ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಚುನಾವಣಾ ವೆಚ್ಚಗಳನ್ನು ಕೂಲಂಕುಷವಾಗಿ ಪರಿಶೀಲಿಸಿ: ವೆಚ್ಚ ವೀಕ್ಷಕ ಪ್ರಶಾಂತ್ ಸಿಂಗ್

ಕಾರವಾರ: ಚುನಾವಣಾ ವೆಚ್ಚಗಳನ್ನು ಕೂಲಂಕುಷವಾಗಿ ಪರಿಶೀಲಿಸಿ: ವೆಚ್ಚ ವೀಕ್ಷಕ ಪ್ರಶಾಂತ್ ಸಿಂಗ್

Sat, 13 Apr 2024 06:58:49  Office Staff   S O News

ಕಾರವಾರ: ಲೋಕ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂದಿಸಿದಂತೆ, ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ದೈನಂದಿನ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕಪತ್ರ ಪರಿಶೀಲನಾ ತಂಡ ಹೆಚ್ಚಿನ ನಿಗಾವಹಿಸಿ, ಕಾರ್ಯನಿರ್ವಹಿಸುವಂತೆ ವೆಚ್ಚ ವೀಕ್ಷ÷ಕ ಪ್ರಶಾಂತ್ ಸಿಂಗ್ ತಿಳಿಸಿದರು. 

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ , ಚುನಾವಣಾ ವೆಚ್ಚ ವೀಕ್ಷಣಾ ತಂಡದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕಸಭಾ ಚುನಾವಣೆಗೆ ಪ್ರತೀ ಅಭ್ಯರ್ಥಿಗೆ ಗರಿಷ್ಠ 95 ಲಕ್ಷಗಳ ವರೆಗೆ ವೆಚ್ಚದ ಮಿತಿ ನಿಗಧಿಪಡಿಸಿದ್ದು, ಎಲ್ಲಾ ಅಭ್ಯರ್ಥಿಗಳ ಪ್ರತಿದಿನದ ಕಾರ್ಯಕ್ರಮಗಳ ಕುರಿತು ದಾಖಲೆಗಳನ್ನು ವೀಡಿಯೋ ವೀಕ್ಷಣಾ ತಂಡಗಳಿAದ ಪಡೆದು, ಅದನ್ನು ಸೂಕ್ಷö್ಮವಾಗಿ ಪರಿಶೀಲಿಸಿ, ಅದರಲ್ಲಿನ ವೆಚ್ಚಗಳ ಕುರಿತು ದಾಖಲು ಮಾಡುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಎಲ್ಲಾ ಸಹಾಯಕ ವೆಚ್ಚ ವೀಕ್ಷಕರಿಂದ ಪ್ರತಿದಿನದ ವೆಚ್ಚದ ವರದಿಗಳನ್ನು ನಿಗಧಿತ ನಮೂನೆಯಲ್ಲಿ ಪಡೆದು ಪರಿಶೀಲಿಸುವಂತೆ ತಿಳಿಸಿದರು.

ಅಭ್ಯರ್ಥಿಗಳ ಖರ್ಚು ವೆಚ್ಚಗಳ ಕುರಿತಂತೆ ಈಗಾಗಲೇ ನಿಗದಿಪಡಿಸಿರುವ ದರಗಳನ್ನು ಲೆಕ್ಕಕ್ಕೆ ತೆಗದುಕೊಳ್ಳುವಂತೆ ತಿಳಿಸಿದ ಅವರು, ಅಭ್ಯರ್ಥಿಗಳ ವೆಚ್ಚದ ರಿಜಿಸ್ಟರ್ ಗಳನ್ನು ಕಾಲ ಕಾಲಕ್ಕೆ ತಾಳೆ ಮಾಡುವಂತೆ ಸೂಚಿಸಿದರು. 

ಲೆಕ್ಕಪತ್ರ ಪರಿಶೀಲನಾ ತಂಡದಲ್ಲಿನ ಎಲ್ಲಾ ಅಧಿಕಾರಿಗಳು ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿ ಮತ್ತು ನಿರ್ದೇಶನಗಳನ್ನು ತಪ್ಪದೇ ಪಾಲಿಸುವುದರ ಮೂಲಕ ಜಿಲ್ಲೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಚುನಾವಣಾ ವೆಚ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾದಿಕಾರಿ ಆನಂದ್ ಸಾ ಹಾಗೂ ಲೆಕ್ಕಪತ್ರ ಪರಿಶೀಲನಾ ತಂಡದ ಅಧಿಕಾರಿಗಳು ಉಪಸ್ಥಿತರಿದ್ದರು.


Share: