ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನಂದಿನಿ ಹಾಲು ದರ ಶೀಘ್ರದಲ್ಲೇ ಹೆಚ್ಚಳ

ಬೆಂಗಳೂರು: ನಂದಿನಿ ಹಾಲು ದರ ಶೀಘ್ರದಲ್ಲೇ ಹೆಚ್ಚಳ

Tue, 24 Nov 2009 03:13:00  Office Staff   S.O. News Service
ಬೆಂಗಳೂರು, ನ.೨೩ ಶೀಘ್ರದಲ್ಲೇ ನಂದಿನಿ ಹಾಲು ಮಾರಾಟ ದರ  ಹೆಚ್ಚಳವಾಗಲಿದೆ. 
 
2 ವರ್ಷಗಳಿಂದ ರೈತರಿಂದ ಹಾಲು ಖರೀದಿ ದರ ಮತ್ತು ಜಿಲ್ಲಾ ಒಕ್ಕೂಟಗಳಿಂದ ಮಾರಾಟ ದರ ಹೆಚ್ಚಳ ಬೇಡಿಕೆ ಬರುತ್ತಿದೆ. ದರ ಪರಿಷ್ಕರಿಸದ ಕಾರಣ ಜಿಲ್ಲಾ ಹಾಲು ಒಕ್ಕೂಟಗಳು ಸ್ವಲ್ಪ ಹಿನ್ನಡೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಹಾಲು ಮಾರಾಟ ದರ ಹೆಚ್ಚಳ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಕೆ‌ಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಸೋಮವಾರ ಹೇಳಿದ್ದಾರೆ.

ನೆರೆ ರಾಜ್ಯಗಳಲ್ಲಿ ಲೀಟರ್ ಹಾಲಿಗೆ 20-24 ರು.  ಇದೆ. ಆದರೆ, ನಂದಿನಿ ಹಾಲಿನ ದರ ಕೇವಲ 16 ರು. ಆಗಿದೆ. 2 ವರ್ಷಗಳಿಂದ ದರ ಪರಿಷ್ಕರಣೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ಯೋಜಿಸಲಾಗಿದೆ. ನ.30ರ ಕೆ‌ಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದಿದ್ದಾರೆ. 

ಸೌಜನ್ಯ: ಕನ್ನಡಪ್ರಭ


Share: