ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬAದಿಸಿದAತೆ, ನಾಮಪತ್ರಗಳ ಸಲ್ಲಿಕೆಗೆ ಮೊದಲ ದಿನವಾದ ಇಂದು ಜಿಲ್ಲೆಯಲ್ಲಿ 4 ಅಭ್ಯರ್ಥಿಗಳಿಂದ 7 ನಾಮಪತ್ರಗಳು ಸಲ್ಲಿಕೆಯಾಗಿವೆ.
ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ) ಪಕ್ಷದ ಗಣಪತಿ ಹೆಗಡೆ ಅವರು 2 ನಾಮಪತ್ರಗಳನ್ನು, ಭಾರತೀಯ ಜನತಾ ಪಕ್ಷದ ಹೆಗಡೆ ವಿಶ್ವೇಶ್ವರ ಅವರು 3 ನಾಮಪತ್ರಗಳನ್ನು , ಕರ್ನಾಟಕ ರಾಷ್ಟç ಸಮಿತಿಯ ವಿನಾಯಕ ನಾಯ್ಕ್ 1 ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿ ಕ್ರಿಶನ್ ಹನುಮಂತಪ್ಪ ಬಳೇಗಾರ 1 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಾಮಪತ್ರಗಳ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನವಾಗಿದ್ದು, 20 ರಂದು ನಾಮಪತ್ರಗಳ ಪರಿಶೀಲನೆ, 22 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.