ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಜಿ.ಪಂ. ಸಿಇಓ ಈಶ್ವರಕುಮಾರ ಕಾಂದೂಗೂ ರಾಜ್ಯ ಪ್ರಶಸ್ತಿ

ಕಾರವಾರ: ಜಿ.ಪಂ. ಸಿಇಓ ಈಶ್ವರಕುಮಾರ ಕಾಂದೂಗೂ ರಾಜ್ಯ ಪ್ರಶಸ್ತಿ

Sat, 27 Jan 2024 20:42:25  Office Staff   S O News

ಕಾರವಾರ: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರಲ್ಲಿ ಜಿಲ್ಲೆಯ SVEEP ನೊಡಲ್ ಅಧಿಕಾರಿಗಳಾಗಿ SVEEP ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ರಾಜ್ಯ ಚುನಾವಣಾ ಆಯೋಗದಿಂದ ರಾಷ್ಟ್ರೀಯ ಮತದಾರರ ದಿನ-2024ರ ನಿಮಿತ್ತ ಕೊಡಮಾಡುವ ರಾಜ್ಯ ಮಟ್ಟದ ಅತ್ಯುತ್ತಮ SVEEP ನೊಡಲ್ ಅಧಿಕಾರಿ ಪ್ರಶಸ್ತಿಗೆ ಭಾಜನರಾಗಿರುವ ಉತ್ತರ ಕನ್ನಡ ಜಿಲ್ಲಾ ಪಂಚಾಯತ್‍ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದೂ ಅವರಿಗೆ ಇಂದು ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಹಮ್ಮಿಕೊಂಡಿದ್ದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು.

ಜಿಲ್ಲೆಯಲ್ಲಿ ವಿನೂತನವಾಗಿ ಸ್ವೀಪ್ ಕಾರ್ಯಕ್ರಮಗಳಾದ ಬೋಟ್ Rally, ಬೈಕ್ Rally, ವಿಶೇಷಚೇತನರ ಬೈಕ್ Rally, ಯುವ ಸಂವಾದ, ಸ್ಕೂಬಾ ಡೈವಿಂಗ್, ರಿವರ್‍ರಾಫ್ಟಿಂಗ, ಹಿರಿಯ ನಾಗರಿಕರ ಆರೋಗ್ಯ ತಪಾಸಣೆ, ಮಾದರಿ ಮತಗಟ್ಟೆಗಳು ಹಾಗೂ ಫಲಪುಷ್ಪ ಪ್ರದರ್ಶನಗಳಂತಹ ವಿವಿಧ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಯುವ ಮತದಾರರು, ಹಿರಿಯ ನಾಗರಿಕರು, ಸಾಗರೋತ್ತರ ಮತದಾರರನ್ನು ಆಕರ್ಷಿಸಿ ಮತದಾನದಲ್ಲಿ ಭಾಗವಹಿಸಿ ಹೆಚ್ಚು ಮತದಾನವಾಗಲು ಶ್ರಮಿಸಿದ ಉತ್ತರ ಕನ್ನಡ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕಾಂದೂ ಈ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ಈ ಸಂದರ್ಭದಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುμÁರ್ ಗಿರಿನಾಥ್, ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಹಾಗೂ ಕೂರ್ಮರಾವ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


Share: