ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ರಾಜ್ಯ ಹೆದ್ದಾರಿ 112 ದುರವಸ್ಥೆ - ಬಾಳ್ಳುಪೇಟೆಯಲ್ಲಿ ಎರೆಡು ಘಂಟೆಗಳ ಕಾಲ ಪ್ರತಿಭಟನೆ

ಸಕಲೇಶಪುರ: ರಾಜ್ಯ ಹೆದ್ದಾರಿ 112 ದುರವಸ್ಥೆ - ಬಾಳ್ಳುಪೇಟೆಯಲ್ಲಿ ಎರೆಡು ಘಂಟೆಗಳ ಕಾಲ ಪ್ರತಿಭಟನೆ

Thu, 26 Nov 2009 14:48:00  Office Staff   S.O. News Service
ಸಕಲೇಶಪುರ, ನವೆಂಬರ್ 26: ರಾಜ್ಯ ಹೆದ್ದಾರಿ 112 ರ ದುಸ್ಥತಿಯನ್ನು ಖಂಡಿಸಿ ತಾಲ್ಲೂಕು ಯುವ ಕಾಂಗ್ರೇಸ್ ವತಿಯಿಂದ ಬಾಳ್ಳುಪೇಟೆ ವೃತದಲ್ಲಿ ಸಮಾರು ಎರಡು ಗಂಟೆಗಳ ಕಾಲ ಬೃಹತ್ ಪ್ರತಿಭಟನೆ ನೆಡಸಲಾಯಿತ್ತು. ಸುಮಾರು 30 ವರ್ಷಗಳಿಂದ ಅಬಿವೃದ್ದಿ ಕಾಣದ ಬಾಳ್ಳುಪೇಟೆ ರಸ್ತೆಯಲ್ಲಿ ವಾಹನ ಸಂಚಾರ ಅಸಾದ್ಯವಾಗಿದೆ ರಸ್ತೆ ಹಿಂದೆಂದು ಕಂಡು ಅರಿಯದೂಷ್ಟು ಪ್ರಮಾಣದಲ್ಲಿ ಹಾಳಾಗಿದ್ದರು ಸರ್ಕಾರ ದುರಸ್ಥಿತಿಗೆ ಮುಂದಾಗಿಲ್ಲ ಎಂದು ಆರೋಪಿಸಿದ ಪ್ರತಿಭಟನಕಾರರು ಬಾಳ್ಳುಪೇಟೆ ಕೂಡ್ಲೀಪೇಟೆ ರಸ್ತೆಗೆ ಶಾಮಿಯಾನ ಹಾಕಿ ಪ್ರತಿಭಟಿಸಿದ್ದಲ್ಲದೆ ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು 10 ನಿಮಿಷಗಳ ಬಂದ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಸಹಕಾರ ನೀಡಿದ ಬಾಳ್ಳುಪೇಟೆ ಗ್ರಾಮದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಪ್ರೇರಣೆಯಿಂದ ಮುಚ್ಚಿದ್ದರು.

ಈ ವೇಳೆ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಕಾಂಗ್ರೇಸ್ ಅಧ್ಯಕ್ಷ ಹೆಚ್.ಪಿ ಕಾಂತರಾಜ್ ಕೇತ್ರದಾದ್ಯಂತ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು  ಕಳೆದ ಅರ್ದ ದಶಕದಿಂದ ಕ್ಷೇತ್ರದಲ್ಲಿ ರಸ್ತೆ ಅಬಿವೃದ್ದಿ ಕಾಮಗಾರಿಗಳು ನೆಡಯದಿರುವುದೆ ರಸ್ತೆಗಳ ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದರು. 

ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಸಣ್ಣಸ್ವಾಮಿ ಮಾತನಾಡಿ ಕ್ಷೇತ್ರಕ್ಕೂಬ್ಬರು ಶಾಸಕರಿದ್ದರೆ ಎಂಬುದನ್ನೇ ಜನತೆ ಮರೆತಿದ್ದಾರೆ ಎಲ್ಲ ಮೂಲ ಭೂತ ಸೌಲಭ್ಯಗಳಿಂದ ವಂಚಿತರಾಗುತಿರುವ ಜನತೆ ಶಾಸಕರಿಗೆ ಹಾಗು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದರು. 

ತಾಲ್ಲೂಕು ಯುವ ಕಾಂಗ್ರಸ್ ಅಧ್ಯಕ್ಷ ಹೆಗ್ಗೂವೆ ಸಂಜಯ್ ಇನ್ನೂ 15 ದಿನಗಳ ಅವದಿಯಲ್ಲಿ ರಸ್ತೆ ಅಬಿವೃದ್ದಿಗೆ ಸರ್ಕಾರ ಚಾಲನೆ ನೀಡದಿದ್ದರೆ ತಾಲ್ಲೂಕು ಕಾಂಗ್ರೇಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೂಳ್ಳಲಾಗುವುದು ಎಂದರು.

ಪ್ರತಿಭಟನಾ ಸ್ಥಳಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಬಿಯಂತರ ರಾಮಚಂದ್ರಪ್ಪ ಮಾತನಾಡಿ ಬಾಳ್ಳುಪೇಟೆ ಮಾಗಲುವರಗಿನ ೧೬.೮ ಕೀಮಿ ರಸ್ತೆಯಲ್ಲಿ ೫.೪ ಕೀಮಿ ರಸ್ತೆ ಅಬಿವೃದ್ದಿಗೆ ಹಣ ಬಿಡುಗಡೆಯಾಗಿದೆ ಉಳಿದ ರಸ್ತೆ ಅಬಿವೃದ್ದಿಗೆ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಲಾಗಿದೆ ಆದರೆ ಇದುವರಗೆ ಹಣ ಬೀಡುಗಡೆಯಾಗಿಲ್ಲ ಮತ್ತೂಮ್ಮೆ ಸರ್ಕಾರಕ್ಕೆ ಹಣ ಬಿಡುಗಡೆಗಾಗಿ ಮನವಿ ಮಾಡಲಾಗುವುದು ಎಂದರು. ತಾತ್ಕಲಿಕವಾಗಿ ಗುಂಡಿ ಮುಚ್ಚುವ ಕೆಲಸವನ್ನು ಇಲಾಖೆ ನಾಳೆಯಿಂದಲೆ ಆರಂಭಿಸಲಿದೆ ಎಂದರು. 

ಪ್ರತಿಭಟನೆ ನೇತ್ರತ್ವವವನ್ನು  ಜಿಲ್ಲಾಯುವಕಾಂಗ್ರಸ್ ಅಧ್ಯಕ್ಷ ಮದುಸೋದನ್,ತುಳುಸಿಪ್ರಸಾದ್, ಬಾಳ್ಳುಗೋಪಾಲ್ ವಹಿಸಿದ್ದರು.


Share: