ಭಟ್ಕಳ, ಜನವರಿ ೪: ಜನವರಿ ೧ ಮತ್ತು೨ನೇ ತಾರೀಖಿನಂದು ನಗರದ ವೈಎಂಎಸ್‍ಎ (ಯಂಗ್ ಮುಸ್ಲಿಂ ಸ್ಟೂಡೆಂಟ್ಸ್ ಅಸೋಸಿಯೇಶನ್) ಸಂಘಟನೆ ಆಯೋಜಿಸಿದ್ದ ನಾಅತ್ ಮತ್ತು ಕುರಾನ್ ಪಠಣ ಸ್ಪರ್ಧೆಯಲ್ಲಿ ಕಾಶ್ಮೀರ ರಾಜ್ಯ ಪ್ರಥಮ ಸ್ಥಾನ ಗಳಿಸಿದೆ.
ಎರೆಡು ದಿನಗಳ ಕಾಲ ಸಾವಿರಾರು ಜನರೆದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಸ್ಪರ್ಧಿಗಳು ಅಭಿಮಾನಿಗಳ ಮನಗೆದ್ದರು.
ನಾಅತ್ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ:
ಪ್ರಥಮ ಸ್ಥಾನ: ಹಫೀಜುಲ್ಲಾ (ತಂದೆಯ ಹೆಸರು - ಮಕ್ಬೂಲ್,ಕಾಶ್ಮೀರ ರಾಜ್ಯದ ಶ್ರೀನಗರದ ಸಿರಾಜುಲ್ ಉಲೂಮ್ ಮದರಸಾ)
ಎರಡನೆಯ ಸ್ಥಾನ :ಅಬ್ದುಸ್ ಸುಭ್ಹಾನ್ (ತಂದೆಯ ಹೆಸರು: ಮೊಹಮ್ಮದ್ ಹುಸೇನ್ ,ಕರ್ನಾಟಕದ ಉಡುಪಿ ಜಿಲ್ಲೆಯ ಮಿಸ್ಬಾವುಲ್ ಉಲೂಮ್ ಮದರಸಾ, ಗಂಗೊಳ್ಳಿ)
ತೃತೀಯ ಸ್ಥಾನ: ೧)ಸೈಯದ್ ಹೈದರಾಲಿ ಹಮೀದ್ ಅಲಿ (ಮಧ್ಯಪ್ರದೇಶದ ಭೋಪಾಲ್ ನ ಮದರಸಾ ತಾಜುಲ್ ಉಲೂಮ್)
೨)ಅಬ್ದುಲ್ ಬಾರಿ (ತಂದೆಯ ಹೆಸರು ಶಫೀಉರ್ರಹ್ಮಾನ್, ಉತ್ತರ ಪ್ರದೇಶದ ಲಕ್ನೋ ನಗರದ ಮದ್ರಸಾ ನದ್ವತುಲ್ ಉಲಮಾ)






ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಕ್ನೋ ನಗರದ ನದ್ವತುಲ್ ಉಲಮಾ ಮದ್ರಸಾದ ಇಸ್ಲಾಮಿಕ್ ವಿಧ್ವಾಂಸರಾದ ಫ್ರೊ. ಮೌಲಾನಾ ಸಲ್ಮಾನ್ ಹುಸೈನಿ ನದ್ವಿಯವರು ನಾತ್ ಹಾಗೂ ಕುರಾನ್ ಪಠಣದ ಬಗ್ಗೆ ದೀರ್ಘ ಪ್ರವಚನವನ್ನು ನೀಡಿ ನಾಅತ್ ಹಾಗೂ ಕುರಾನ್ ಪಠಣ ಸನ್ಮಾರ್ಗದೆಡೆಗೆ ಬೆಳಕು ನೀಡುವ ಉಪಕರಣಗಳು ಎಂದು ಉಪದೇಶಿಸಿದರು. ಭಟ್ಕಳ ಕಾಝಿ ಮೌಲಾನಾ ಇಕ್ಬಾಲ್ ಮುಲ್ಲಾ ನದ್ವಿ, ಭಟ್ಕಳ ಜಾಮಿಯಾ ಇಸ್ಲಾಮಿಯಾ ಮದರಸಾದ ಪ್ರಾಂಶುಪಾಲರಾದ ಮೌಲಾನಾ ಅಬ್ದುಲ್ ಬಾರಿ ನದ್ವಿ, ಮೌಲಾನಾ ಅಲೀಂ ಕಾಸಿಮಿ, ಮೌಲಾನಾ ಇಲಿಯಾಸ್ ಜಾಕ್ಟಿ ನದ್ವಿ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೈಎಂಎಸ್ ಎ ಅಧ್ಯಕ್ಷರಾದ ಇಕ್ಬಾಲ್ ಸುಹೇಲ್ ರವರೇ ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ವಹಿಸಿದ್ದರು.
ಎಲ್ಲಾ ವಿಜೇತರಿಗೆ ಸಾಹಿಲ್ ತಂಡ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ವೀಡಿಯೋ ವರದಿಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ:
http://www.youtube.com/sahilonlinevideo