ಕಾರವಾರ: ಬೆಂಗಳೂರು ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತವಾಗಿ ವಸತಿಸಹಿತ ಮೋಟಾರ್ ರಿವೈಂಡಿಂಗ್ ಮತ್ತು ಸರ್ವಿಸಿಂಗ್, ಸಿ.ಸಿ.ಟಿ.ವಿ.ಅಳವಡಿಕೆ, ಸ್ಮೋಕ್ ಡಿಟೆಕ್ಟರ್ ಸರ್ವಿಸಿಂಗ್ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಆಯೋಜಿಸಲಾಗಿದೆ.
ಮೋಟಾರ್ ರಿವೈಂಡಿಂಗ್ ಮತ್ತು ಸರ್ವಿಸಿಂಗ್ ತರಬೇತಿ ನವೆಂಬರ್ 6 ರಿಂದ ಡಿಸೆಂಬರ್ 5 ರವರೆಗೆ 30 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಹಾಗೂ ಸಿ.ಸಿ.ಟಿ.ವಿ.ಅಳವಡಿಕೆ, ಸ್ಮೋಕ್ ಡಿಟೆಕ್ಟರ್ ಸರ್ವಿಸಿಂಗ್ ತರಬೇತಿಯನ್ನು ಅ.18 ರಿಂದ ಅ 30 ವರೆಗೆ 13 ದಿನಗಳ ಕಾಲ ನಡೆಯಲಿದೆ. ಆಸಕ್ತ ಗ್ರಾಮೀಣ ಅಭ್ಯರ್ಥಿಗಳಾಗಿದ್ದು 18 ರಿಂದ 45 ವಯೋಮಾನದವರಾಗಿರಬೇಕು. ಕಡ್ಡಾಯವಾಗಿ ಬಿ.ಪಿ.ಎಲ್/ಪಿ.ಹೆಚ್.ಹೆಚ್/ಅಂತ್ಯೋದಯ/ಎ0.ಜಿ.-ನರೇಗಾ ಯೋಜನೆಯಡಿಯಲ್ಲಿ ಜಾಬ್ ಕಾರ್ಡನ್ನು ಹೊಂದಿರುವ ಕುಟುಂಬದ ಸದಸ್ಯರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ರುಡ್ ಸೆಟ್ ಸಂಸ್ಥೆ ಅರಿಶಿನಕುಂಟೆ, ನೆಲಮಂಗಲ ತಾ||, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊಬೈಲ್ ಸಂಖ್ಯೆ : 8105526792, 9241482541, 9113880324 ಸಂಪರ್ಕಿಸುವಂತೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.