ಕಾರವಾರ: ಬಡ, ಮಧ್ಯಮ ವರ್ಗ, ಯಾವುದೇ ಜಾತಿ ಧರ್ಮವೆನ್ನದೇ ಹೆಚ್. ಐ. ವಿ. ಸೋಂಕಿತರ 1 ರಿಂದ 18 ವರ್ಷದವರೆಗಿನ ಮಕ್ಕಳಿಗೆ ಪ್ರತಿ ತಿಂಗಳು ರೂ.1000/- ರಂತೆ 18 ವರ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ.
ಈ ಯೋಜನೆ ಹೆಚ್.ಐ.ವಿ. ಪೀಡಿತರ ಮಕ್ಕಳಿಗೆ ವೈದ್ಯಕೀಯ, ಪೌಷ್ಠಿಕ ಆಹಾರ, ಶಿಕ್ಷಣ ಇತರೆ ಅವಶ್ಯಕತೆಗಳನ್ನು ಪೂರೈಸಲು ಸಹಾಯಕವಾಗಿದೆ. ಮುಖ್ಯವಾಹಿನಿಗೆ ಬರಲು ಯಾರಿಗೂ ತಿಳಿಸದೇ ಮಕ್ಕಳ ಜಂಟಿ ಖಾತೆಗಳಿಗೆ ಈ ಹಣ ಜಮಾ ಮಾಡಲಾಗುತ್ತದೆ. ಸೋಂಕಿತರ ಮಕ್ಕಳು ಎಂಬುದನ್ನು ಗೌಪ್ಯವಾಗಿಡಲಾಗುತ್ತದೆ. ಒಂದೇ ಮನೆಯಲ್ಲಿ ಐದಾರು ಮಕ್ಕಳಿದ್ದರೂ ಎಲ್ಲರೂ ಇದರ ಲಾಭ ಪಡೆದುಕೊಳ್ಳಬಹುದಾಗಿದೆ.
ದಾಖಲಾತಿಗಳು: ಮಗುವಿನ ತಂದೆ ಅಥವಾ ತಾಯಿ ಎ.ಆರ್.ಟಿ. ನೋಂದಣಿ ಕಡ್ಡಾಯ, ಮಗುವಿನ ಆಧಾರ್ ಕಾರ್ಡ ಪ್ರತಿ, ಮಗುವಿನ ಬ್ಯಾಂಕ್ ಖಾತೆಗೆ (ಓPಅI ಮ್ಯಾಪಿಂಗ್ ಮಾಡಿಸಿಕೊಳ್ಳುವುದು) ರೇಷನ್ ಕಾರ್ಡ ಪ್ರತಿ, ಮಗುವಿನ ಪಾಸ್ ಪೋರ್ಟ ಸೈಜ್ 2 ಪೋಟೊಗಳು
ಆಯ್ಕೆ ವಿಧಾನ: ಅರ್ಜಿ ಸ್ವೀಕಾರವಾದ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಛೇರಿಯಿಂದ ದಾಖಲಾತಿಗಳನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನುಮೋದನೆ ಪಡೆದು ಆರ್ಥಿಕ ಸಹಾಯಧನವನ್ನು ಡಿಬಿಟಿ ಮುಖಾಂತರ ನೇರವಾಗಿ ಮಗುವಿನ ಖಾತೆಗೆ ಜಮೆ ಮಾಡಲಾಗುವುದು.
ಅರ್ಜಿಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಎಚ್.ಐ.ವಿ. ಪಿಡಿತ ಫಲಾನುಭವಿಗಳು ಎಲ್ಲಾ ದಾಖಲಾತಿಗಳನ್ನು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿಗಳ ಕಛೇರಿಯ (DAPCO) ವಿಭಾಗ ಕಾರವಾರ- 581301 ನ್ನು ನವೆಂಬರ್ 30 ರೊಳಗೆ ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.