ಭಟ್ಕಳ, ಡಿಸೆಂಬರ್ 24:ಇಲ್ಲಿನ ನೌನಿಹಾಲ್ ಶಿಕ್ಷಣ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ಇಸ್ಲಾಮಿಕ್ ರಸಪ್ರಶ್ನೆ ಹಾಗೂ ಆಶುಭಾಷಣ ಸ್ಪರ್ಧೆಯು ಯಶಸ್ವಿಯಾಗಿ ಜರುಗಿತು. ರಾಜ್ಯದ್ಯಂತ ಒಟ್ಟು ೫೦೦ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಾಥಮಿಕ,ಫ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 2 ಲಕ್ಷ ರೂ ನಗದು ಬಹುಮಾನಗಳನ್ನು ವಿತರಿಸಲಾಯಿತು.

ಬಹುಮಾನ ವಿತರಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೌಲಾನ ಅಷಹದ್ ರಷೀದಿ ಮಾತನಾಡುತ್ತ ಇಂದು ಜಗತ್ತಿನ ಮುಸ್ಲಿಮರು ಹಲವಾರು ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಇಸ್ಲಾಮಿ ಶಿಕ್ಷಣದಿಂದ ದೂರ ಉಳಿದಿದ್ದೆ ಇದಕ್ಕೆಲ್ಲ ಕಾರಣವೆಂದು ಅವರು ಅಭಿಪ್ರಾಯಪಟ್ಟರು. ಪ್ರವಾದಿ ಮುಹಮ್ಮದ್(ಸ)ರನ್ನು ಅನುಸರಿಸಿ ನಮ್ಮ ಜೀವನವನ್ನು ಸಾಗಿಸಬೇಕೆಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಮೌಲಾನ ಅಬ್ದುಲ್ ವಹಿದ್ ಅಝಹರಿ ನದ್ವಿ ಭಟ್ಕಳದ ಖಾಜಿ ಜಮಾತುಲ್ ಮುಸ್ಲಿಮೀನ್ ಮುಲ್ಲಾ ಇಖ್ಬಾಲ್ ನದ್ವಿ, ಮೌಲಾನ ಐಯ್ಯೂಬ್ ನದ್ವಿ ನೌನಿಹಾಲ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಕೋಲಾ ಮುಝಫರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮದರಸಾ ಝಿಯವುಲ್ ಉಲೂಮ್ ಕಂಡ್ಲೂರು ನ ಮೌಲಾನ ಉಬೈದುಲ್ಲಾ ಅಬುಬಕರ್ ನದ್ವಿ ಕಾರ್ಯಕ್ರಮವನ್ನು ನರೂಪಿಸಿದರು.
ಈ ಸಂದರ್ಭದಲ್ಲಿ ನೌನಿಹಾಲ್ ಶಿಕ್ಷಣ ಸಂಸ್ಥೆಯ ಕೋಲಾ ಮುಝಫರ್ ಹಾಜರಿದ್ದರು.
ಸ್ಪರ್ದಾವಿಜೇತರ ವಿವರ:
ಆಶುಭಾಷಣ ಪ್ರಾಥಮಿಕ ವಿಭಾಗ: ಪ್ರಥಮಾ ಸೈಯ್ಯದ್ ಮುರ್ತುಝಾ ಖಾದ್ರಿ ಇಸ್ಲಾಮಿಯ ಅರಬಿಕ್ ಕಾಲೇಜ್ ಮನ್ಸೂರಾ ಹಾಸನ ಜಿಲ್ಲೆ ಹತ್ತು ಸಾವಿರ ನಗದು ಬಹುಮಾನ, ದ್ವಿತಿಯಾ:ಮುಹಮ್ಮದ್ ಅಫ್ಫಾನ್ ಝಿಯಾ ಪಬ್ಲಿಕ್ ಸ್ಕೂಲ್ ಕಂಡ್ಲೂರು ೭೦೦೦ ನಗದು, ತೃತೀಯಾ ಮುಹಮ್ಮದ್ ಇಖ್ಲಾಸ್ ಜಾಮಿಯ ಮುಹಮ್ಮದಿಯ ಬೆಂಗಳೂರು ೫೦೦೦ ನಗದು,
ಪ್ರೌಢಶಾಲಾ ವಿಭಾಗ: ಪ್ರಥಮಾ: ೧೫೦೦೦ ಸಾವಿರಾ ನಗದು ಮುಹಮ್ಮದ್ ಸುಹೇಲ್ ಜಾಮಿಯ ಮುಹಮ್ಮದಿಯ ಬೆಂಗಳೂರು, ದ್ವಿತಿಯಾ ೧೦,೦೦೦ ನಗದು ಮುಹಮ್ಮದ್ ಮಾಝ್ ಇಸ್ಲಾಮಿಯ ಆಂಗ್ಲೋ ಉರ್ದು ಪ್ರೌಢಶಾಲೆ ಭಟ್ಕಳ, ತೃತಿಯಾ ೬೦೦೦ ನದಗು ಸೈಯ್ಯದ್ ಅಬಾನ್ ಮಾಝ್ ಇಸ್ಲಾಮಿಯ ಆಂಗ್ಲೋ ಉರ್ದು ಪ್ರೌಢಶಾಲೆ ನವಾಯತ್ ಕಾಲೋನಿ ಭಟ್ಕಳ,
ಕಾಲೇಜು ವಿಭಾಗ: ಪ್ರಥಮಾ ಬಹುಮಾನ ೧೫೦೦೦ ನಗದು ಮುಹಮ್ಮದ್ ಇಸ್ಹಾಖ್ ಮೌಲಾನ ಅಝಾದ್ ಕಾಲೇಜ್ ಕಂಡ್ಲೂರು, ದ್ವಿತಿಯಾ ಬಹುಮಾನ ೧೦,೦೦೦ನಗದು ಮುಬಷ್ಶಿರ್ ಉಸ್ಮಾನ್ ಹಲ್ಲಾರೆ ಅಂಜುಮನ್ ಬಿಬಿಎ ಕಾಲೇಜ್ ಭಟ್ಕಳ, ತೃತೀಯಾ ಬಹುಮಾನ ೮,೦೦೦ ಸಾದತ್ ಹುಸೇನ್ ಭಂಡಾರ್ಸ್ ಕಾಲೇಜ್ ಕುಂದಾಪುರ
ಇಸ್ಲಾಮಿಕ್ ರಸಪ್ರಶ್ನೆ ಸ್ಪರ್ಧೆವಿವರ:
ಪ್ರಾಥಮಿಕ ವಿಭಾಗ: ಪ್ರಥಮಾ ಬಹುಮಾನ ೧೨,೦೦೦ನಗದು ನೌನಿಹಾಲ್ ಸೆಂಟ್ರಲ್ ಸ್ಕೂಲ್ ಭಟ್ಕಳ, ದ್ವಿತಿಯಾ ಬಹುಮಾನ ೮,೦೦೦ ನಗದು ಎಚ್.ಎಮ್.ಎಮ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆ ಕುಂದಾಪುರ, ತೃತೀಯಾ ಝಿಯಾ ಪಬ್ಲಿಕ್ ಸ್ಕೂಲ್ ಕಂಡ್ಲೂರು,
ಪ್ರೌಢಶಾಲೆ ವಿಭಾಗ: ಪ್ರಥಮಾ ಬಹುಮಾನ ೨೦,೦೦೦ ನಗದು ನೌನಿಹಾಲ್ ಬಾಲಕರ ಪ್ರೌಢಶಾಲೆ ಭಟ್ಕಳ, ದ್ವಿತೀಯಾ ಬಹುಮಾನ ೧೫,೦೦೦ ನಗದು ಇಸ್ಲಾಮಿಯ ಅರಬಿಕ್ ಕಾಲೇಜ್ ಮನ್ಸೂರಾ ಹಾಸನ, ತೃತೀಯ ೧೦,೦೦೦ ನಗದು ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ಭಟ್ಕಳ,
ಕಾಲೇಜ್ ವಿಭಾಗ: ಪ್ರಥಮಾ ಬಹುಮಾನ ೨೦,೦೦೦ ನಗದು ಅಂಜುಮಾನ್ ಪದವಿಪೂರ್ವ ಕಾಲೇಜ್ ಭಟ್ಕಳ ದ್ವಿತೀಯಾ ಬಹುಮಾನ ೧೫,೦೦೦ನಗದು ಭಂಡಾರಕರ್ ಆರ್ಟ್ಸ ಕಾಲೇಜ್ ಕುಂದಾಪುರ, ತೃತಿಯಾ ಬಹುಮಾನ ೧೦,೦೦೦ನಗದು ಶ್ರೀ ಶಾರದಾ ಕಾಲೆಜ್ ಬೆಂಗಳೂರು.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ