ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಆ.25 ರಿಂದ ಆ.27 ರವರೆಗೆ ಮೂರು ದಿನಗಳ ರಾಷ್ಟೀಯ ಸಮ್ಮೇಳನ

ಕಾರವಾರ: ಆ.25 ರಿಂದ ಆ.27 ರವರೆಗೆ ಮೂರು ದಿನಗಳ ರಾಷ್ಟೀಯ ಸಮ್ಮೇಳನ

Sun, 25 Aug 2024 01:24:17  Office Staff   S O News

ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಭಾರತ ಸರ್ಕಾರದ ರಾಷ್ಟೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ, ಹೈದ್ರಾಬಾದ್ ಮತ್ತು ಮೀನುಗಾರಿಕಾ ಇಲಾಖೆ, ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ  ‘Blue Revolution for Sustainable Fisheries Development’ ವಿಷಯದ ಮೇಲೆ ಆ.25 ರಿಂದ ಆ.27 ರವರೆಗೆ ಮೂರು ದಿನಗಳ ರಾಷ್ಟೀಯ ಸಮ್ಮೇಳನವನ್ನು ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಸಮ್ಮೇಳನದಲ್ಲಿ ವಿವಿಧ ಪ್ರತಿಷ್ಠತ ಸಂಸ್ಥೆಗಳ ನುರಿತ ವಿಜ್ಞಾನಿಗಳಿಂದ ತಾಂತ್ರಿಕ ಉಪನ್ಯಾಸಗಳು ನಡೆಯಲಿದ್ದು, ಮೀನುಗಾರಿಕಾ ಉದ್ಯಮಗಳಿಂದ ಪ್ರದರ್ಶನ ಮಳಿಗೆಯನ್ನು ಏರ್ಪಡಿಸಲಾಗಿದೆ. ಈ ಸಮೇಳನದಲ್ಲಿ ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು Research Paper presentation ಸಹ ಮಂಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆಯಾದ Research Paper ಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು. ಈ ಸಮ್ಮೇಳನದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಸೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ನಯುವ ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು, ಮೀನುಗಾರಿಕಾ ಉದ್ಯಮಿಗಳು ಭಾಗವಹಿಸಬಹುದಾಗಿದ್ದು, ಆಸಕ್ತ ಪ್ರತಿನಿಧಿಗಳು ಸೆಪ್ಟೆಂಬರ್ 10 ರೊಳಗಾಗಿ Google form- https://forms.gle/jAsgv6kGf6W34Lpa8 ಮೂಲಕ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಅಧಿಕಾರಿಗಳ ಮೊ.ನಂ: 9620767819 ದೂ.ಸಂಖ್ಯೆ: 080-29721550 ನ್ನು sಸಂರ್ಕಿಸಬಹುದು ಅಥವಾ ಅಕಾಡೆಮಿಯ ಇ-ಮೇಲ್ www.kstacademy.in ನ್ನು ವೀಕ್ಷಿಸಬಹುದು ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: