ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಉದ್ಯಮಿಯ ಹತ್ಯೆ, ಪತ್ನಿಗೆ ಗಂಭೀರ ಗಾಯ – ಹಣಕೋಣ ಗ್ರಾಮದಲ್ಲಿ ದುಷ್ಕರ್ಮಿಗಳ ದಾಳಿ

ಕಾರವಾರ: ಉದ್ಯಮಿಯ ಹತ್ಯೆ, ಪತ್ನಿಗೆ ಗಂಭೀರ ಗಾಯ – ಹಣಕೋಣ ಗ್ರಾಮದಲ್ಲಿ ದುಷ್ಕರ್ಮಿಗಳ ದಾಳಿ

Sun, 22 Sep 2024 21:15:53  Office Staff   SOnews

 

ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ಇಂದು ಮುಂಜಾನೆ ಅಪರಿಚಿತ ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ಉದ್ಯಮಿ ವಿನಾಯಕ ನಾಯ್ಕ (54) ಅವರನ್ನು ಹತ್ಯೆಗೈದು, ಅವರ ಪತ್ನಿ ವೈಶಾಲಿ ಅವರನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.

ವಿನಾಯಕ ಮತ್ತು ವೈಶಾಲಿ ದಂಪತಿ ಪುಣೆ ನಗರದಲ್ಲಿ ವಾಸವಿದ್ದು, ಕೈಗಾರಿಕೋದ್ಯಮ ನಡೆಸುತ್ತಿದ್ದರು. ಅವರು ಇತ್ತೀಚೆಗೆ ಸಾತೇರಿ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಹಣಕೋಣಕ್ಕೆ ಬಂದಿದ್ದು, ತಮ್ಮ ಸ್ವಗೃಹದಲ್ಲಿ ವಾಸವಿದ್ದರು. ಇಂದು ಮುಂಜಾನೆ ದರೋಡೆಕೋರರು ದಂಪತಿಯ ಮೇಲೆ ದಾಳಿ ನಡೆಸಿದ್ದಾರೆ.

ವಿನಾಯಕ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತ್ನಿ ವೈಶಾಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಯನ್ನು ಚಿತ್ತಾಕುಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಹಳೇ ವೈಷಮ್ಯ ಅಥವಾ ದರೋಡೆಯ ಕಾರಣವೇ ಎಂಬುದು ತನಿಖೆಯಿಂದ ತಿಳಿದುಬರಲಿದೆ.

murder21.jpg


Share: