ಕಾರವಾರ: ಪ್ರಸಕ್ತ ಶೈಕ್ಷಣಿಕ ಸಾಲಿಗೆ ಉತ್ತರಕನ್ನಡ ಜಿಲ್ಲೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಮುಂಡಗೋಡ ತಾಲ್ಲೂಕಿನ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಶಿರಸಿ ತಾಲ್ಲೂಕಿನ ಕಲ್ಲಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಹಳಿಯಾಳದ ಮದನ್ನಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗ (PCMB &PCMC) ತರಗತಿಗೆ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಲ್ಲಿ 10 ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಆಧ್ಯತೆ ಇತರೆ ಶಾಲೆಯ ವಿದ್ಯಾರ್ಥಿಗಳಿಗೆ ಎರಡನೇ ಆಧ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಮೇ.18 ಕೊನೆಯ ದಿನವಾಗಿದೆ.
ಆಸಕ್ತ ವಿದ್ಯಾರ್ಥಿಗಳು ಇಲಾಖೆ ನಿಗದಿ ಪಡಿಸಿದ ಭರ್ತಿ ಮಾಡಿದ ಅರ್ಜಿ, ವಿದ್ಯಾರ್ಥಿಯ ಇತ್ತೀಚಿನ 2 ಭಾವಚಿತ್ರ, ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ಪ್ರವೇಶ ಪತ್ರದ ಪ್ರತಿ ಹಾಗೂ ಫಲಿತಾಂಶ ಪಟ್ಟಿ ಪ್ರತಿ ಆಯಾ ಶಾಲೆಯ ಪ್ರಾಂಶುಪಾಲರು ಮುಖ್ಯಾಧ್ಯಾಪಕರಿಂದ ದೃಢೀಕರಿಸಿದ್ದು, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ನೀಡಿರುವ ವಿದ್ಯಾರ್ಥಿಯ SATS ಗುರುತಿನ ಸಂಖ್ಯೆ, ವಿದ್ಯಾರ್ಥಿಯ ಆಧಾರ ಕಾರ್ಡ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಪೋಷಕರ ವಾರ್ಷಿಕ ಆದಾಯ ಮಿತಿ ಎಸ್.ಸಿ/ಎಸ್.ಟಿ/ ಪ್ರವರ್ಗ-1 ರೂ. 2.50 ಲಕ್ಷ ಮತ್ತು 2ಎ,2ಬಿ, 3ಎ,3ಬಿ ರೂ. 1.00 ಲಕ್ಷ), ಪೋಷಕರ ಚಾಲ್ತಿಯರುವ ದೂರವಾಣಿ ಸಂಖ್ಯೆ ಮತ್ತು ವ್ಯಾಸಂಗ ಮಾಡಿದ ಶಾಲೆಯ ಪ್ರಾಂಶುಪಾಲರು/ ಮುಖ್ಯೋಪಧಾಯರ ದೂರವಾಣಿ ಸಂಖ್ಯೆ, ವಿಶೇಷ ವರ್ಗಗಳಿಗೆ ಸಂಬAಧಿಸಿದ ಪ್ರಮಾಣ ಪತ್ರಗಳು (ವಿಶೇಷ ಚೇತನ ಮಗು, ಮಾಜಿ ಸೈನಿಕರ ಮಗು, ವಿಧುವೆ ವಿಧುರ ಮಗು, ಅನಾಥ ಮಗು, ಅಲೆಮಾರಿ/ ಅರೆ ಅಲೆಮಾರಿ ಮಗು, ಬಾಲ ಕಾರ್ಮಿಕ ಮಗು, ಆಶ್ರಮ ಶಾಲೆ ಮಗು, ಆತ್ಮಹತ್ಯೆಗೆ ಒಳಗಾದ ರೈತರ ಮಕ್ಕಳು ಮತ್ತು ಪೌರ ಕಾರ್ಮಿಕರ ಮಕ್ಕಳು, ಕೋವಿಡ್ ನಿಂದ ಮೃತಪಟ್ಟ ಪೋಷಕರ ಮಕ್ಕಳು, ಹೆಚ್.ಐ.ವಿ. ಪೀಡಿತ ಮಗು, ಯೋಜನಾ ನಿರಾಶ್ರಿತರ ಮಗು) ದಾಖಲಾತಿಗಳೊಂದಿಗೆ ಆಯಾ ತಾಲ್ಲೂಕಿನ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.