ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ : ಮನೆ ಗೋಡೆ ಕುಸಿದು ವೃದ್ಧೆ ಸಾವು.

ಕಾರವಾರ : ಮನೆ ಗೋಡೆ ಕುಸಿದು ವೃದ್ಧೆ ಸಾವು.

Sat, 29 Jun 2024 22:35:10  Office Staff   SO News

ಕಾರವಾರ:   ಮಣ್ಣಿನ ಗೋಡೆ ಕುಸಿದು ವೃದ್ಧೆಯೋರ್ವಳು ಮೃತಪಟ್ಟ ಘಟನೆ  ಕಾರವಾರ ತಾಲೂಕಿನ  ಅರವ ಗ್ರಾಮದಲ್ಲಿ  ನಡೆದಿದೆ.

ರುಕ್ಮಾ ಮಾಂಜರೆಕರ್ (70)  ಸಾವನ್ನಪ್ಪಿದ ಮಹಿಳೆ.  ರುಕ್ಮ ತನ್ನ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಳು. ಗುರುವಾರ ತಮ್ಮ ಹಳೆಯ ಮನೆ ಸಮೀಪದಿಂದ ನಡೆದು ಹೋಗುತ್ತಿದ್ದಾಗ ಗೋಡೆ ಕುಸಿದು ಬಿದ್ದಿದೆ.

ಮಣ್ಣಿನಡಿ ಬಿದ್ದ ಆಕೆಯನ್ನ ಯಾರು ಗಮನಿಸಿರಲಿಲ್ಲ. ಮಳೆ ಬಂದ ವೇಳೆ ಕುಸಿದ ಮಣ್ಣಿನಲ್ಲಿ ಕಾಲು ಕಂಡಾಗ ಜನರಿಗೆ ಗೊತ್ತಾಗಿದೆ.  ಸ್ಥಳಕ್ಕೆ ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನ್ಹಾ ಮತ್ತು ಚಿತ್ತಾಕುಲ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share: