ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹುಬ್ಬಳ್ಳಿ : ಬಿಟಿ ಬದನೆ : ಸಂಶೋಧನಾ ಕ್ಷೇತ್ರಗಳು ಎಂಎನ್ ಸಿಗಳ ಹಿಡಿತದಲ್ಲಿ

ಹುಬ್ಬಳ್ಳಿ : ಬಿಟಿ ಬದನೆ : ಸಂಶೋಧನಾ ಕ್ಷೇತ್ರಗಳು ಎಂಎನ್ ಸಿಗಳ ಹಿಡಿತದಲ್ಲಿ

Thu, 25 Feb 2010 16:13:00  Office Staff   S.O. News Service

ಹುಬ್ಬಳ್ಳಿ, ಫೆಬ್ರವರಿ 25: ಮಾನ್ಸೇಂಟೋ ಕಂಪನಿಯ ಹಿಡಿತದಲ್ಲಿರುವ ಮೂಲಕ ಮಹಿಕೋ ಕಂಪನಿ ಅಮೇರಿಕಾದ ಕಾರ್ನಲ್ ವಿಶ್ವವಿದ್ಯಾನಿಲಯ ಮತ್ತು ಅಮೇರಿಕಾದ ಅಂತರರಾಷ್ಟ್ರೀಯ ಸಹಾಯನಿಧಿ ಈ ಮೂರು ಸಂಸ್ಥೆಗಳು ಧಾರವಾಡದ ಕೃಷಿ ವಿಶ್ವವಿದ್ಯಾನಿಲಯ, ವಾರಣಾಸಿಯ ತರಕಾರಿ ಸಂಶೋಧನಾ ಸಂಸ್ಥೆ, ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯ ಇವುಗಳ ಜೊತೆಯಲ್ಲಿ ಪ್ರತ್ಯೇಕ ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಒಪ್ಪಂದಗಳ ಮೂಲಕ ಈ ಸಂಶೋಧನಾ ಕ್ಷೇತ್ರಗಳ ಮೂಲಭೂತ ಸೌಕರ್ಯಗಳನ್ನು ಭೂಮಿಯನ್ನು ತಂತ್ರಜ್ಞರನ್ನು ತಮ್ಮ ಕಂಪನಿಯ ಲಾಭದ ಹಿತಾಸಕ್ತಿಗಳಿಗಾಗಿ ದುಡಿಸಿಕೊಳಲು ಈ ಒಪ್ಪಂದಗಳು ಅವಕಾಶ ನೀಡುತ್ತವೆ. ಇದಕ್ಕಾಗಿ ಈ ಸಂಸ್ಥೆಗಳ ಕೃಷಿ ವಿಜ್ಞಾನಿಗಳನೇಕರು ಭಾರತದ ರೈತರ ಹಾಗೂ ಜನರ ಹಿತವನ್ನು ಬದಿಗೊತ್ತಿ ಬಿಟಿ ಪರವಾದಿಗಳಾಗಿದ್ದಾರೆ.

 

 

ಈ ಎಲ್ಲಾ ಒಪ್ಪಂದಗಳನ್ನು ಭಾರತ, ಅಮೇರಿಕಾ ರಣನೀತಿಯ ಒಪ್ಪಂದ (ಭಾರತ, ಅಮೇರಿಕಾ ಅಣು ಒಪ್ಪಂದ ಈ ರಣ ನೀತಿಯ ಒಪ್ಪಂದದ ಒಂದು ಭಾಗ) ಭಾರತ, ಅಮೇರಿಕಾ ಕೃಷಿ ಜ್ಞಾನ ಒಪ್ಪಂದದ ಅಡಿಯಲ್ಲಿ ಮಾಡಿಕೊಳಲಾಗಿದೆ. ಈ ಕೃಷಿ ಜ್ಞಾನ ಒಪ್ಪಂದದ ನೀತಿ ನಿರೂಪಣಾ ಸಮಿತಿಯಲ್ಲಿ ಮಾನ್ಸೆಂಟೋ ಕಂಪನಿ ಮತ್ತು ಅಮೇರಿಕಾದ ದೈತ್ಯ ಮಾರಾಟ ಕಂಪನಿಯಾದ ವಾಲ್ ಮಾಟ್ ಗಳು ಸ್ಥಾನ ಪಡೆದಿವೆ. ಈ ಕಂಪನಿಗಳು ತಮ್ಮ ಹಿತಾಸಕ್ತಿಯನ್ನು, ಲಾಭದ ಅವಕಾಶಗಳನ್ನು ವೃದ್ಧಿಸಿಕೊಳಲು ಅಮೇರಿಕಾ ಸರ್ಕಾರದ ಮೂಲಕ ಭಾರತ ಸರ್ಕಾರಕ್ಕೆ ಒತ್ತಡ ಹೇರುತ್ತಿವೆ. ಇದಕ್ಕೆ ಇಡೀ ಬಿಟಿ ಬದನೆ ಪ್ರಕರಣ ಒಂದು ಜ್ವಲಂತ ಉದಾಹರಣೆಯಾಗಿದೆ.

 

 

ಸೌಜನ್ಯ: ಜನಶಕ್ತಿ


Share: