ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಆಜಾದ್ ಯೂಥ್ ಕ್ಲಬ್ ವತಿಯಿಂದ ಒಟ್ಟು ನಲವತ್ತೆರೆಡು ಮಕ್ಕಳಿಗೆ ಉಚಿತ ಖತ್ನಾ

ಭಟ್ಕಳ: ಆಜಾದ್ ಯೂಥ್ ಕ್ಲಬ್ ವತಿಯಿಂದ ಒಟ್ಟು ನಲವತ್ತೆರೆಡು ಮಕ್ಕಳಿಗೆ ಉಚಿತ ಖತ್ನಾ

Tue, 08 Dec 2009 18:26:00  Office Staff   S.O. News Service
ಭಟ್ಕಳ, ಡಿಸೆಂಬರ್ 8:  ನಗರದ ಪೂರ್ವಾರ್ಗದಲ್ಲಿರುವ ಆಜಾದ್ ಯೂಥ್ ಕ್ಲಬ್ ವತಿಯಿಂದ ಒಟ್ಟು ನಲವತ್ತೆರೆಡು ಮುಸ್ಲಿಂ ಗಂಡುಮಕ್ಕಳಿಗೆ ಉಚಿತ ಖತ್ನಾ ನಡೆಸಲಾಯಿತು.  ಡಿಸೆಂಬರ್ ೫ ಮತ್ತು ೬ನೇ ತಾರೀಖಿನಂದು ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಪವಿತ್ರ ಕುರ್ ಆನ್ ಪಠಣದ ಮೂಲಕ ಪ್ರಾರಂಭಗೊಂಡಿತು.  
7_khatna_camp_2.jpg
ಕಾರ್ಯಕ್ರಮದಲ್ಲಿ ಮೌಲಾನಾ ಅಬ್ದುಲ್ ಅಜೀಂ ಕಾಜಿಯಾ ನದ್ವಿ, ಮೌಲಾನಾ ಖಾಜಾ ಹಾಗೂ ಮೌಲಾನಾ ಮುನಾವರ್ ಹುಸೇನ್ ಪೇಶ್ಮಾಂ ಉಪಸ್ಥಿತರಿದ್ದರು. ಖ್ಯಾತ ವಿದ್ವಾಂಸ ಮೌಲಾನಾ ಮುಯೀನುದ್ದೀನ್ ಅಕ್ರಮಿ ನದ್ವಿಯವರು ಖತ್ನಾದ ಮಹತ್ವದ ಬಗ್ಗೆ ವಿವರಿಸಿದರು.  
 
7_khatna_camp_3.jpg 
ಆಜಾದ್ ಯೂಥ್ ಕ್ಲಬ್ ಸಂಘಟನೆಯ ಅಧ್ಯಕ್ಷರಾದ ಅಬೂ ಮೊಹಮ್ಮದ್ ಹಬೀಬುಲ್ಲಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.  ಉಪಸ್ಥಿತರಿದ್ದ ತಜ್ಞ ವೈದ್ಯರಾದ  ಡಾ. ಮೊಹಮ್ಮದ್ ಶಬಾಬ್ ರವರು ಖತ್ನಾ ಕರ್ಮವನ್ನು ನಿರ್ವಹಿಸಿದರು.  ಈ ಸಂದರ್ಭದಲ್ಲಿ ಸಂಘಟನೆಯ ಸಮಿತಿ ಸದಸ್ಯರಾದ ಅರೀಫ್ ಜಬಾಲಿ, ಅಬೂಬಕರ್ ದಾಂದಾ, ಅಬ್ದುಸ್ ಸತ್ತಾರ್ ಶೇಖ್, ಸಾಧಿಕ್ ಜಬಾಲಿ, ಮೊಹಮ್ಮದ್ ಅಲಿ ರಾಹತ್, ಅಬ್ದುಲ್ ಮುಯೀನ್ ಅಸಾದಿ  ಹಾಗೂ ಖಾದ್ರಿ ಬಾಯ್ರಿ ಉಪಸ್ಥಿತರಿದ್ದರು. ಹಲವು ಯುವಕರು ಸ್ವಯಂಸೇವಕರಾಗಿ ಸ್ವಯಂಪ್ರೇರಣೆಯಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾದರು. 

Share: