ ಕಚೇರಿ ಉದ್ಘಾಟನೆ: ಬ್ಯಾರಿ ಕವಿಗೋಷ್ಠಿ

ನಾಳೆ ಬ್ಯಾರಿ ಸಾಹಿತ್ಯ ಅಕಾಡಮಿಯ ಕಚೇರಿ ಉದ್ಘಾಟನೆ: ಬ್ಯಾರಿ ಕವಿಗೋಷ್ಠಿ

Fri, 09 Oct 2009 04:45:00  Office Staff   S.O. News Service
ಮಂಗಳೂರು, ಅ.೮: ರಾಜ್ಯ ಸರಕಾರ ಹೊಸತಾಗಿ ಅಸ್ತಿತ್ವಕ್ಕೆ ತಂದಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡ ಮಿಯ ನೂತನ ಕಚೇರಿಯ ಉದ್ಘಾ ಟನೆ ಅ.೧೦ರಂದು ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್‌ಮಾನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅತ್ತಾವರದ ಪ್ರಿಸಿಡಿಯಂ ಕಾಂಪ್ಲೆಕ್ಸ್ ನಲ್ಲಿರುವ ನೂತನ ಕಚೇರಿಯನ್ನು ಅಪರಾಹ್ನ 3 ಗಂಟೆಗೆ ಉದ್ಘಾಟಿಸಲಾ ಗುತ್ತದೆ. ಬಳಿಕ ಸಭಾ ಕಾರ್ಯಕ್ರಮವು ಸಂಜೆ ೩:೩೦ಕ್ಕೆ ನಗರದ ಪುರಭವನ ದಲ್ಲಿ ನಡೆಯಲಿದೆ.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಕಚೇರಿ ಹಾಗೂ ಸಮಾರಂಭ  ಉದ್ಘಾಟಿಸಲಿದ್ದಾರೆ. ಉಡುಪಿ- ಚಿಕ್ಕಮಗಳೂರು ಸಂಸದ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. 

ಅಕಾಡಮಿಯ ತ್ರೈ ಮಾಸಿಕ ಸಂಚಿಕೆ ‘ಬೆಲ್ಕಿರಿ’ಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮುಹಮ್ಮದ್ ತಣ್ಣೀರುಬಾವಿ ರಚಿಸಿದ ‘ಬ್ಯಾರಿ ಚೆಲ್ತ್’ ಕೃತಿಯನ್ನು ಮಾಜಿ ಸಚಿವ ಬಿ.ಎ.ಮೊದಿನ್ ಬಿಡುಗಡೆಗೊಳಿಸಲಿದ್ದಾರೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಮೇಯರ್ ಶಂಕರ್ ಭಟ್, ಶಾಸಕ ರಾದ ಎನ್.ಯೋUಶ್ ಭಟ್, ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ.ಖಾದರ್, ಕೆ.ವಸಂತ ಬಂಗೇರ, ಮಲ್ಲಿಕಾ ಪ್ರಸಾದ್, ಎಸ್. ಅಂಗಾರ, ಬೆಂಗಳೂರು ಶಾಂತಿನಗರದ ಶಾಸಕ ಎನ್.ಎ.ಹಾರಿಸ್, ಬಿಜೆಪಿ ಜಿಲ್ಲಾಧ್ಯಕ್ಷ ಮೋನಪ್ಪ ಭಂಡಾರಿ, ರಾಜ್ಯ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಕುಂಬಳೆ ಸುಂದರರಾವ್, ಕರ್ನಾಟಕ ತುಳು ಸಾಹಿತ್ಯ ಅಕಾಡ ಮಿಯ ಅಧ್ಯಕ್ಷ ಪಾಲ್ತಾಡಿ ರಾಮಕೃಷ್ಣ ಆಚಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ನಾರಾಯಣ ಖಾರ್ವಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಜೆಡಿ‌ಎಸ್ ಮುಖಂಡ ಅಬೂಬಕರ್ ನಾಟೆಕಲ್, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಜಿ.ಎ.ಬಾವಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಅಕಾಡಮಿ ಸದಸ್ಯರಾದ ಅಝೀಝ್ ಬೈಕಂಪಾಡಿ ಮತ್ತು ಹಂಝ ಮಲಾರ್ ಉಪಸ್ಥಿತರಿದ್ದರು.
Print this News Article

Share: