ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರ್ಕಳ: ಕೆ.ಎಸ್.ಹೆಗ್ಡೆ ತಾಂತ್ರಿಕ ವಿದ್ಯಾಲಯದಿಂದ ಹೊತ್ತಿಗೆ ಬಿಡುಗಡೆ

ಕಾರ್ಕಳ: ಕೆ.ಎಸ್.ಹೆಗ್ಡೆ ತಾಂತ್ರಿಕ ವಿದ್ಯಾಲಯದಿಂದ ಹೊತ್ತಿಗೆ ಬಿಡುಗಡೆ

Mon, 30 Nov 2009 17:26:00  Office Staff   S.O. News Service
ಕಾರ್ಕಳ, ನವೆಂಬರ್ ೩೦:ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್ಸಿಟ್ಯೂಟ್ ಆಫ್ ಮೆನೇಜ್‌ಮೆಂಟ್ ನಿಟ್ಟೆ ಇದರ ವತಿಯಿಂದ ಪ್ರಕಟವಾದ "ಸುದೀರ್ಘ ಬದಲಾವಣೆಗಾಗಿ ಒಳಿತಾದ ವ್ಯವಹಾರ ಪ್ರಯೋಗಗಳು" ಎಂಬ ಶೀರ್ಷಿಕೆಯುಳ್ಳ ಪುಸ್ತಕನ್ನು ನಿಟ್ಟೆ ವಿ.ವಿ ಕುಲಪತಿ ಎನ್.ವಿನಯ್ ಹೆಗ್ಡೆ ಶುಕ್ರವಾರ ಬಿಡುಗಡೆಗೊಳಿಸಿದರು.
 
ಶೈಕ್ಷಣಿಕ ಮಂಡಳಿಯ ಅಧ್ಯಕ್ಷ ಡಾ.ಎನ್.ಕೆ ತಿಂಗಳಾಯ, ಸಂಸ್ಥೆಯ ನಿರ್ದೇಶಕ ಡಾ.ಎಂ.ಎಸ್.ಮೂಡಿತ್ತಾಯ, ಪ್ರೋ. ಡಾ.ಎನ್.ಎಸ್.ಶೆಟ್ಟಿ, ಡಾ.ಜಿ.ವಿ.ಜೋಷಿ, ರಿಜಿಸ್ಟ್ರಾರ್ ಪ್ರೋ.ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು.
 
ಪ್ರೋ.ಕೆ.ಆರ್.ಕಾರ್ಣಿಕ್ ಸ್ವಾಗತಿಸಿದರು. ಲವಿನಾ ಕಾರ್ಯಕ್ರಮ ನಿರೂಪಿಸಿದರು. ಅರುಣ್ ಡಿ.ಸೋಜ ವಂದಿಸಿದರು.


Share: