ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಬಾಲಕಿಯರಿಗೆ ದೀಪಾವಳಿ ಉಡುಗೊರೆ ನೀಡಿದ ಸಚಿವ ಮಂಕಾಳ ವೈದ್ಯ.

ಕಾರವಾರ: ಬಾಲಕಿಯರಿಗೆ ದೀಪಾವಳಿ ಉಡುಗೊರೆ ನೀಡಿದ ಸಚಿವ ಮಂಕಾಳ ವೈದ್ಯ.

Sat, 02 Nov 2024 05:12:05  Office Staff   S O News

ಕಾರವಾರ : ದೀಪಾವಳಿ ಹಬ್ಬದ ಪ್ರಯುಕ್ತ ಸರಕಾರಿ ಬಾಲ ಮಂದಿರದ ಬಾಲಕಿಯರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮಂಕಾಳ ವೈದ್ಯ  ಶುಕ್ರವಾರ ಹೊಸ ಬಟ್ಟೆ ಮತ್ತು ಸಿಹಿ ತಿಂಡಿ ವಿತರಿಸಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು, ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ, ಉನ್ನತ ಸಾಧನೆಗಳನ್ನು ಮಾಡಿ. ಬಾಲಮಂದಿರದಲ್ಲಿ ಇದಕ್ಕಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು  ನಿಮಗೆ  ಒಡಗಿಸಲಾಗುವುದು ಎಂದರು.

ಬಾಲಕಿಯರ ಆಶಯದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ  ಪ್ರವಾಸ  ತೆರಳಲು ಅಗತ್ಯ ಅನುಮತಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಸಚಿವರು ಪ್ರವಾಸ ಕುರಿತ ಸಂಪೂರ್ಣ ವೆಚ್ಚವನ್ನು ತಾವು ಪಾವತಿಸುವುದಾಗಿ  ಹಾಗು ಬಾಲ ಮಂದಿರದಲ್ಲಿ  ದೂರದರ್ಶನದ ವ್ಯವಸ್ಥೆ  ಮಾಡುವುದಾಗಿ ತಿಳಿಸಿದರು.

ಬಾಲಮಂದಿರದಲ್ಲಿ ಬಾಲಕಿಯರ ಆರೋಗ್ಯಕರ ಬೆಳವಣಿಗೆಗೆ ಮತ್ತು ಶೈಕ್ಷಣಿಕ ಪ್ರಗತಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಬಾಲ ಮಂದಿರದ ಬಾಲಕಿಯರ ಪ್ರತಿಭಾ ಕಾರ್ಯಕ್ರಮ ವೀಕ್ಷಿಸಿದ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ, ಉಪ  ವಿಭಾಗಾಧಿಕಾರಿ  ಕನಿಷ್ಕ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿರೂಪಾಕ್ಷ ಪಾಟೀಲ್, ನಿರ್ಮಿತಿ ಕೇಂದ್ರದ ನಿರ್ದೇಶಕ ಹರ್ಷ  ಮತ್ತಿತರರು ಉಪಸ್ಥಿತರಿದ್ದರು


Share: