ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಚುನಾವಣಾ ತರಬೇತಿಗೆ ತೆರಳಲು ಬಸ್ ವ್ಯವಸ್ಥೆ

ಕಾರವಾರ: ಚುನಾವಣಾ ತರಬೇತಿಗೆ ತೆರಳಲು ಬಸ್ ವ್ಯವಸ್ಥೆ

Tue, 30 Apr 2024 05:27:50  Office Staff   S O News

ಕಾರವಾರ : ಲೋಕಸಭಾ ಚುನಾವಣೆ 2024ಕ್ಕೆ ಸಂಬAಧಿಸಿದAತೆ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಿ.ಆರ್.ಓ, ಎ.ಪಿ.ಆರ್.ಓ, ಪಿ.ಓ-1 ಹಾಗೂ ಪಿ.ಓ-2 ರವರಿಗೆ ಎರಡನೇ ಹಂತದ ಚುನಾವಣಾ ತರಬೇತಿಯನ್ನು ಮೇ 2 ರಂದು ಆಯೋಜಿಸಲಾಗಿದೆ.

ಮತಗಟ್ಟೆ ಅಧಿಕಾರಿಗಳಿಗೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ತರಬೇತಿಗೆ ತೆರಳಲು ಕಾರವಾರ ತಹಶೀಲ್ದಾರ ಕಚೇರಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. 78-ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಬೆಳಗ್ಗೆ 6 ಗಂಟೆ, 79-ಭಟ್ಕಳಗೆ ತೆರಳಲು ಬೆಳಗ್ಗೆ 5.30 ಗಂಟೆ, 80-ಶಿರಸಿಗೆ ತೆರಳಲು ಬೆಳಗ್ಗೆ 5.30 ಗಂಟೆ, 81-ಯಲ್ಲಾಪುರ ತೆರಳಲು ಬೆಳಗ್ಗೆ 6 ಗಂಟೆ ಹಾಗೂ 76-ಹಳಿಯಾಳಗೆ ತೆರಳಲು ಬೆಳಗ್ಗೆ 5.30 ಗಂಟೆಗೆ ಕಾರವಾರ ತಾಲೂಕು ಕಚೇರಿಯಿಂದ ವಾಹನ ಹೊರಡಲಿದೆ. ಮತಗಟ್ಟೆ ಅಧಿಕಾರಿಗಳು ನಿಗಧಿತ ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ಕಾರವಾರ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: