ಬೆಂಗಳೂರು, ಅ.31: ರಾಜ್ಯ ರಾಜಕಾರಣ ದಲ್ಲಿ ಉಂಟಾಗಿರುವ ಭಿನ್ನಮತದ ಬಿರು ಗಾಳಿ ದಿಲ್ಲಿಯ ಹೈಕಮಾಂಡ್ ಅಂಗಳಕ್ಕೆ ಸ್ಥಳಾಂತರಗೊಂಡಿದ್ದು, ನಾಳೆ ಎರಡು ಬಣಗಳೊಂದಿಗೆ ಬಿಜೆಪಿ ವರಿಷ್ಠರು ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಬಣದ ಶಾಸಕರನ್ನು ಬೆಂಗಳೂರಿನ ಹೊರ ವಲಯದ ರೆಸಾರ್ಟ್ ವಲೊಂದಕ್ಕೆ ಸ್ಥಳಾಂತರಗೊಳಿಸಲಾಗಿದೆ. ಯಡಿಯೂರಪ್ಪನವರ ನಾಯಕತ್ವ ಬದಲಾಗಬೇಕು ಎಂದು ಪಟ್ಟು ಹಿಡಿದಿರುವ ಬಳ್ಳಾರಿಯ ಗಣಿಧಣಿಗಳು, ಸುಮಾರು ೪೦ ಮಂದಿ ಶಾಸಕರನ್ನು ಹೈದರಾಬಾದ್ ಮತ್ತು ಗೋವಾದಲ್ಲಿ ಕಲೆ ಹಾಕಿ ಬಲಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.
ಇಂದು ಸಂಜೆ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಹೈಕಮಾಂಡ್ ಆಹ್ವಾನದ ಮೇರೆಗೆ ದಿಲ್ಲಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಹೈಕಮಾಂಡ್‌ನ ಮುಖಂಡ ಅರುಣ್ ಜೈಟ್ಲಿ ನಡೆಸಿದ ಮಾತುಕತೆಯಲ್ಲಿ ಜಗದೀಶ್ ಶೆಟ್ಟರ್ ಶಾಸಕರ ಅಭಿಪ್ರಾಯದಂತೆ ನಡೆದುಕೊಳ್ಳುವುದಾಗಿ ಹೇಳಿದ್ದರು. ಇದರಿಂದ ಉಂಟಾಗಿದ್ದ ಪರ್ಯಾಯ ನಾಯಕತ್ವ ಸಂಕಟ ಬಗೆಹರಿಸಲು ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಶೆಟ್ಟರ್‌ರೊಂದಿಗೆ ಮುಖಂಡರು ಮಾತುಕತೆ ನಡೆಸಲಿದ್ದಾರೆ.
ಬಂಡಾಯ ಸಾರಿರುವ ಕರುಣಾಕರ್ ರೆಡ್ಡಿ, ಶ್ರೀರಾಮುಲು ಕೂಡ ದಿಲ್ಲಿಗೆ ತೆರಳಲಿದ್ದು, ನಾಳೆ ಅವರೊಂದಿಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ಪರಿಸ್ಥಿತಿಯನ್ನು ನಿಬಾಯಿಸಲು ಹೈಕಮಾಂಡ್ ಸರಳ ಸೂತ್ರ ಸಿದ್ಧಪಡಿಸಿದ್ದು, ಯಡಿಯೂರಪ್ಪ ಬಣದ ಶೋಭಾ ಕರಂದ್ಲಾಜೆ, ಬಸವರಾಜ ಬೋಮ್ಮಾಯಿ ಸ್ಥಾನ ಪಲ್ಲಟ ಮಾಡುವುದು.
ಗಣಿಧಣಿಗಳ ಬಣದ ಸಚಿವರಾದ ಶಿವರಾಜ ತಂಗಡಗಿ, ಗೂಳಿಹಟ್ಟಿ ಶೇಖರ್‌ರನ್ನು ಸಂಪುಟದಿಂದ ಕೈಬಿಡುವ ಸಲಹೆಗಳನ್ನು ಎರಡು ಬಣಗಳ ಮುಂದೆ ಇಡಲಾಗಿದೆ. ತಮ್ಮ ಆಪ್ತರನ್ನು ಕೈಬಿಡಲು ಮುಖ್ಯಮಂತ್ರಿ ಒಪ್ಪದೇ ಇರುವುದರಿಂದ ಸಂಧಾನ ಪ್ರಕ್ರಿಯೆ ಅಂತಿಮಗೊಳ್ಳುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಚರ್ಚೆಯ ವೇಳೆ ನಾಯಕತ್ವ ಬದಲಾವಣೆಗೆ ಬಿಗಿ ಪಟ್ಟು ಹಿಡಿಯಲು ಗಣಿಧಣಿಗಳು ನಿರ್ಧರಿಸಿದ್ದು, ಹೈಕಮಾಂಡ್ ಒಪ್ಪದೆ ಇದ್ದರೆ ಸುಮಾರು ೬೦ ಮಂದಿ ಶಾಸಕರನ್ನು ದಿಲ್ಲಿಯಲ್ಲಿ ಸೋಮವಾರ ಪೆರೆಡ್ ನಡೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಣದ ಶಾಸಕರು ಸಭೆ ನಡೆಸಿ ಚರ್ಚಿಸಿದರು.
ಗಣಿಧಣಿಗಳ ಬಣದಿಂದ ಆಮಿಶಗಳು ಹೆಚ್ಚುತ್ತಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮೆಲ್ಲಾ ಬೆಂಬಲಿಗರನ್ನು ನೆಲಮಂಗಲ ಸಮೀಪದ ಗೋಲ್ಡನ್ ಪಾಮ್ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ. ಬಿಕ್ಕಟ್ಟು ಮುಗಿಯುವವರೆಗೂ ಶಾಸಕರು, ಸಚಿವರು ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ತಮಗೆ ೮೫ ಮಂದಿ ಶಾಸಕರ ಬೆಂಬಲವಿದೆ ಎಂದು ಮುಖ್ಯಮಂತ್ರಿ ಬಣ ಹೇಳಿಕೊಳ್ಳುತ್ತಿದ್ದು, ಮಧ್ಯಾಹ್ನ ಶಾಸಕ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಹೆಸರಿಸಲಾಗಿದ್ದ ಸಚಿವ ನರೇಂದ್ರ ಸ್ವಾಮಿ ಸೇರಿದಂತೆ ಒಟ್ಟು ಮೂರು ಮಂದಿ ಶಾಸಕರು ಸಂಜೆಯ ವೇಳೆಗೆ ಹೈದರಾಬಾದ್‌ಗೆ ತೆರಳಿ ಗಣಿಧಣಿಗಳನ್ನು ಸೇರಿಕೊಂಡಿದ್ದಾರೆ.
ಪಟ್ಟಿಯಲ್ಲಿದ್ದ ಬಹುತೇಕ ಶಾಸಕರು ಕಳೆದ ಮೂರುದಿನಗಳಿಂದ ಜಗದೀಶ್ ಶೆಟ್ಟರನ್ನು ಭೇಟಿ ಮಾಡಿ ಪರ್ಯಾಯ ನಾಯಕತ್ವ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು.
ತೀವ್ರ ಕುತೂಹಲ ಕೆರಳಿಸಿರುವ ರಾಜಕೀಯ ಬಿಕ್ಕಟ್ಟು ಇಂದು ಸಂಜೆಯ ವೇಳೆಗೆ ಅಂತ್ಯಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದರಾದರೂ, ಹೈಕಮಾಂಡ್‌ನ ಮುಖಂಡರು ಭಿನ್ನಮತೀಯರೊಂದಿಗೆ ನಾಳೆ ಚರ್ಚೆ ನಡೆಸಲಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತವಾಗಿದ್ದು, ಏಕಾಏಕಿ ಪರಿಸ್ಥಿತಿಯನ್ನು ಗಂಭೀರ ಸ್ವರೂಪ ಪಡೆದುಕೊಳ್ಳಲು ಅವಕಾಶ ಕೊಡದೆ ಎರಡು ಮೂರು ತಿಂಗಳ ನಂತರ ಕ್ರಮ ಕೈಗೊಳ್ಳುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎಂದು ಮೂಲಗಳು ಹೇಳಿವೆ.
ಹತ್ತು ವರ್ಷ ನಾನೇ ಸಿಎಂ: ಯಡಿಯೂರಪ್ಪ
ಬೆಂಗಳೂರು: ಜನರ ಆಶಿರ್ವಾದ ಇರುವವರೆಗೂ ತಮಗೆ ಯಾರು ಏನು ಮಾಡಲು ಸಾಧ್ಯವಾಗುವುದಿಲ್ಲ. ನನಗೂ ರಾಜಕೀಯದ ಚಾಣಕ್ಯನ ತಂತ್ರ ಗೋತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಡಾಯವೆದ್ದಿರುವ ಗಣಿಧಣಿಗಳಿಗೆ ತಿರುಗೇಟು ನೀಡಿದೆ.
ಇತ್ತೀಚೆಗೆ ನಡೆದಿರುವ ವಿದ್ಯಮಾನಗಳಿಂದ ಸರಕಾರ ಬಿಳುತ್ತದೆ ಎಂದು ಜನರಲ್ಲಿ ಆತಂಕವಿದೆ ಅದಕ್ಕಾಗಿ ತಾವು ಮಾಧ್ಯಮಗಳಿಗಳ ಮೂಲಕ ಸ್ಪಷ್ಟನೆ ನೀಡುತ್ತಿದ್ದು, ಯಾವುದೇ ಆತಂಕ ಇಲ್ಲ. ಮುಂದಿನ ೧೦ ವರ್ಷಗಳ ವರೆಗೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಕಳೆದ ೧೮ ತಿಂಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳಿಗಿಂತ ೧೦ ಪಟ್ಟು ಹೆಚ್ಚು ಕೆಲಸಗಳನ್ನು ಇನ್ನು ಮುಂದೆ ಮಾಡುತ್ತೇನೆ. ಜನರು ತಮ್ಮ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಗಳಿಗೆ ದ್ರೋಹ ಬಗೆಯುವುದಿಲ್ಲ ಎಂದು ಹೇಳಿದರು.
ರಾಜ್ಯದ ನಾಯಕತ್ವ ಬದಲಾವಣೆಯಿಲ್ಲ ಎಂದು ಹೈಕಮಾಂಡ್ ವರಿಷ್ಠರು ತಮಗೆ ಭರವಸೆ ನೀಡಿದ್ದಾರೆ. ನಾಳೆಯಿಂದ ತಾವು ನೆರೆ ಸಂತ್ರಸ್ಥರಿಗೆ ಒಂದು ಲಕ್ಷ ಮನೆ ನಿರ್ಮಿಕೊಡುವ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದು, ನ.೫ರಿಂದ ಅಸಮಾಧಾನಿತ ಶಾಸಕರ ಕ್ಷೇತ್ರಗಳಿಗೆ ತೆರಳಿ ತಾವು ಏನು ತಪ್ಪು ಮಾಡಿದ್ದೇನೆ ಎಂದು ನೇರವಾಗಿ ಜನರನ್ನು ಕೇಳುತ್ತೇನೆ ಎಂದು ಹೇಳಿದರು.
ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಈಗಲೂ ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿಗಳು. ಆತುರದಿಂದ ಯಾವುದೇ ನಿರ್ಧಾರ ಕೈಗೊಂಡಿದ್ದರೂ ಜನರ ಹಿತದೃಷ್ಟಿಯಿಂದ ಅದನ್ನು ಮರೆತು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಮನವಿ ಮಾಡುವ ಮೂಲಕ ಸ್ನೇಹಹಸ್ತವನ್ನು ಗಣಿಧಣಿಗಳತ್ತ ಚಾಚಿದ ಮುಖ್ಯಮಂತ್ರಿಯವರು, ತಮಗೂ ವಿರೋಧ ಪಕ್ಷ, ಆಡಳಿತ ಪಕ್ಷ ಎರಡರಲ್ಲೂ ಕೆಲಸ ಮಾಡಿದ ಅನುಭವವಿದೆ. ಚಾಣಕ್ಯನ ತಂತ್ರಗಳು ತಿಳಿದಿವೆ. ಯಾರಿಂದಲೂ ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಕಳೆದ ಮೂರು ದಿನಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅಥವಾ ನೆರೆ ಸಂತ್ರಸ್ಥರ ಪುನರ್ವಸತಿ ಕಾರ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದೇನೆ. ಇತ್ತೀಚಿನ ವಿದ್ಯಮಾನಗಳನ್ನು ಮಾಧ್ಯಮಗಳಿಂದ ಮುಚ್ಚಿಡುವ ಅಗತ್ಯ. ಎಲೆಕ್ಟಾನಿಕ್ ಯುಗದಲ್ಲಿ ಯಾರು ಏನು ಎಂದು ಜನ ನಿರಂತರವಾಗಿ ಗಮನಿಸುತ್ತಿರುತ್ತಾರೆ. ಮಾಧ್ಯಮಗಳನ್ನು ಅನಗತ್ಯವಾಗಿ ಕೆಲವು ಸಂದರ್ಭಗಳಲ್ಲಿ ಕಾಯಿಸಿದ್ದಕ್ಕಾಗಿ ವಿಷಾದಿಸುವುದಾಗಿ ಮುಖ್ಯಮಂತ್ರಿ ಹೇಳಿದರು.
ರಾಜಕೀಯ ಕುರಿತು ಅನಗತ್ಯವಾಗಿ ಯಾವುದೇ ಮಾತುಗಳನ್ನು ಆಡಬೇಡಿ. ನಾವೇಲ್ಲಾ ಸರಿ ಮಾಡುತ್ತೇವೆ. ಇಲ್ಲಿ ಉತ್ತಮ ಕೆಲಸ ನಡೆಯುತ್ತಿದೆ ಅದನ್ನು ಮುಂದುವರಿಸಿ ಎಂದು ಅರುಣ್ ಜೈಟ್ಲಿ ಹೇಳಿ ಹೋಗಿದ್ದಾರೆ. ನಾಯಕತ್ವ ಬದಲಾವಣೆಯಿಲ್ಲ ಎಂದು ಮಾಧ್ಯಮಗಳಿಗೂ ಅವರು ಸ್ಪಷ್ಟ ಪಡಿಸಿದ್ದು, ವೈಯಕ್ತಿಕವಾಗಿ ತಮಗೂ ತಿಳಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತಮವಾಗಿ ಕೆಲಸ ಮಾಡುವವರ ಬಗ್ಗೆ ಅಪಾದನೆಗಳು ಬರುವುದು ಸಹಜ ಎಂದು ಅವರು ಶೋಭಾ ಕರಂದ್ಲಾಜೆಯವರನ್ನು ಸಮರ್ಥಿಸಿಕೊಂಡರು. ಬೇಜವಾಬ್ದಾರಿಯಾಗಿ ಮಾತನಾಡಿದವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಳ್ಳಾರಿಯ ಸಂಸದೆ ಶಾಂತಾರ ಕುರಿತು ಯಡಿಯೂರಪ್ಪ ಪರೋಕ್ಷ ಎಚ್ಚರಿಕೆ ನೀಡಿದರು.
ಜೀವನ ಸವಾಲುಗಳ ಸರಮಾಲೆ. ತಾವು ಆರಂಭದಿಂದಲೂ ಇಂತಹದ್ದನ್ನು ಬಹಳ ನೋಡಿದ್ದೇವೆ. ಈಗಿನ ರಾಜಕಾರಣ ಭ್ರಷ್ಟಚಾರದಿಂದ ಕಲುಶಿತವಾಗಿದೆ. ಅದನ್ನು ಶುದ್ಧೀಕರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅವರು ನುಡಿದರು.
ನೆರೆ ಸಂತ್ರಸ್ಥರಿಗಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸಿದ್ದು ತಮ್ಮ ತಪ್ಪೇ ಎಂದು ಪ್ರಶ್ನಿಸಿದ ಅವರು, ಇನ್ನೆರಡು ವರ್ಷಗಳಲ್ಲಿ ರಾಜ್ಯದಲ್ಲಿ ಯಾರೂ ಮನೆಯಿಲ್ಲ ಎಂದು ಹೇಳಬಾರದು. ಶಿಕ್ಷಣ, ಆರೋಗ್ಯ, ವಸತಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಸಚಿವರಾದ ಆರ್.ಅಶೋಕ್, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಸಿ.ಎಂ.ಉದಾಸಿ, ಬಸವರಾಜ ಬೋಮ್ಮಾಯಿ ಸೇರಿದಂತೆ ೧೩ ಮಂದಿ ಸಚಿವರೊಂದಿಗೆ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಸಭೆ ನಡೆಸಿ ಚರ್ಚಿಸಿದರು.
ನಮಗೆ ೬೦+ ಶಾಸಕರ ಬೆಂಬಲ
ಬೆಂಗಳೂರು: ಮುಖ್ಯಮಂತ್ರಿಯವರ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಗಣಿಧಣಿಗಳು ತಮಗೆ ೬೦ ಮಂದಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಶಾಸಕರು ಜೋತೆಗೂಡಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ನಮ್ಮಲ್ಲಿರುವ ಶಾಸಕರ ಸಂಖ್ಯೆಯನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಅಲ್ಲಿ ಚರ್ಚೆಯ ನಂತರ ತೆಗೆದುಕೊಳ್ಳುವ ತೀರ್ಮಾನವನ್ನು ಆಧಾರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್, ಕರುಣಾಕರ ರೆಡ್ಡಿ ಮತ್ತು ತಮ್ಮನ್ನು ಹೈಕಮಾಂಡ್ ದಿಲ್ಲಿಗೆ ಬರುವಂತೆ ಆಹ್ವಾನಿಸಿದೆ. ಈಗಾಗಲೇ ಎಲ್ಲ ವಿವರಣೆ ನೀಡಿದ್ದೇವೆ. ಇಂದು ಅಥವಾ ನಾಳೆ ದಿಲ್ಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಅವರು ಹೇಳಿದರು.
ಅಧಿಕಾರ ಬಿಟ್ಟು ತೊಲಗಿ: ಸಿದ್ಧರಾಮಯ್ಯ
ಬೆಂಗಳೂರು: ಅಂತರೀಕ ಬಿಕ್ಕಟ್ಟು ಪರಿಹರಿಸಿಕೊಂಡು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗೆ ತಕ್ಷಣವೇ ಧಾವಿಸಿ, ಇಲ್ಲವಾದರೆ ಅಧಿಕಾರ ಬಿಟ್ಟುತೊಲಗಿ ಎಂದು ರಾಜ್ಯ ಸರಕಾರಕ್ಕೆ ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ಧರಾಮಯ್ಯ ತಾಕೀತು ಮಾಡಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಅವರ ೨೫ನೆ ಪುಣ್ಯ ದಿನಾಚರಣೆ ಅಂಗವಾಗಿ ಇಂದಿರಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಉದ್ಭವವಾಗಿರುವ ಅಂತರೀಕ ಭಿನ್ನಮತದಿಂದಾಗಿ ರಾಜ್ಯದ ಜನತೆಯ ಮೇಲೆ ದುಷ್ಪರಿಣಾಮವಾಗಿದೆ. ರೆಡ್ಡಿ ಸಹೋದರರು ಮತ್ತು ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಬೀದಿ ಜಗಳ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರಿಗಾಗಿ ಸಾರ್ವಜನಿಕರಿಂದ ಅಪಾರ ದೇಣಿಗೆ ಸಂಗ್ರಹಿಸಿದ್ದಾರೆ. ಕೇಂದ್ರ ಸರಕಾರ ಈಗಾಗಲೇ ೫೦೦ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಆದರೆ, ರಾಜ್ಯ ಸರಕಾರ ಭಿನ್ನಮತದಲ್ಲಿ ಮುಳುಗಿದ್ದು, ಅಧಿಕಾರಿಗಳು ನೆರೆ ಪರಿಹಾರ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳು ಸ್ಪಷ್ಟಿಕರಣ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯದಲ್ಲಿ ಸರಕಾರ ನಡೆಸಲು ಸಂಪೂರ್ಣ ವಿಫಲವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಅಲುಗಾಡುತ್ತಿದೆ. ರಾಜ್ಯದಲ್ಲಿ ಸಂವಿಧಾನಿಕ ಬಿಕ್ಕಟ್ಟು ತಲೆದೂರಿದ್ದು, ಆಡಳಿತ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತು ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಲಿದೆ ಎಂದು ಎಚ್ಚರಿಸಿದ ಸಿದ್ಧರಾಮಯ್ಯ, ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕಾದ ಸಚಿವರು ಮುಂಬೈ, ಗೋವಾ ಹಾಗೂ ಹೈದರಾಬಾದ್‌ನ ರೆಸಾರ್ಟ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿ.ರಾಜಶೇಖರನ್, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಮಾಜಿ ಸಂಸದ ಎಚ್.ಟಿ. ಸಾಂಗ್ಲಿಯಾನ, ಶಾಸಕ ಎಂ.ಕೃಷ್ಣಪ್ಪ, ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್, ಮಾಜಿ ಸಚಿವೆಯರಾದ ಮೋಟಮ್ಮ, ರಾಣಿಸತೀಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಬೈರೇಗೌಡ, ಶಾಸಕ ಹ್ಯಾರಿಸ್ ಸೇರಿದಂತೆ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.
ಶೋಭಾ ಕಾರಣ: ಶಾಂತಾ
ಬೆಂಗಳೂರು: ಬಿಜೆಪಿಯ ಇಂದಿನ ಬಿಕ್ಕಟ್ಟಿಗೆ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆಯವರೆ ಕಾರಣ ಎಂದು ಬಳ್ಳಾರಿಯ ಸಂಸದೆ ಹಾಗೂ ಸಚಿವ ಶ್ರೀರಾಮುಲುರ ಸಹೋದರಿ ಜೆ.ಶಾಂತ ಆರೋಪಿಸಿದ್ದಾರೆ.
ಶೋಭಾ ಕರಂದ್ಲಾಜೆ ಇತರ ಸಚಿವರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗೆ ಎಲ್ಲವೂ ಗೋತ್ತು ಎಂದು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಇದರಿಂದ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.
ಇತರ ಸಚಿವರ ಇಲಾಖೆಗಳಲ್ಲಿ ಶೋಭಾರ ಹಸ್ತಕ್ಷೇಪ ಹೆಚ್ಚಾಗಿದೆ. ಇದನ್ನು ವಿರೋಧಿಸಿ ಶೋಭಾ ಕರಂದ್ಲಾಜೆಯವರ ರಾಜೀನಾಮೆಗೆ ಕೆಲವರು ಆಗ್ರಹಿಸಿದಾಗ ಮೌನವಾಗಿರಬೇಕಿತ್ತು. ಆದರೆ, ತಾವು ರಾಜೀನಾಮೆ ನೀಡುವುದೇ ಇಲ್ಲ ಎಂದು ಸೆಟೆದು ನಿಂತು ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ ಎಂದು ಶಾಂತ ಕಿಡಿಕಾರಿದರು.
ಯಾಕೆ ರಾಜೀನಾಮೆ ಕೊಡಲಿ?
ಬೆಂಗಳೂರು: ಯಾವ ತಪ್ಪು ಮಾಡಿದ್ದೇನೆಂದು ನಾನು ರಾಜೀನಾಮೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವೆ ಶೋಭ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಯಾವುದಾದರು ಹಗರಣಗಳಿದೆಯೆ ಅಥವಾ ಇಲಾಖೆಯ ನಿರ್ವಹಣೆಯಲ್ಲಿ ತಪ್ಪಿದ್ದೇನೆಯೆ, ಯಾವೊಂದು ತಪ್ಪು ಮಾಡದಾಗ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಒಂದಿಬ್ಬರು ಶಾಸಕರು ಮಾತ್ರ ನನ್ನ ವಿರುದ್ಧ ಇರಬಹುದು. ಆದರೆ ಪಕ್ಷದ ಎಲ್ಲ ಶಾಸಕರು ನನ್ನ ವಿರುದ್ಧ ಇದ್ದಾರೆ ಎಂದು ಹೇಳುವುದು ಸರಿಯಲ್ಲ. ನನ್ನ ವಿರುದ್ಧ ಮೊದಲಿನಿಂದಲೂ ವ್ಯವಸ್ಥಿತ ಪಿತೂರಿಗಳು ನಡೆಯುತ್ತಿದೆ. ಕೆಲ ಮಧ್ಯವರ್ತಿಗಳು ನನ್ನ ವಿರುದ್ಧ ಮಾದ್ಯಮಗಳಲ್ಲಿ ವರದಿ ಮಾಡಿಸುತ್ತಿದ್ದಾರೆ ಎಂದು ಅವರು ದೂರಿದರು.
ಪ್ರಾಮಾಣಿಕತೆ, ಪರಿಶ್ರಮದಿಂದ ಕೆಲಸ ಮಾಡುವುದು ತಪ್ಪೇ ಎಂದು ಪ್ರಶ್ನಿಸಿದ ಕರಂದ್ಲಾಜೆ, ನನ್ನ ರಾಜೀನಾಮೆ ಕೇಳುತ್ತಿರುವವರ ಉದ್ದೇಶವಾದರೂ ಏನೆಂಬುದು ಇದುವರೆಗೂ ಅರ್ಥವಾಗುತ್ತಿಲ್ಲ ಎಂದು ನುಡಿದರು.
ಪಕ್ಷದ ಮುಖಂಡರು ರಾಜೀನಾಮೆ ನೀಡುವ ಸಂಬಂಧ ಇದುವರೆಗೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಸುದ್ಧಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಆಂತರಿಕ ಪ್ರಜಾಪ್ರಭುತ್ವ ಪಕ್ಷದಲ್ಲಿರುವುದರಿಂದ ಅತೃಪ್ತಿ, ಅಸಮಾಧಾನ ಸಾಮಾನ್ಯ. ಇದನ್ನು ಬಗೆಹರಿಸಿಕೊಳ್ಳುವ ಶಕ್ತಿ ಪಕ್ಷದಕ್ಕಿದೆ ಎಂದು ಕರಂದ್ಲಾಜೆ ಹೇಳಿದರು.
ರೆಡ್ಡಿಗಳಿಂದ ಶಾಸಕರಿಗೆ ಒತ್ತಡ
ಬೆಂಗಳೂರು: ಗಣಿಧಣಿಗಳು ಶಾಸಕರನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಹೈದರಬಾದ್‌ನ ಹೋಟೆಲ್‌ಗಳಲ್ಲಿ ನಿರ್ಬಂಧಿಸಿದ್ದಾರೆ ಎಂದು ಕಾರ್ಮಿಕ ಸಚಿವ ಬಚ್ಚೇಗೌಡ ಆರೋಪಿಸಿದ್ದಾರೆ.
ಮುಖ್ಯಮಂತ್ರಿಯವರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ನಾಯಕತ್ವಕ್ಕೆ ೮೩ ಶಾಸಕರು ಬೆಂಬಲ ಘೋಷಿಸಿದ್ದಾರೆ.
ಗಣಿಧಣಿಗಳೊಂದಿಗೆ ತಾವು ಗುರುತಿಸಿಕೊಂಡಿದ್ದೇವೆ ಎಂಬ ವದಂತಿ ಹಬ್ಬಿದೆ. ಯಡಿಯೂರಪ್ಪ ತಮ್ಮ ನಾಯಕರು ಎಂದಿಗೂ ಅವರ ವಿರುದ್ಧ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.
ಕೆಲವು ಶಾಸಕರನ್ನು ಬಲವಂತವಾಗಿ ಕೆರೆದುಕೊಂಡು ಹೋಗಲಾಗಿದ್ದು, ಹೋಟೆಲ್‌ವೊಂದರಲ್ಲಿ ನಿರ್ಬಂಧಿಸಲಾಗಿದೆ. ತಮನ್ನು ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಕೆಲವರು ತಮ್ಮನ್ನು ಸಂಪರ್ಕಿಸಿ ಹೇಳಿಕೊಂಡಿದ್ದಾರೆ ಎಂದು ಬಚ್ಚೇಗೌಡ ಹೇಳಿದರು.
ನಾಯಕತ್ವ ಬಪದಲಾವಣೆ ಸಾಧ್ಯವೇ ಇಲ್ಲವೆ. ಅರುಣ್ ಜೈಟ್ಲಿ ಕೂಡ ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಅವರು ಹೇಳಿದರು.
ಗಣಿಗೆ ಸಚಿವ ನರೇಂದ್ರಸ್ವಾಮಿ
ಬೆಂಗಳೂರು: ಸಚಿವ ನರೇಂದ್ರ ಸ್ವಾಮಿ ಸೇರಿದಂತೆ ಇನ್ನಷ್ಟು ಶಾಸಕರು ಗಣಿಧಣಿಗಳ ಬೆಂಬಲಕ್ಕೆ ತೆರಳಿದ್ದಾರೆ.
ಶನಿವಾರ ಸಂಜೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ನರೇಂದ್ರ ಸ್ವಾಮಿಯವರೊಂದಿಗೆ ಶಾಸಕ ಆನಂದ್ ಮಹಾಮನಿ, ಶಂಕರಪಾಟೀಲ್ ಮುನೆಕೊಪ್ಪ ಗಣಿಧಣಿಗಳ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಈಗಾಗಲೇ ಸುಮಾರು ೩೬ಕ್ಕೂ ಹೆಚ್ಚು ಶಾಸಕರು ಹೈದರಾಬಾದ್‌ನ ಮೂರು ತಾರಾ ಹೋಟೆಲ್‌ಗಳಲ್ಲಿ ಗಣಿಧಣಿಗಳ ಉಪಚಾರದಲ್ಲಿ ತಂಗಿದ್ದಾರೆ. ಇನ್ನೊಂದು ತಂಡವನ್ನು ಗೋವಾಕ್ಕೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಗಣಿಧಣಿಗಳು ತಮ್ಮೊಂದಿಗೆ ಬಂದಿರುವ ಶಾಸಕರನ್ನು ಹೋಟೆಲ್‌ನಿಂದ ಹೊರಬರಲು ಅವಕಾಶ ಕೊಡದೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಆಚಾರ್ಯಗೆ ಮುಜರಾಯಿ ಜವಾಬ್ದಾರಿ
ಬೆಂಗಳೂರು: ಗೃಹ ಸಚಿವ ವಿ.ಎಸ್.ಆಚಾರ್ಯರಿಗೆ ಮುಜರಾಯಿ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.
ಸಂಪುಟ ಪುನರ್ರಚನೆಗೆ ಕೈಹಾಕಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ಬಳಿಯಿದ್ದ ಮುಜರಾಯಿ ಇಲಾಖೆಯನ್ನು ಹೆಚ್ಚುವರಿ ಜವಾಬ್ದಾರಿಯನ್ನಾಗಿ ವಹಿಸಲಾಗಿದೆ. ಮುಂದಿನ ಹಂತದಲ್ಲಿ ಶೋಭಾ ಕರಂದ್ಲಾಜೆ, ಬಸವರಾಜ ಬೋಮ್ಮಾಯಿಯವರ ಖಾತೆಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅದೇ ರೀತಿ ಗಣಿಧಣಿಗಳ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರ ಖಾತೆಗಳು ಬದಲಾವಣೆಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.