ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

Sun, 29 Oct 2023 00:04:11  Office Staff   S O News

ಕಾರವಾರ: ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯ 76-ಹಳಿಯಾಳ, 77-ಕಾರವಾರ, 78-ಕುಮಟಾ, 79-ಭಟ್ಕಳ, 80-ಶಿರಸಿ, 81-ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತಹಶೀಲ್ದಾರರ, ಉಪ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ  ಪ್ರಕಟಿಸಲಾಗಿದ್ದು, ಕರಡು ಮತದಾರರ ಪಟ್ಟಿಗಳಲ್ಲಿ ಸಾರ್ವಜನಿಕರು ತಮ್ಮ ಹೆಸರು ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದು.

ಅರ್ಹತಾ ದಿನಾಂಕ: 01-01-2024ಕ್ಕೆ ಸಂಬಂಧಿಸಿದಂತೆ ಯುವಕರು/ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು  ಸೇರ್ಪಡೆಗಾಗಿ ನಮೂನೆ-6 ರಲ್ಲಿ ಮತ್ತು ಹೆಸರು ಕಡಿಮೆಗೊಳಿಸಲು ನಮೂನೆ-7 ರಲ್ಲಿ ಮತ್ತು ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8 ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿರವರಿಗೆ (ಬಿಎಲ್‍ಓ), ಸಹಾಯಕ ಮತದಾರರ ನೋಂದಣಾಧಿಕಾರಿ ( ತಹಶೀಲ್ದಾರ) ಕಚೇರಿಗೆ ಚುನಾವಣಾ ವೇಳಾಪಟ್ಟಿಯಂತೆ  ದಿನಾಂಕ:27-10-2023 ರಿಂದ 09-12-2023ರ ಅವಧಿಯಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ನೀಡಲು ಅವಕಾಶ ನೀಡಲಾಗಿದೆ.

ಜಿಲ್ಲೆಯ ಮತಗಟ್ಟೆಯಲ್ಲಿ ನವೆಂಬರ್ ತಿಂಗಳಲ್ಲಿ 18 ಮತ್ತು 19 ರಂದು ಹಾಗೂ ಡಿಸೆಂಬರ್ ತಿಂಗಳಲ್ಲಿ 2 ಮತ್ತು 3 ರಂದು ವಿಶೇಷ ಆಂದೋಲನ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅಧಿಸೂಚನೆ ದಿನಾಂಕ:05-01-2024 ಆಗಿರುತ್ತದೆ.

 ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದಿಂದ ಬಿ.ಎಲ್.ಎ ನೇಮಕಾತಿ ಮಾಡಿ, ಬಿ.ಎಲ್.ಎ. ನೇಮಕಾತಿ ಮಾಡಿದ ಬಗ್ಗೆ ಅವರ ಹೆಸರು, ಮತಗಟ್ಟೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಪಟ್ಟಿಯನ್ನು ತಹಶೀಲ್ದಾರ ರವರಿಗೆ ನೀಡಬೇಕು.

18-19 ವರ್ಷದ ಯುವ ಮತದಾರರ ನೋಂದಣಿ ಮಾಡಲಾಗುವುದು. ಸಾರ್ವಜನಿಕರಿಗೆ       ಮೊಬೈಲ್ ಆ್ಯಪ್ ಮುಖಾಂತರ ತಮ್ಮ ಹೆಸರುಗಳನ್ನು ನೋಂದಾಯಿಸಲು, ತಿದ್ದುಪಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಹಾಗೂ ಮತಗಟ್ಟೆ ಅಧಿಕಾರಿಯ ಸಹಾಯದಿಂದ  ಮುಖಾಂತರ ಹೆಸರು ಮತ್ತು ವಿಳಾಸ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 91,324 ಪುರುಷರು, 90,231 ಮಹಿಳೆಯರು, 2 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 1,81,557 ಮತದಾರರಿದ್ದು,  ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ 1,08,637 ಪುರುಷರು, 1,11,799 ಮಹಿಳೆಯರು ಸೇರಿದಂತೆ ಒಟ್ಟು 2,20,436 ಮತದಾರರು,   ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ 94,288 ಪುರುಷರು, 94,612 ಮಹಿಳೆಯರು, 3 ತೃತೀಯ ಲಿಂಗ ಸೇರಿದಂತೆ ಒಟ್ಟು 1,88,903 ಮತದಾರರು,  ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 1,13,302 ಪುರುಷರು, 1,10,027 ಮಹಿಳೆಯರು ಸೇರಿದಂತೆ ಒಟ್ಟು 2,23,329 ಮತದಾರರು. ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 1,00,925 ಪುರುಷರು, 1,00,214 ಮಹಿಳೆಯರು, 2 ತೃತೀಯ ಲಿಂಗ ಸೇರಿದಂತೆ ಒಟ್ಟು 2,01,141 ಮತದಾರರು. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 92,506 ಪುರುಷರು, 90,659 ಮಹಿಳೆಯರು, 1 ತೃತಿಯ ಲಿಂಗದ ಸೇರಿದಂತೆ ಒಟ್ಟು 1,83,166 ಮತದಾರರಿದ್ದು, ಜಿಲ್ಲೆಯಲ್ಲಿ ಒಟ್ಟು 6,00,982 ಪುರುಷರು, 5,97,542 ಮಹಿಳೆಯರು ಹಾಗೂ 8 ತೃತೀಯ ಲಿಂಗದವರು ಸೇರಿದಂತೆ ಒಟ್ಟು 11,98,532 ಮತದಾರರಿದ್ದಾರೆ.


Share: