ಭಟ್ಕಳ, ನವೆಂಬರ್ 11:ನೆರೆಯಿಂದ ನೊಂದು ಬೆಂದವರಿಗೆ ಸರಕಾರದ ವತಿಯಿಂದ ಪುನರ್ವಸತಿ ಕಾರ್ಯಕ್ರಮವು ಮುಂದುವರೆದಿದ್ದು, ಜಿಲ್ಲೆಯಲ್ಲಿ ನವೆಂಬರ್ 13ರಂದು ಕಾರವಾರದಲ್ಲಿ ಚಾಲನೆ ದೊರೆಯಲಿದೆ ಎಂದು ಸಚಿವ ಕಾಗೇರಿ ಹೇಳಿದ್ದಾರೆ.
ನೆರೆ ಸಂತ್ರಸ್ತರಿಗಾಗಿ ಮನೆಯನ್ನು ನಿರ್ಮಿಸಲು ಜಾಗ ನಿಗದಿಗೊಳಿಸಲಾಗಿದೆ ಎಂದ ಅವರು ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಈಗಾಗಲೇ ಸಚಿವ ಆನಂದ ಆಸ್ನೋಟಿಕರ್, ಸಂಸದ ಅನಂತಕುಮಾರ ಹೆಗಡೆ ಹಾಗೂ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಬಿಜೆಪಿಯಲ್ಲಿನ ಬಿಕ್ಕಟ್ಟು ಪುನರ್ವಸತಿ ಕಾರ್ಯಕ್ರಮಕ್ಕೆ ಅಡ್ಡಿಯನ್ನೇನು ಉಂಟು ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.