ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಆಹ್ವಾನ

ಕಾರವಾರ: ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಆಹ್ವಾನ

Tue, 06 Feb 2024 19:37:02  Office Staff   S O News

ಕಾರವಾರ: ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಗಳಿದ್ದು, 210 ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರ ಈಗಾಗಲೇ ಅನುಷ್ಠಾನಗೊಂಡಿದ್ದು, ಉಳಿದ 17 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಹ ಫ್ರಾಂಚೈಸಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ. 

ಭಟ್ಕಳ ತಾಲೂಕು ವ್ಯಾಪ್ತಿಯ 1 , ದಾಂಡೇಲಿ 3, ಕಾರವಾರದಲ್ಲಿ 2 , ಕುಮಟಾದಲ್ಲಿ 1, ಶಿರಸಿಯಲ್ಲಿ 2, ಜೋಯಡಾ 6, ಯಲ್ಲಾಪುರ 2 ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಹ ಫ್ರಾಂಚೈಸಿಗಳಿAದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನವಾಗಿದ್ದು, ಅರ್ಹ ಫ್ರಾಂಚೈಸಿಗಳು https://www.karnatakaone.gov.in/Public/GramOneFranchiseeTerms  ಲಿಂಕ್ ಮೂಲಕ ಗ್ರಾಮ ಒನ್ ಫ್ರಾಂಚೈಸಿ ಕೇಂದ್ರಗಳ ಸ್ಥಾಪನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: