ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ನಿತ್ಯಾನಂದ ಸ್ವಾಮಿಯ ರಾಸಲೀಲೆ - ಆಶ್ರಮದ ಮೇಲೆ ಧಾಳಿ ನಡೆಸಿದ ಗ್ರಾಮಸ್ಥರು

ಬೆಂಗಳೂರು: ನಿತ್ಯಾನಂದ ಸ್ವಾಮಿಯ ರಾಸಲೀಲೆ - ಆಶ್ರಮದ ಮೇಲೆ ಧಾಳಿ ನಡೆಸಿದ ಗ್ರಾಮಸ್ಥರು

Wed, 03 Mar 2010 18:06:00  Office Staff   S.O. News Service

ಬೆಂಗಳೂರು,ಮಾರ್ಚ್ 3: ನಿತ್ಯಾನಂದ ಸ್ವಾಮಿಯ ರಾಸಲೀಲೆಯನ್ನ ತಮಿಳುನಾಡಿನ ಖಾಸಗಿ ಚಾನಲ್ ಬಿತ್ತರಿಸುತ್ತಿದ್ದಂತೆ, ಇದರಿಂದ ಸ್ವಾಮಿಜಿ ವಿರುದ್ಧ ಆಕ್ರೋಶ ಗೊಂಡ ಆಶ್ರಮದ ಆಸುಪಾಸಿನ ಗ್ರಾಮಸ್ಥರು ಆಶ್ರಮದ ಮೇಲೆ ದಾಳಿನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಬಿಡದಿಯ ನಿತ್ಯಾನಂದ ಸ್ವಾಮೀಜಿ ತಮಿಳು ಚಿತ್ರರಂಗದ ನಟಿಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ದೃಶ್ಯಗಳನ್ನು ತಮಿಳುನಾಡಿನ ಖಾಸಗಿ ಪ್ರಸಾರ ಮಾಡಿದೆ. ಸ್ವಾಮೀಜಿಯ ಲೈಂಗಿಕ ಹಗರಣ ಬಯಲಾಗುತ್ತಿದ್ದಂತೆಯೇ ಬಿಡದಿಯ ದ್ಯಾನಪೀಠ ಆಶ್ರಮಕ್ಕೆ ಮುತ್ತಿಗೆ ಹಾಕಿದ ಜನತೆ ಆಶ್ರಮದ ಮೇಲೆ ಕಲ್ಲು ಎಸೆದು ಸ್ವಾಮೀಜಿಯ ಪ್ಲೆಕ್ಸ್, ಬ್ಯಾನರ್, ಬೋರ್ಡ್‌ಗಳನ್ನು ಹರಿದು ಬೆಂಕಿ ಹಚ್ಚಿದ್ದಾರೆ.

 

ಆಶ್ರಮದ ಗಾಜುಗಳು ಪುಡಿ ಪುಡಿಯಾಗಿದ್ದು, ಸ್ವಾಮೀಜಿಯ ಭಾವಚಿತ್ರವನ್ನು ಬೀದಿಗೆ ಎಸೆದಿದ್ದಾರೆ. ಇಂದು ಬೆಳಿಗ್ಗಿನಿಂದಲೇ ನೂರಾರು ಮಂದಿ ಈ ಆಶ್ರಮದ ಮೇಲೆ ದಾಳಿ ನಡೆಸಿದ್ದಾರೆ.

ನಿತ್ಯಾನಂದ ಸ್ವಾಮಿಯ ಆಶ್ರಮದ ಮೇಲೆ ಭಕ್ತ ಸಮೂಹ ಆಕ್ರೋಶಗೊಂಡು ದಾಳಿ ನಡೆಸಿದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ದಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆಶ್ರಮಕ್ಕೆ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.

 

ತಮಿಳು ನಾಡಿನ ಮೂಲದ ನಿತ್ಯಾನಂದ ಸ್ವಾಮಿ ದ್ಯಾನಕೇಂದ್ರ ಮೂಲಕ ಪ್ರಸಿದ್ಧಿಗೆ ಬಂದಿದ್ದು, ದೇಶ ವಿದೇಶಗಳಲ್ಲಿ ಆಶ್ರಮ ಹೊಂದಿದ್ದಾರೆ. ಬಿಡದಿಯಲ್ಲಿ ನಿತ್ಯಾನಂದ ಸ್ವಾಮೀಜಿ ಅವರದ್ದು, ಮುಖ್ಯ ಧ್ಯಾನ ಕೇಂದ್ರ ಆಶ್ರಮವಾಗಿದೆ. 

 


Share: