ಭಟ್ಕಳ, ಜನವರಿ 15: ತಾಲೂಕಿನ ಬೆಳಕೆ ಗ್ರಾ.ಪಂ ವ್ಯಾಪ್ತಿಯ ಕೋಟಕುಳಿ ಎಂಬಲ್ಲಿ ವ್ಯಕ್ತಿಯೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆಯು ಗುರುವಾರ ರಾತ್ರಿ ಸಂಭವಿಸಿದ್ದು ಮೃತ ದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ದುರ್ಗಪ್ಪ ಕುಪ್ಪನಾಯ್ಕ (48) ಎಂದು ಗುರುತಿಸಲಾಗಿದೆ. ಪೋಲಿಸರು ಇದೊಂದು ಅಸಹಜ ಸಾವು ಪ್ರಕರಣವೆಂದು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ರಾತ್ರಿಯು ಭಟ್ಕಳ ತಾಲೂಕಿನಾದ್ಯಂತ ಗುಡುಗು ಸಿಡಿಲಿನಿಂದ ಕೂಡಿದ ಬಾರಿ ಮಳೆ ಬಿದ್ದಿದ್ದು ಈ ವ್ಯಕ್ತಿಯು ರಾತ್ರಿ ಸಿಡಿಲು ಬಡಿದು ಸತ್ತಿರಬಹುದು ಎಂದು ಶಂಕಿಸಲಾಗಿದೆ.
ಆದರೆ ಸ್ಥಳಿಯರು ಇದೊಂದು ಕೊಲೆಯಾಗಿರಬಹುದು ಎಂದು ಶಂಕಿಸಿದ್ದು ಪೋಲಿಸರ ತನಿಖೆಯಿಂದಲೆ ಘಟನೆಯ ನೈಜತೆಯನ್ನು ಅರಿಯಬಹುದಾಗಿದೆ.