ಗುಡಿಬಂಡೆ, ಡಿಸೆಂಬರ್ 01 : ಹಂಪಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ, ವಿಶ್ವ ಸ್ವಯಂ ಸೇವಾ ಸಂಸ್ಥೆ, ಮೆಗಾ ರೂರಲ್ ಡವಲಪ್‌ಮೆಂಟ್ ಸೊಸೈಟಿ, ಇವರ ಸಂಯುಕ್ತ ಆಶ್ರಯದಲ್ಲಿ ’ವಿಶ್ವ ಏಡ್ಸ್ ದಿನಾಚರಣೆ’ ಅಂಗವಾಗಿ ’ಗ್ರಾಮೀಣ ನಾಗರೀಕರಿಗೆ ಏಡ್ಸ್ ನಿಯಂತ್ರಣ ಕುರಿತು ಜಾಗೃತಿ ಜಾಥ ಹಾಗೂ ವಿಚಾರ ಸಂಕೀರ್ಣ’ ವನ್ನು ಉದ್ಘಾಟಿಸಿ ಹಾಗೂ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಘುನಾಥ್ ಮಾತನಾಡುತ್ತಾ ಹೆಚ್.ಐ.ವಿ.ಸೋಂಕಿನ ಬಗ್ಗೆ ತಿಳಿದುಕೊಳ್ಳಲು ಗ್ರಾಮೀಣ ಜನರು ಮುಂದಾಗಬೇಕು ಹಾಗೂ ನಿರ್ಲಕ್ಷ್ಯ ಧೋರಣೆ ತೋರಬಾರದೆಂದು ಹೇಳಿ ಈ ಭಯಾನಕ ರೋಗದ ವಿರುದ್ದ ಸಮರ ಸಾರಿ ಹೆಚ್.ಐ.ವಿ./ಏಡ್ಸ್ ಸೋಂಕು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲು ಯುವಕರಿಗೆ ಕರೆನೀಡಿದರು.
ಈ ಕಾರ್ಯಕ್ರಮದ ಕೇಂದ್ರ ಬಿಂದು ಹಾಗೂ ಸಂಪನ್ಮೂಲ ವ್ಯಕ್ತಿ ಬಾಗೇಪಲ್ಲಿ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್‌ರಾವ್ ಮಾತನಾಡುತ್ತಾ ಮಹಿಳೆಯರು ಮನೆಯ ಮಾರ್ಗದರ್ಶಕರಾಗಿದ್ದು ಹೆಚ್.ಐ.ವಿ./ಏಡ್ಸ್ ಬಗ್ಗೆ ಅರಿವು ಮೂಡಿಸಿಕೊಂಡು ಉತ್ತಮ ಆರೋಗ್ಯಕರ ವಾತವರಣ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿ, ಹೆಚ್.ಐ.ವಿ./ಏಡ್ಸ್ ಬಗ್ಗೆ ನೆರೆದಿದ್ದ ವಿದ್ಯಾರ್ಥಿಗಳಿಗೆ ಮತ್ತು ನಾಗರೀಕರಿಗೆ ಅರಿವು ಮೂಡಿಸಿದರು.
ಈ ಕಾರ್ಯಕ್ರಮ ತಾ|| ಸಮಾಜಕಲ್ಯಾಣಾಧಿಕಾರಿ ರಾಜಶೇಖರ್, ಸಿ.ಡಿ.ಪಿ.ಓ. ಸತ್ಯನಾರಾಯಣ, ಇ.ಓ. ಪುಟ್ಟರವರು ಮುಖ್ಯಾತಿಥಿ ಭಾಷಣದಲ್ಲಿ ಹಲವಾರು ವಿಷಯಗಳನ್ನು ತಿಳಿಸಿ ಜಾಗೃತಿ ಜಾಥಾಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮುಖ್ಯೋಪಾಧ್ಯಾಯರಾದ ಎ.ಎನ್. ಅಶ್ವಥಪ್ಪ ಮಾತನಾಡುತ್ತಾ ಈ ರೀತಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡಿರುವ ವ್ಯವಸ್ಥಾಪಕ ಸಂಸ್ಥೆಗಳನ್ನು ಪ್ರಶಂಸಿದರು.
ಈ ಕಾರ್ಯಕ್ರಮದಲ್ಲಿ ಸಬ್‌ಇನ್ಸ್‌ಪೆಕ್ಟರ್ ಅಶ್ವತ್ಥನಾರಾಯಣ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಿವಪ್ರಕಾಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಲಪತಿ, ವಿಶ್ವ ಸಂಸ್ಥೆ ಚಲಪತಿ, ಮೈರಾಡ ಸಂಸ್ಥೆಯ ಗಂಗಾಧರ್ ಮತ್ತಿತರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮೂಲಕ ಗ್ರಾಮದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಹೆಚ್.ಐ.ವಿ./ಏಡ್ಸ್ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವನ್ನು ಉನ್ನತಿ ಸಂಸ್ಥೆಯ ಅಧ್ಯಕ್ಷರಾದ ಜಿ.ವಿ. ವಿಶ್ವನಾಥ್ ಸ್ವಾಗತಿಸಿದರು, ಸಹಶಿಕ್ಷಕ ಮಂಜನಾಯಕ್ ವಂದಿಸಿದರು, ಸಹಶಿಕ್ಷಕ ತಿಪ್ಪೇಸ್ವಾಮಿ ನಿರೂಪಿಸಿದರು.