ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಭಾಷಾಂತರ ನಿರ್ದೇಶನಾಲಯ ನಿರ್ದೇಶಕಿಯಾಗಿ ಪದೋನ್ನತಿ ಪಡೆದ ಡಾ: ಕೆ.ಎಸ್. ಗೀತಾ

ಬೆಂಗಳೂರು: ಭಾಷಾಂತರ ನಿರ್ದೇಶನಾಲಯ ನಿರ್ದೇಶಕಿಯಾಗಿ ಪದೋನ್ನತಿ ಪಡೆದ ಡಾ: ಕೆ.ಎಸ್. ಗೀತಾ

Tue, 13 Apr 2010 18:42:00  Office Staff   S.O. News Service

ಬೆಂಗಳೂರು, ಏಪ್ರಿಲ್ ೧೩ (ಕರ್ನಾಟಕ ವಾರ್ತೆ): ಡಾ: ಕೆ.ಎಸ್. ಗೀತಾ, ಉಪ ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ ಇವರಿಗೆ ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿರ್ದೇಶಕರಾದ ಸ್ಥಾನಪನ್ನ ಪದೋನ್ನತಿ ನೀಡಿ ನೇಮಕ ಮಾಡಲಾಗಿದೆ.

 

ಫಲಿತಾಂಶ ಪ್ರಕಟ

 

 

ಬೆಂಗಳೂರು, ಏಪ್ರಿಲ್ ೧೩ (ಕರ್ನಾಟಕ ವಾರ್ತೆ): ರಾಷ್ಟ್ರೀಯ ಕುಶಲಕರ್ಮಿ ತರಬೇತಿ ಯೋಜನೆಯಡಿಯಲ್ಲಿ ಫೆಬ್ರವರಿ-೨೦೧೦ ರಲ್ಲಿ ರಾಜ್ಯದ ೨೩೬ ಉನ್ನತೀಕರಣಗೊಂಡ (ಸಿ‌ಓ‌ಇ) ಕೈಗಾರಿಕಾ ತರಬೇತಿ ಸಂಸ್ಥೆಗಳ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯ ಫಲಿತಾಂಶವನ್ನು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಲ್ಲಿ, ವಿಭಾಗೀಯ ಕಛೇರಿಗಳಲ್ಲಿ ಮತ್ತು ನಿರ್ದೇಶನಾಲಯದಲ್ಲಿ ಪ್ರಕಟಿಸಲಾಗಿದೆ ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆಯ ಪ್ರಕಟಣೆ ತಿಳಿಸಿದೆ.

 

ಸಂದೇಶ

 

 

ಬೆಂಗಳೂರು, ಏಪ್ರಿಲ್ ೧೩ (ಕರ್ನಾಟಕ ವಾರ್ತೆ): ಸಮಸ್ತ ಕನ್ನಡಿಗರಿಗೆ ಡಾ: ಬಿ.ಆರ್. ಅಂಬೇಡ್ಕರ್ ಜಯಂತಿಯ ಶುಭಾಶಯಗಳು. ವಿಧಾನ ಪರಿಷತ್ತಿನ ಸಭಾಪತಿ ಶ್ರೀ ವೀರಣ್ಣ ಮತ್ತಿಕಟ್ಟಿ ಅವರು ಎಲ್ಲರೂ ಜಾತಿ-ಮತ ಭೇದಗಳನ್ನು ಮರೆತು ಸಮಾನತೆ, ಸಹೋದರ ಬಾಂಧವ್ಯದಿಂದ ಸಹಬಾಳ್ವೆ ನಡೆಸುತ್ತಾ ಪ್ರಗತಿ ಪಥದಲ್ಲಿ ಜೊತೆ ಜೊತೆಯಾಗಿ ಹೆಜ್ಜೆ ಹಾಕುವಂತಾಗಲಿ ಅವರು ಶುಭ ಹಾರೈಸಿದ್ದಾರೆ.  

 


Share: