ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆಗೆ ಸಂದರ್ಶನವಿಲ್ಲ

ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆಗೆ ಸಂದರ್ಶನವಿಲ್ಲ

Tue, 24 Nov 2009 17:51:00  Office Staff   S.O. News Service
ಚಿಕ್ಕಬಳ್ಳಾಪುರ, ನವೆಂಬರ್ 24: ೨೦೦೯-೧೦ನೇ ಸಾಲಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ಖಾಲಿ ಇರುವ ಬಗ್ಗೆ ಗ್ರಾಮವಾರು ಅರ್ಜಿ ಕರೆದಿದ್ದು ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಸಂದರ್ಶವನ್ನು ಕರೆಯಲಾಗುವುದಿಲ್ಲ. ಆಯ್ಕೆ ಸಮಿತಿ ಮುಖಾಂತರ ನಿಯಮಾನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾನ್ಯತಾ ಆದೇಶವನ್ನು ತಮ್ಮ ವಿಳಾಸಕ್ಕೆ ಕಳುಹಿಸಲಾಗುವುದು ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಚಿಕ್ಕಬಳ್ಳಾಪುರ: ಜಿಲ್ಲೆಗೆ ಶಶೀಲ್ ಜಿ.ನಮೋಶಿ  ಭೇಟಿ


ಚಿಕ್ಕಬಳ್ಳಾಪುರ, ನವೆಂಬರ್ ೨೪: ಶಶೀಲ್ ಜಿ.ನಮೋಶಿಯವರು ಡಾ|| ಡಿ.ಎಂ.ನಂಜುಂಡಪ್ಪ ವರದಿ ಅನುಷ್ಟಾನ ಉನ್ನತಾಧಿಕಾರಿ ಸಮಿತಿಯ ಅಧ್ಯಕ್ಷರು ಹಾಗೂ ಅವರು ಸಮಿತಿಯ ೮ ಸದಸ್ಯರು ನವೆಂಬರ್ ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸಿ ಪ್ರಗತಿ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ. ನಂತರ ಮಧ್ಯಾಹ್ನ ೨ ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸುವರು.

ಸಾಯಂಕಾಲ ೪ ಗಂಟೆಗೆ ಪತ್ರಿಕಾಗೋಷ್ಟಿಯನ್ನು ನಡೆಸುವರು.ಈ ಸಭೆಗೆ ಜಿಲ್ಲೆಯ ಶಾಸಕರುಗಳು,ಸಚಿವರು,ಸಂಸತ್ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ.

ಚಿಕ್ಕಬಳ್ಳಾಪುರ: ಬಾಗೇಪಲ್ಲಿಗೆ ಲೋಕಾಯುಕ್ತರ ಭೇಟಿ


ಚಿಕ್ಕಬಳ್ಳಾಪುರ, ನವೆಂಬರ್ ೨೪:ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕ್ಷಕರು ಹಾಗೂ ಅಧಿಕಾರಿ ವರ್ಗದವರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬರುವ ಸಾರ್ವಜನಿಕರಿಂದ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ದಿನಾಂಕ ೨೫-೧೧-೨೦೦೯ ರಂದು ಬೆಳಿಗ್ಗೆ ೧೧-೩೦ ಗಂಟೆಯಿಂದ  ಮಧ್ಯಾಹ್ನ ೨-೦೦ ಗಂಟೆಯವರೆಗೆ ಸ್ವೀಕರಿಸಲಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ತಹಶೀಲ್ದಾರ್ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಬಾಗವಹಿಸುತ್ತಿದ್ದು ಸದರಿ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕಾನೂನು ಪ್ರಕಾರ ಕೆಲಸ ಮಾಡಿಕೊಡಲು  ವಿಳಂಬ,ನಿರ್ಲಕ್ಷ ಮಾಡುತ್ತಿದ್ದ ಪಕ್ಷದಲ್ಲಿ ದೂರು ಸಲ್ಲಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
 
 
ಚಿಕ್ಕಬಳ್ಳಾಪುರ: ನಾಡು ನುಡಿಯ ರಕ್ಷಣೆಯ ಹೊಣೆ ಎಲ್ಲರದು : ಬಚ್ಚೇಗೌಡ

ಚಿಕ್ಕಬಳ್ಳಾಪುರ, ನ. ೨೩: ಕನ್ನಡ ನಾಡು ನುಡಿಯನ್ನು  ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಕ್ಷೇತ್ರದ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.
ನಗರದ ಸಮತಾ ಸಮುದಾಯ ಸೇವಾ ಸಂಸ್ಥೆ, ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾರಣಾ ಸಮಿತಿ, ಕರ್ನಾಟಕ ರಾಜ್ಯ ಎನ್.ಎಸ್.ಎಸ್. ಸ್ವಯಂಸೇವಕರ ವೇದಿಕೆ ಜಿಲ್ಲಾ ಘಟಕ, ಕನ್ನಡ ಸೇನೆ ಜಿಲ್ಲಾ ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಂದಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನೆರೆಸಂತ್ರಸ್ತರಿಗೆ ನೆರವಾದ ದಾನಿಗಳಿಗೆ ಕೃತಜ್ಞತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡಿನ ಋಣ ತೀರಿಸುವ ನಿಟ್ಟಿನಲ್ಲಿ ಪ್ರಾಮಣಿಕ ಪ್ರಯತ್ನದಿಂದ ಕನ್ನಡವನ್ನು ಬ‌ಉಳಿಸಿ ಬೆಳೆಸುವ ಅವಶ್ಯಕತೆ ಇದೆ. ಎಲ್ಲಾ ಭಾಷೆಗಳಿಗೆ ಪ್ರಾಶಸ್ತ್ಯ ನೀಡಿದರೂ ಕನ್ನಡಕ್ಕೆ ಮೊದಲನೇ ಪ್ರಾಶಸ್ಯ್ತ ನೀಡುವ ಮೂಲಕ  ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದರು.

ರೈತಮುಖಂಡ ಹಾಗೂ ಒಕ್ಕಲಿಗರ ಸಂಘದ ರಾಜ್ಯ ಖಜಾಂಚಿ ಯಲುವಹಳ್ಳಿ ಎನ್.ರಮೇಶ್ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದ ಸ್ವಶಕ್ತಿ ಸ್ವಸಹಾಯ ಸಂಘಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕನ್ನಡಾಭಿಮಾನ ವೇದಿಕೆಗಳಿಗೆ  ಸೀಮಿತವಾಗಬಾರದು. ದಿನನಿತ್ಯ ಕನ್ನಡದ ಅಭಿಮಾನವನ್ನು ಹೊಂದಿರಬೇಕಲ್ಲದೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವಂತೆ ಪ್ರತಿ‌ಒಯೊಬ್ಬರೂ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿ ಬೇಳೆಸುವ ಕಾರ್ಯ ಮಾಡಬೇಕು ಎಂದ ಅವರು ಉಂಡ ಮನೆಗೆ ಬೇರೊಂದು ಬಗೆಯುವಂತ ಕೆಲಸ ಯಾರೂ ಮಾಡಬಾರದೆಂದು ಕನ್ನಡದ ಋಣದಲ್ಲಿರುವರು ಇತರೆ ಬಾಷೆಗೆ ಮಾರು ಹೋಗಿ ಮಾತನಾಡುವುದನ್ನು ಬಿಡಬೇಕು ಆ ಮೂಲಕ ತಾಯ್ನಾಡಿನ ಋಣದಲ್ಲಿ ನಾವು ನಮ್ಮತನವನ್ನು ಉಳಿಸಬೇಕು ಎಂದವರು  ಹೇಳಿದರು.

ಇದೇ ವೇಳೆ ಸಿಂಧೂರ ನೃತ್ಯ ಕಲಾನಿಕೇತನ ಸಂಸ್ಥೆಯನ್ನು ಚಲನಚಿತ್ರ ನಿರ್ದೇಶಕ ಪಿ.ಸಿ.ರಮೇಶ್ ಉದ್ಘಾಟಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ದೇವನಹಳ್ಳಿ ತಾಲೂಕು ಕುರುಬರಕುಂಟೆ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಪ್ರಧಾನ‌ಅರ್ಚಕ ಕೋರಮಂಗಲ ಶ್ರೀರಾಮಾನುಜಾಚಾರ್ಯ, ಅನಾಥ ಶವಗಳ ಸಂಸ್ಕಾರಗಳ ಮೂಲಕ ಹೆಸರುವಾಸಿಯಾಗಿರುವ ಡೆಡ್‌ಬಾಡಿ ಕುಮಾರ್, ಕಲಾ ಕ್ಷೇತ್ರದಲ್ಲಿ ಅಣಕನೂರು ಶ್ರೀನಿವಾಸ್, ಹಾಗೂ ಸರ್.ಎಂ.ವಿ.ಜನಪರ ಹೋರಾಟ ಸಮಿತಿಯ ಅಂಜನೇಯರೆಡ್ಡಿರನ್ನು ಸನ್ಮಾನಿಸಲಾಯಿತು.

ಸಪ್ತಶ್ರೀ ಮೆಲೋಡಿಸ್ ತಂಡದಿಂದ ಏರ್ಪಡಿಸಿದ್ದ ವಾಧ್ಯಘೋಷ್ಠಿ ಹಾಗೂ ರಂಗಭೂಮಿಯ ಕಿರಿಯ ಕಲಾವಿದರಾದ ಜ್ಯೂ.ಶಿವರಾಜ್ ಕುಮಾರ್, ಜ್ಯೂ.ಶಂಕರ್ ನಾಗ್, ಜ್ಯೂ.ಅಂಬರೀಷ್ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ, ನೃತ್ಯ ಶಿಕ್ಷಕ ಪುಟ್ಟು ಹಾಗೂ ತಂಡದ  ನೃತ್ಯ ರೂಪಕಗಳು ಕಲಾಭಿಮಾನಿಗಳಿಗೆ ರಸದೌತಣ ನೀಡಿದವು.

ನಗರಸಭೆ ಅಧ್ಯಕ್ಷ ಎಂ.ಪ್ರಕಾಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿ.ಎಸ್.ಜಯರಾಂ, ಗಾ.ನಾ.ಅಶ್ವತ್ಥ್, ನಾಯನಹಳ್ಳಿ ನವೀನ್, ಜಾತವಾರ ಜಗದೀಶ್, ಹಿರಿಯ ಪತ್ರಕರ್ತ ಹೆಚ್.ವಿ.ಸೋಮಶೇಖರ್, ಕಸಾಪ ಜಿಲ್ಲಾ ಕಾರ್ಯದರ್ಶಿ  ವೈ.ಎಲ್.ಹನುಮಂತರಾವ್, ಮಂಚನಬಲೆ ಗ್ರಾ.ಪಂ.ಸದಸ್ಯ ಎಂ.ಎಸ್.ಶ್ರೀಧರ್, ಸಮತಾ ಸಮುದಾಯ ಸೇವಾ ಸಂಸ್ಥೆ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್, ಕಾರ್ಯದರ್ಶಿ ಕೆ.ಪ್ರತಿಮಾಕೃಷ್ಣ, ಕನ್ನಡಸೇನೆ ಜಿಲ್ಲಾಧ್ಯಕ್ಷ ಕೆ.ಪಿ.ನವಮೋಹನ್, ಎನ್ನೆಸ್ಸೆಸ್ ಸ್ವಯಂ ಸೇವಕರ ವೇದಿಕೆ ಜಿಲ್ಲಾಧ್ಯಕ್ಷ ವಿ.ದೇವರಾಜ್, ರಾಜ್ಯ ಉಪಾಧ್ಯಕ್ಷ ಎಚ್.ಬಿ.ವಸಂತ್ ಕುಮಾರ್, ಕಾರ್ಯದರ್ಶಿ ಎಸ್.ಎನ್.ಮಂಜುನಾಥ್, ಸರ್.ಎಂ.ವಿ.ಜನ್ಮದಿನಾಚರಣಾ ಸಮಿತಿ ಅಧ್ಯಕ್ಷ ಕುಂಚಿ ಮೂರ್ತಿ, ಪ್ರಧಾನ ಕಾರ್ಯದರ್ಶಿ ಚಾಮರಾಜಪೇಟೆ ಬಿ.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ವಿಶಾಲಾಕ್ಷಿ ಮತ್ತು ತಂಡ ಪ್ರಾರ್ಥಿಸಿತು. ಪತ್ರಕರ್ತ ಎಂ.ಕೃಷ್ಣಪ್ಪ ಸ್ವಾಗತಿಸಿ, ಕೆ.ಪಿ.ನವಮೋಹನ್ ವಂದಿಸಿದರು. ಶಿಕ್ಷಕ ಎಂ.ಆರ್.ದೇವರಾಜ್ ನಿರೂಪಿಸಿದರು. 


ಚಿಕ್ಕಬಳ್ಳಾಪುರ: ನಿರಂತರ ವಿದ್ಯುತ್ ನೀಡಲು ಒತ್ತಾಯಿಸಿ ಜೆಡಿ‌ಎಸ್ ನಿಂದ ರಸ್ತೆ ತಡೆ

ಚಿಕ್ಕಬಳ್ಳಾಪುರ, ನವಂಬರ್ ೨೩ : ಗ್ರಾಮಾಂತರ ಪ್ರದೇಶಗಳಿಗೆ ೧೨ ಘಂಟೆಗಳ ಕಾಲ ವಿದ್ಯುತ್ ನಿಲುಗಡೆ ತೀರ್ಮಾನವನ್ನು ಕೈಬಿಟ್ಟು, ನಿರಂತರವಾಗಿ ವಿದ್ಯುತ್‌ನ್ನು ನೀಡಬೇಕೆಂದು ಒತ್ತಾಯಿಯಿಸಿ ಇಂದು ಜಿಲ್ಲಾ ಜೆಡಿ‌ಎಸ್ ವತಿಯಿಂದ ಬೆಸ್ಕಾಂಗೆ ಮುತ್ತಿಗೆ ಹಾಕಿ, ರಾಷ್ಠ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಲಾಯಿತು.

ಜಿಲ್ಲೆಯಲ್ಲಿ ಜೆಡಿ‌ಎಸ್ ಮುಖಂಡರ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಿಂದ ತೆರಳಿದ ಪ್ರತಿಭಟನಾ ಮೆರವಣಿಗೆ ಗಂಗಮ್ಮ ಗುಡಿ ರಸ್ತೆ, ಸರ್.ಎಂ.ವಿ.ರಸ್ತೆ ಹಾಗು ಬಿ.ಬಿ.ರಸ್ತೆಗಳ ಮುಖಾಂತರ ಚಲಿಸಿ ಬೆಸ್ಕಾಂ ಕಛೇರಿಗೆ ಮುತ್ತಿಗೆಯನ್ನು ಹಾಕಿ ನಿರಂತರವಾಗಿ ವಿದ್ಯುತ್ ಬನೀಡುವಂತೆ ಒತ್ತಾಯಿಸಿದರು ಈ ಸಂಧರ್ಬದಲ್ಲಿ ಮಾತನಾಡಿದ ಕ್ಷೇತ್ರದ ಶಾಸಕ ಕೆ.ಪಿ.ಬಚ್ಚೇಗೌಡ ಶತಮಾನದಲ್ಲಿ ಕಂಡರಿಯದಷ್ಟು ಹೇರಳವಾದ ಮಳೆ ಬಿದ್ದು ಉತ್ತರ ಕರ್ನಾಟಕದಲ್ಲಿ ಮನೆಗಳು ಕುಸಿದು ಕೆರೆ ಕುಂಟೆಗಳು ತುಂಬಿ ಕೋಡಿ ಹರಿಯುತ್ತಿದ್ದರೂ ಸಹ ರೈತರ ಹೆಸರಿನಲ್ಲಿ ಪ್ರಮಾಣ ವಚನ ಪಡೆದ ರಾಜ್ಯದ ಮುಖ್ಯ ಮಂತ್ರಿ ಎಡಿಯೂರಪ್ಪ ರೈತರ ಬೋರ್ ವೆಲ್ ಗಳಿಗೆ ವಿದ್ಯುತ್ ನ್ನು ಒದಗಿಸುವಲ್ಲಿ ವಫಲರಾಗುವ ಮೂಲಕ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ, ರೋಮ್ ನಗರ ಹತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ ಎನ್ನುವ ನಾಣ್ಣುಡಿಯಂತೆ ರಾಜ್ಯದ ರೈತಾಪಿ ಜನ ಬೆಳೆದ ಬೆಳೆಗಳನ್ನು ವಿಧ್ಯುತ್ ನ ಅಭಾವದಿಂದ ರಕ್ಷಿಸಿಕೊಳ್ಳಲು ಸಾದ್ಯವಾಗದೆ ಒದ್ದಾಡುತ್ತಿದ್ದರೆ, ತಮ್ಮ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲೇ ತಲ್ಲೀನರಾಗುವ ಮೂಲಕ ನಿಷ್ಕ್ಟಿಯರಾಗಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಕ್ರಷ್ಣಾರೆಡ್ಡಿ ಮಾತನಾಡಿ, ಎಲ್ಲಾ ರಂಗಗಳಲ್ಲೂ ಎಡಿಯೂರಪ್ಪ ಸರಕಾರ ನಿಷ್ಕ್ರಿಯವಾಗಿದ್ದು ಈ ಸರಕಾರವನ್ನು ಕಿತ್ತೊಗೆಯಬೇಕೆಂದರು.

ಕಾರ್ಯಕ್ರಮದಲ್ಲಿ ಇನ್ನೂ ಹಲವಾರು ಮುಖಂಡರು ಮಾತನಾಡಿದರು.

ನಂತರ ರಾಷ್ಠ್ರೀಯ ಹೆದ್ದಾರಿ ೭ರ ಶಿಡ್ಲಘಟ್ಟ ವೃತ್ತದಲ್ಲಿ ಸುಮಾರು ಅರ್ಧ ಗಂಟೆ ರಸ್ತೆ ನಡೆಸಿದರು ನಂತರ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಎಸ್. ನಾಯಕ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ ಸರಕಾರಕ್ಕೆ ಕಳುಹಿಸಿಕೊಡುವ ಭರವಸೆಯಿತ್ತರು.

ಪ್ರತಿಭಟನೆಯ ನೇತೃತ್ವವನ್ನು ಜ್ಯೋತಿರೆಡ್ಡಿ,ಜಿ.ಆರ್.ನಾರಾಯಣ ಸ್ವಾಮಿ, ನಗರ ಸಭಾ ಅಧ್ಯಕ್ಷ ಎಂ.ಪ್ರಕಾಶ್, ಕೆ.ವಿ.ನಾಗರಾಜ್, ಕೆ.ಟಿ.ನಾರಾಯಣ ಸ್ವಾಮಿ, ಪಿ.ಶ್ರೀನಿವಾಸ್ ಮುಂತಾದವರು ವಹಿಸಿದ್ದರು





Share: