ಕಾರವಾರ: ಕರ್ನಾಟಕ ರಾಜ್ಯ ಮೈಸೂರು ಎಂದು ನಾಮಕರಣವಾಗಿ 1 ನವಂಬರ್ 2023 ಕ್ಕೆ 50 ವರ್ಷ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥಯಾತ್ರೆಯು ಕರ್ನಾಟಕ ರಾಜ್ಯದಾದ್ಯಂತ 2-11-2023 ರಿಂದ 29 ಅಕ್ಟೊಬರ್2024 ವರೆಗೆ ಕರ್ನಾಟಕ ರಾಜ್ಯದಾದ್ಯಂತ ಸಂಚರಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅ.19 ರಿಂದ ಅ.29 ವರೆಗೆ ಸಂಚರಿಸಲಿದೆ.
ಅ.19 ರಂದು ರಥವು ಭಟ್ಕಳಕ್ಕೆ ಆಗಮಿಸಲಿದ್ದು, ಅ.20 ರ ವರೆಗೆ ಭಟ್ಕಳ ತಾಲೂಕಿನಲ್ಲಿ ರಥ ಸಂಚರಿಸಲಿದೆ. ಅ. 21 ರಂದು ಬೆಳಗ್ಗೆ 9 ಗಂಟೆಗೆ ಹೊನ್ನಾವರ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.22 ರಂದು ಬೆಳಗ್ಗೆ 9 ಗಂಟೆಗೆ ಕಾರವಾರ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚಾರಿಸಲಿದೆ. ಅ.23 ರಂದು ಬೆಳಗ್ಗೆ 9 ಗಂಟೆಗೆ ಯಲ್ಲಾಪುರ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.24 ರಂದು ಬೆಳಗ್ಗೆ 9 ಗಂಟೆಗೆ ಜೋಯಿಡಾ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.25 ರಂದು ಬೆಳಗ್ಗ 9 ಗಂಟೆಗೆ ದಾಂಡೇಲಿ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.26 ರಂದು ಬೆಳಗ್ಗೆ 9 ಗಂಟೆಗೆ ಹಳಿಯಾಳ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.27 ರಂದು ಬೆಳಗ್ಗೆ 9 ಗಂಟೆಗೆ ಮುಂಡಗೋಡ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.28 ರಂದು ಬೆಳಗ್ಗೆ 9 ಗಂಟೆಗೆ ಶಿರಸಿ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.29 ರಂದು ರಂದು ಬೆಳಗ್ಗೆ 9 ಗಂಟೆಗೆ ಸಿದ್ದಾಪುರ ತಾಲೂಕಿಗೆ ಆಗಮಿಸಲಿದ್ದು ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.