ಭಟ್ಕಳ, ನವೆಂಬರ್ 19: ಬಟ್ಕಳದ ಇತಿಹಾಸದಲ್ಲಿಯೇ ಭೀಕರವಾದ ಅಪಘಾತವೊಂದು ನಿನ್ನೆ ಸಂಭವಿಸಿದೆ. ಟಾಟಾ ಸುಮೋ ಹಾಗೂ ಸುಗಮ ಟ್ರಾವೆಲ್ಸ್ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹನ್ನೊಂದು ಜನರು ಮೃತಪಟ್ಟಿದ್ದಾರೆ.
ಬೈಂದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸುಮಾರು ಮೂವತ್ತು ಕಿ.ಮೀ ದೂರದಲ್ಲಿರುವ ಆಂಬಾಗಿಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಟಾಟಾ ಸುಮೇ ಮಂಗಳೂರಿನಿಂದ ಭಟ್ಕಳದೆಡೆಗೂ ಬಸ್ ಅದರ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರಿನಿಂದ ಭಟ್ಕಳದೆಡೆಗೆ ಸಂಚರಿಸುತ್ತಿದ್ದವು.

ಪ್ರತ್ಯಕ್ಷದರ್ಶಿಗಳ ಪ್ರಕಾರ ಟಾಟಾ ಸುಮೇ ಮುಂದೆ ಚಲಿಸುತ್ತಿದ್ದ ಲಾರಿಯೊಂದರ ಮುಂದೆ ಎತ್ತೊಂದು ಅಡ್ಡಬಂದಿದ್ದರಿಂದ ಲಾರಿ ಚಾಲಕ ಶೀಘ್ರವಾಗಿ ಬ್ರ್ಏಕ್ ಹಾಕಬೇಕಾಯಿತು. ಅದರ ಹಿಂದೆ ತೀವ್ರಗತಿಯಲ್ಲಿ ಚಲಿಸುತ್ತಿದ್ದ ಟಾಟಾ ಸುಮೋ ಲಾರಿಯೊಂದಿಗಿನ ಢಿಕ್ಕಿಯನ್ನು ತಪ್ಪಿಸಲು ರಸ್ತೆಯ ಬಲಭಾಗಕ್ಕೆ ತಿರುಗಿತು. ಆಗ ಎದುರಿನಿಂದ ಬರುತ್ತಿದ್ದ ಸುಗಮ ಟ್ರಾವೆಲ್ಸ್ ಖಾಸಗಿ ಬಸ್ಸಿಗೆ ಮುಖಾಮುಖಿ ಢಿಕ್ಕಿ ಹೊಡೆಯಿತು.
ಅತ್ಯಂತ ತೀವ್ರಗತಿಯ ಆಪಘಾತದ ಪರಿಣಾಮವಾಗಿ ಟಾಟಾ ಸುಮೇ ವಾಹನದಲ್ಲಿದ್ದ ಎಲ್ಲಾ ಹನ್ನೊಂದು ಜನರೂ ವಿಧಿವಶರಾಗಿದ್ದಾರೆ. ಲಾರಿಗೆ ಅಡ್ಡ ಬಂದ ಎತ್ತು ಸಹಾ ಸ್ಥಳದಲ್ಲಿಯೇ ಸಾವಿಗೀಡಾಗಿದೆ.
ಟಾಟಾ ಸುಮೋದಲ್ಲಿದ್ದ ಹನ್ನೊಂದು ಜನರಲ್ಲಿ ಒಂಭತ್ತು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಇನ್ನಿಬ್ಬರು ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ ಎಂದು ಡಿ.ಎಸ್.ಪಿ. ವಿಶ್ವನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.













ವಾಹನ ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸಲಾಗಿದ್ದು ಈ ಕೆಳಗಿನಂತಿವೆ:
Salma Muallim D/o Habibullah Muallim (20);
Abdul Hafeez S/o Habibullah Muallim (25);
Tausif S/o S M Syed Abdur Rahim (35);
Shariqua D/o S M Syed Abdur Rahim (35);
Uzma D/o S M Syed Abdur Rahim (26);
Gazia D/o Mohammed Ali Ruknuddin and Wife of Tausif (23);
Siddiqua Altaf S/o Siddiqua Jifri (26);
Bibi Shaahida W/o Siddiqua Jiffri (50);
Bibi Aysha D/o Shariyar Kola (35);
Shabana W/o Ashfaque Kola (19);
Zamir alias Babu (44)(Sumo Driver)
ಚಿತ್ರ, ವರದಿ: ಸಾಹಿಲ್ ವರದಿಗಾರರು, ಭಟ್ಕಳ