ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಚುನಾವಣಾ ಕಂಟ್ರೋಲ್ ರೂಂ ಗೆ ವೆಚ್ಚ ವೀಕ್ಷಕರ ಭೇಟಿ

ಕಾರವಾರ: ಚುನಾವಣಾ ಕಂಟ್ರೋಲ್ ರೂಂ ಗೆ ವೆಚ್ಚ ವೀಕ್ಷಕರ ಭೇಟಿ

Sun, 21 Apr 2024 01:02:54  Office Staff   S O News

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರದಿರುವ 24*7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಗೆ ಚುನಾವಣಾ ವೆಚ್ಚ ವೀಕ್ಷ÷ಕ ಪ್ರಶಾಂತ್ ಸಿಂಗ್ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಂಟ್ರೋಲ್ ರೂಂ ನಲ್ಲಿ ವೀಡಿಯೋ ವೀಕ್ಷಣಾ ಕಾರ್ಯ, ಮೀಡಿಯಾ ಸ್ಕçೃಟಿನಿ, ಚೆಕ್ ಪೋಸ್ಟ್ ಸಿಸಿಟಿವಿ ಪರಿಶೀಲನೆ, ಜಿ.ಪಿ.ಎಸ್. ಪರಿಶೀಲನೆ, ಸಿವಿಜಿಲ್ ದೂರು ನಿರ್ವಹಣೆ, ಉಚಿತ ಸಹಾಯವಾಣಿ 1950 ಕಾರ್ಯವಿಧಾನ, ಸೋಷಿಯಲ್ ಮೀಡಿಯಾ ತಂಡದ ಪರಿಶೀಲನಾ ಕಾರ್ಯಗಳು, ಎಂ.ಸಿ.ಎA.ಸಿ ಕಾರ್ಯ ನಿರ್ವಹಣೆ ಕುರಿತಂತೆ ಪರಿಶೀಲಿಸಿದ ಅವರು, ಕಂಟ್ರೋಲ್ ರೂಂ ನಲ್ಲಿ ವಿವಿಧ ಕರ್ತವ್ಯಗಳಿಗೆ ನಿಯೋಜಿಸಿರುವ ಎಲ್ಲಾ ಸಿಬ್ಬಂದಿಗಳು ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆನಂದಸಾ, ಎಂ.ಸಿ.ಎA.ಸಿ. ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್ ಉಪಸ್ಥಿತರಿದ್ದರು.


Share: