ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಟ್ರೆಕ್ಕಿಂಗ್ ಮೂಲಕ ಮತದಾನ ಜಾಗೃತಿ

ಕಾರವಾರ: ಟ್ರೆಕ್ಕಿಂಗ್ ಮೂಲಕ ಮತದಾನ ಜಾಗೃತಿ

Fri, 03 May 2024 04:30:15  Office Staff   S O News

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ, ಮೇ 7ರಂದು ನಡೆಯಲಿರುವ ಹಿನ್ನಲೆ ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕಾರವಾರ ತಾಲೂಕು ಪಂಚಾಯತ್ ವತಿಯಿಂದ ಮತದಾನ ಜಾಗೃತಿ ನಿಮಿತ್ತ ಬುಧವಾರ ಮಾಜಾಳಿ ಕಡಲತೀರ ಪ್ರದೇಶದಲ್ಲಿ ಟ್ರೆಕ್ಕಿಂಗ್ ನಡೆಸಲಾಯಿತು.

ಮಾಜಾಳಿ ಕಡಲತೀರದಿಂದ ಆರಂಭವಾದ ಚಾರಣವು ತೀರದ ಅಂಚಿನಲ್ಲಿರುವ ಬೆಟ್ಟಗುಡ್ಡದ ಮೇಲೆ ಸಾಗಿ ತೀಳಮಾತಿ ಕಡಲತೀರದಲ್ಲಿ ಸಂಪನ್ನಗೊAಡಿತು. ಈ ವೇಳೆ ಮತದಾನ ಜಾಗೃತಿ ಸಂದೇಶ ಹೊಂದಿರುವ ಫಲಕಗಳು ಹಾಗೂ ಸ್ವೀಪ್ ಬಾವುಟ ಪ್ರದರ್ಶನ ಮಾಡಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾಲೂಕು ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


Share: