ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕರಾವಳಿಯಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಟ್ರೈನ್ ಆರಂಭ. ಮಂಗಳೂರು ಟು ಮಡಗಾಂ ಮಾರ್ಗ.

ಕರಾವಳಿಯಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಟ್ರೈನ್ ಆರಂಭ. ಮಂಗಳೂರು ಟು ಮಡಗಾಂ ಮಾರ್ಗ.

Sun, 31 Dec 2023 05:38:56  Office Staff   SO News

ಕಾರವಾರ : ಇಂದಿನಿಂದ  ಮಂಗಳೂರಿನಿಂದ ಮಡಗಾಂವ್ ಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆಯಲ್ಲಿ ಆರಂಭಗೊಂಡ ರೈಲಿಗೆ ಇಂದು ಚಾಲನೆ ನೀಡಿದರು.
 
ಮಂಗಳೂರುಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ವಂದೇ ಭಾರತ್  ರೈಲು ಉಡುಪಿ-ಕಾರವಾರ -ಬಳಿಕ ಮಡಗಾಂವ ಗೆ ತೆರಳಲಿದೆ.  ಬಳಿಕ ಮಡಗಾಂವ ನಿಂದ ಪುನಃ ಮಂಗಳೂರಿಗೆ ಪ್ರಯಾಣಿಸಲಿದೆ.

ಈ ರೈಲು ಗಂಟೆಗೆ 120 ಕಿಮೀ ಗೂ ಅಧಿಕ ವೇಗದಲ್ಲಿ ಚಲಿಸಲಿದ್ದು, 8 ಕೋಚ್ ಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಏರ್ ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೇರ್ ಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಕೂಡಾ ಇದೆ. ಆನ್ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ,ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್ , ಸಿಸಿಟಿವಿಗಳು ಮತ್ತಿತರ ಆಧುನಿಕ ಸೌಲಭ್ಯಗಳು ಇವೆ.

ಗುರುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದೆ. ಈ ಎಕ್ಸಪ್ರೆಸ್ ಟ್ರೇನ್, ಪ್ರತಿದಿನ ಬೆಳಿಗ್ಗೆ 8-30ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು 9-48ಕ್ಕೆ ಉಡುಪಿ, 12-08ಕ್ಕೆ ಕಾರವಾರ ತಲುಪಿ ನಂತರ 1-15ಕ್ಕೆ ಮಡಗಾಂವ ತಲುಪಲಿದೆ. ಬಳಿಕ ಸಂಜೆ 6-10ಕ್ಕೆ ಮಡಗಾಂನಿಂದ ಪುನಃ ಹೊರಟು 6-55ಕ್ಕೆ ಕಾರವಾರ, ರಾತ್ರಿ 9-12ಕ್ಕೆ ಉಡುಪಿ ಹಾಗೂ ರಾತ್ರಿ 10-45ಕ್ಕೆ ಮಂಗಳೂರು ತಲುಪಲಿದೆ. 

ಗಂಟೆಗೆ 120 ಕಿಲೋಮೀಟರ್ ಕ್ರಮಿಸುವ ಈ ರೈಲು 8 ಕೋಚ್ಗಳನ್ನ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಏರ್ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೇರ್ ಗಳು ಇದೆ. ಆನ್ಬೊರ್ಡ್ ವೈಪೈ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂಚಾಲಿತ ಡೋರ್, ಸಿಸಿಟಿವಿ ಇದೆ. ಸುಮಾರು 319 ಕಿಲೋಮೀಟರ್ ದೂರವನ್ನ 4-35 ನಿಮಿಷಕ್ಕೆ ರೈಲು ತಲುಪಲಿದೆ.  ಮಂಗಳೂರು, ಉಡುಪಿ, ಕಾರವಾರ ಮತ್ತು ಮಡಗಾಂವ ನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.


Share: