ಭಟ್ಕಳ, ನವೆಂಬರ್ 23: ನಗರದ ಖ್ಯಾತ ಮಳಿಗೆಗಳಲ್ಲಿ ಒಂದಾದ ರಿಬ್ಕೋ ಅಂಗಡಿಯಲ್ಲಿ ದರೋಡೆಯಾದ ಪ್ರಕರಣ ವರದಿಯಾಗಿದೆ.
ಮನೆಯ ಒಳಾಂಗಣ ಅಲಂಕಾರದ ವಸ್ತುಗಳನ್ನು ಮಾರಾಟ ಮಾಡುವ ಈ ಮಳಿಗೆಯಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕದ್ದೊಯ್ಯಲಾಗಿದೆ.
ಭಾನುವಾರ ಬೆಳೆಗ್ಗೆ ಎಂದಿನಂತೆ ಬಾಗಿಲು ತೆರೆದಾಗ ದರೋಡೆಯಾದ ವಿಷಯ ಬೆಳಕಿಗೆ ಬಂದಿದೆ. ಕಳ್ಳರು ಕಟ್ಟಡದ ಹಿಂಭಾಗದ ಗೇಟ್ ಬೀಗ ಮುರಿದು ಒಳನುಗ್ಗಿ ಕಿಟಕಿಯ ಗಾಜನ್ನು ಒಡೆದು ಕಟ್ಟಡದೊಳಕ್ಕೆ ಪ್ರವೇಶಿಸಿದ್ದಾರೆ.

ಕಟ್ಟಡದೊಳಕ್ಕೆ ಹೆಚ್ಚಿನ ವಸ್ತುಗಳು ಭಾರವಾದುದರಿಂದ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಬಿಟ್ಟು ಹಗುರವಾದ ವಸ್ತುಗಳನ್ನು ಮಾತ್ರ ಕಳ್ಳರು ಕದ್ದೊಯ್ದಿದ್ದಾರೆ.
ಈ ಕುರಿತು ಭಟ್ಕಳ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.